ಸೌತ್ ನಟಿ ತಮನ್ನಾ ಭಾಟಿಯಾ (Tamanna Bhatia) ಸದ್ಯ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ʻಲಸ್ಟ್ ಸ್ಟೋರಿಸ್ 2′ ಟ್ರೈಲರ್ ರಿಲೀಸ್ ಬಳಿಕ ಮತ್ತೊಮ್ಮೆ ‘ಜೀ ಕರ್ದಾ’ (Jee Kardha) ವೆಬ್ ಸಿರೀಸ್ ಮೂಲಕ ನಟಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ತಮನ್ನಾ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇದು ತಮನ್ನಾನಾ ಅಂತಾ ಬಾಯಿ ಮೇಲೆ ಬೆರಳಿಡುವಷ್ಟು ಬದಲಾಗಿದ್ದಾರೆ.
‘ಜೀ ಕರ್ದಾ’ ವೆಬ್ ಸರಣಿಯ ಝಲಕ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ತಮನ್ನಾ ಟಾಪ್‌ಲೆಸ್ ಆಗಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಜೀ ಕರ್ದಾ’ ಏಳು ಬಾಲ್ಯ ಸ್ನೇಹಿತರ ಕಥೆಯಾಗಿದ್ದು, ತಮ್ಮ ಪ್ರೌಢಾವಸ್ಥೆಯ ಬಳಿಕ ಏನೆಲ್ಲಾ ಆಗುತ್ತದೆ ಅನ್ನೋದು ಒನ್‌ಲೈನ್ ಸ್ಟೋರಿಯಾಗಿದೆ. ತಮನ್ನಾ ಪ್ರೇಮಕ್ಕಾಗಿ ಪರದಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೋದರಳಿಯನ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್
ಅರುಣಿಮಾ ಶರ್ಮಾ ನಿರ್ದೇಶನದ ಈ ವೆಬ್ ಸಿರೀಸ್‌ನಲ್ಲಿ ತಮನ್ನಾ, ಆಶಿಮ್ ಗುಲಾಟಿ, ಹುಸೇನ್ ದಲಾಲ್, ಅನ್ಯಾ ಸಿಂಗ್ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ ವೆಬ್ ಸಿರೀಸ್‌ನ ಈ ಝಲಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚಿಗೆ ನಟಿ ತಮನ್ನಾ (Tamanna), ವಿಜಯ್ ವರ್ಮಾ (Vijay Varma) ಜೊತೆಗಿನ ಪ್ರೀತಿಯ ಬಗ್ಗೆ ಮೌನ ಮುರಿದಿದ್ದರು. ಅವರು ನನ್ನ ಖುಷಿಯ ಖಜಾನೆ ಅಂತಾ ನಟಿ ಮಾತನಾಡಿದ್ದರು. ವಿಜಯ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಹೇಳಿದ್ದರು. ಈ ಮೂಲಕ ಲವ್ ಬಗ್ಗೆ ನಟಿ ಸಮ್ಮತಿ ಸೂಚಿಸಿದ್ದರು.