ವಿಜಯ್ ವರ್ಮಾ ಮತ್ತು ತಮ್ಮ ನಡುವೆ ಅಂಥದ್ದು ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ ಎಂದಿದ್ದ ತಮನ್ನಾ (Tamanna) ಪದೇ ಪದೇ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಹೋಟೆಲ್ ಗೆ ಬಂದು ಒಂದೇ ಕಾರಿನಲ್ಲಿ ತೆರಳಿರುವ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಡೇಟಿಂಗ್ (Dating) ವಿಚಾರವನ್ನು ಮುಚ್ಚಿಟ್ಟು ಇವರು ಈ ರೀತಿ ಸುತ್ತಾಡುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ತಮ್ಮ ಮತ್ತು ವಿಜಯ್ ವರ್ಮಾ (Vijay Varma) ಡೇಟಿಂಗ್ ಸುದ್ದಿಯು ವೈರಲ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮನ್ನಾ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಲಿಪ್ ಲಾಕ್ ವೀಡಿಯೋ ವೈರಲ್ ಆದ ಮೇಲೆ ಸ್ಪಷ್ಟನೆ ನೀಡುವ ಕೆಲಸಕ್ಕೆ ಕೈ ಹಾಕಿದ್ದರು. ಇದನ್ನೂ ಓದಿ:ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್
ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದ ಅವರು, ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದು ಹೇಳಿದ್ದರು.
ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ (Love Story) ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿತ್ತು. ಇದೀಗ ಇಬ್ಬರೂ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.