Connect with us

Bengaluru City

ಯುವರತ್ನಕ್ಕೆ ಮಿಲ್ಕಿ ಬ್ಯೂಟಿಯ ಹೊಳಪು ಸಿಗೋ ಮುನ್ಸೂಚನೆ!

Published

on

ಬೆಂಗಳೂರು: ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ತಮನ್ನಾ ಮಿಂಚಲಾರಂಭಿಸಿದ ಘಳಿಗೆಯಿಂದಲೇ ಅವರು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆಂಬ ಮಾತೂ ಕೇಳಿ ಬರಲಾರಂಭಿಸಿತ್ತು. ಇದರ ಸುತ್ತ ಹರಡಿಕೊಂಡಿದ್ದ ರೂಮರುಗಳೂ ಸಾಕಷ್ಟಿವೆ. ಆದರೆ ಅದೇಕೋ ಈವರೆಗೂ ಅದಕ್ಕೆ ಕಾಲ ಮಾತ್ರ ಕೂಡಿ ಬಂದಿರಲಿಲ್ಲ. ಆದರೀಗ ಆ ಕಾಲ ಸನ್ನಿಹಿತವಾದ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಎರಡನೇ ಬಾರಿ ಯುವರತ್ನ ಚಿತ್ರದ ಮೂಲಕ ಒಂದಾಗಿದ್ದಾರೆ. ಇತ್ತೀಚೆಗಷ್ಟೇ ಈ ಟೈಟಲ್ಲು ಅನಾವರಣಗೊಂಡಿತ್ತು. ಆದರೆ ಆ ಕ್ಷಣದಿಂದಲೇ ಈ ಚಿತ್ರಕ್ಕೆ ಯಾರು ನಾಯಕಿಯಾಗಲಿದ್ದಾರೆಂಬ ಬಗ್ಗೆಯೂ ಕುತೂಹಲವಿತ್ತು. ಇದೀಗ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿಯಾಗಲಿದ್ದಾರೆಂಬ ರೂಮರ್ ಹರಡಿಕೊಂಡಿದೆ.

ತಮನ್ನಾ ಈ ಹಿಂದೆ ನಿಖಿಲ್ ಕುಮಾರ್ ನಟನೆಯ ಜಾಗ್ವಾರ್ ಚಿತ್ರದ ಹಾಡೊಂದರಲ್ಲಿ ಕುಣಿದಿದ್ದರು. ಪುನೀತ್ ರಾಜ್ ಕುಮಾರ್ ಅವರ ಜೊತೆ ಜಾಹೀರಾತಿನಲ್ಲಿಯೂ ನಟಿಸಿದ್ದರು. ಭಾರೀ ನಿರೀಕ್ಷೆ ಹುಟ್ಟಿಸಿರೋ ಕೆಜಿಎಫ್ ಚಿತ್ರದಲ್ಲಿನ ವಿಶೇಷ ಹಾಡೊಂದರಲ್ಲಿಯೂ ತಮನ್ನಾ ಕಾಣಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿಯೇ ಅವರು ತಾನು ಕನ್ನಡ ಚಿತ್ರದಲ್ಲಿ ನಟಿಸಲು ತಯಾರಿರೋದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಪುನೀತ್ ನಟನೆಯ ಯುವರತ್ನ ಚಿತ್ರಕ್ಕೆ ನಾಯಕಿಯಾಗಲಿದ್ದಾರೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *