ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷ ನವೀನ್ ಕುಮಾರ್ ತಮ್ಮ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25 ಜನರ ಮೇಲೆ ದೂರು ದಾಖಲಿಸಿದ್ದಾರೆ.
ಆದರೆ ನವೀನ್ ಕುಮಾರ್ ಅವರ ಆರೋಪವನ್ನು ನಿರಾಕರಿಸಿರುವ ಮಾಜಿ ಶಾಸಕ ಸುರೇಶ್‍ಗೌಡ, ತಾಲೂಕು ಪಂಚಾಯ್ತಿ ಅಧ್ಯಕ್ಷರು ನನ್ನ ವಿರುದ್ಧ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಾಕಿದ್ದಾರೆ. ಜೊತೆಗೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ತಮ್ಮ ಕಾರಿನ ಮೇಲೆ ತಾವೇ ಕಲ್ಲು ಎತ್ತಿಹಾಕಿ ಜಖಂಗೊಳಿಸಿಕೊಂಡು ನನ್ನ ಬೆಂಬಲಿಗರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಮಂಗಳವಾರ ರಾತ್ರಿ ನವೀನ್ ಅವರು ನಾಗಮಂಗಲದ ಬಿಜಿ ನಗರದಲ್ಲಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪತ್ನಿಯನ್ನು ಹೆರಿಗೆಗಾಗಿ ದಾಖಲಿಸಿದ್ದರು. ಆಸ್ಪತ್ರೆ ಬಳಿ ಕಾರು ನಿಲ್ಲಿಸಿ ಪತ್ನಿಗೆ ಊಟ ತರಲು ಹೊರಗೆ ತೆರಳಿದ್ದ ವೇಳೆ ಕಾರಿನ ಬಳಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ನವೀನ್ ಅವರ ಕಾರಿನ ಮೇಲೆ ಕಲ್ಲು ಎತ್ತಾಕಿ ಕಾರನ್ನು ಜಖಂಗೊಳಿಸಿದ್ದರು.
Advertisement
Advertisement
ನವೀನ್ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾಗಿದ್ದು, ಸುರೇಶ್ ಗೌಡರ ವಿರುದ್ಧ ಸಭೆಯೊಂದರಲ್ಲಿ ಮಾತನಾಡಿದಕ್ಕೆ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ ಸುರೇಶ್ ಗೌಡ ಬೆಂಬಲಿಗರಿಂದ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ನಾನು ಚಲುವರಾಯಸ್ವಾಮಿ ಮೇಲಿನ ಅಭಿಮಾನದಿಂದ ನಮ್ಮ ನಾಯಕರನ್ನು ಬಹಿರಂಗಸಭೆಯಲ್ಲಿ ಅಸಭ್ಯವಾಗಿ ನಿಂದಿಸಿದ್ದ ಸುರೇಶ್‍ಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದೆ. ಇದನ್ನು ನನ್ನ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ರು. ಅದನ್ನು ನೋಡಿ ಸುರೇಶ್‍ಗೌಡ ಬೆಂಬಲಿಗರು ನನಗೆ ಪ್ರಾಣ ಬೆದರಿಕೆ ಹಾಕಿ ಕಾರು ಜಖಂಗೊಳಿಸಿದ್ದಾರೆ ಎಂದು ನವೀನ್‍ಕುಮಾರ್ ಆರೋಪ ಮಾಡುತ್ತಿದ್ದಾರೆ.
ನನಗೆ ಮಾಜಿ ಶಾಸಕ ಸುರೇಶ್‍ಗೌಡ ಅವರ ಬಗ್ಗೆ ಗೌರವವಿದೆ. ಇನ್ನು ಮುಂದೆ ಯಾವುದೇ ಗಲಾಟೆ ಬೇಡ ಎಂದು ನವೀನ್ ಕುಮಾರ್ ಮನವಿ ಮಾಡುತ್ತಿದ್ದಾರೆ.