ಬೀದರ್: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ (Bribery) ಬೇಡಿಕೆಯಿಟ್ಟ ತಾಂತ್ರಿಕ ಸಹಾಯಕನನ್ನು (Technical Assistant) ಕೆಲಸದಿಂದ ವಜಾ ಮಾಡಲಾಗಿದೆ.
ಬಸವಕಲ್ಯಾಣ ತಾ.ಪಂ. ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಕೆಲಸದಿಂದ ವಜಾಗೊಳಿಸಿ ಬೀದರ್ (Bidar) ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಂ ಆದೇಶ ನೀಡಿದ್ದಾರೆ.
ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಎತ್ತುಗಳ ಸಮೇತ ತಾ.ಪಂ.ಗೆ ಬಂದು ರೈತರೊಬ್ಬರು ಆರೋಪ ಮಾಡಿದ್ದರು. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗಿರುವ ಹಿನ್ನೆಲೆ ಅಧಿಕಾರಿಗಳಿಂದ ವರದಿ ಪರಿಶೀಲನೆ ಮಾಡಲಾಗಿತ್ತು. ರೈತನ ಬಿಲ್ ಪಾವತಿ ಮಾಡದೆ ಮೇಲ್ನೋಟಕ್ಕೆ ಕರ್ತವ್ಯ ನಿರ್ಲಕ್ಷ್ಯ ತೊರಿದ್ದು ಕಂಡುಬಂದಿದೆ. ಹೀಗಾಗೀ ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಸೇವೆಯಿಂದ ವಜಾ ಮಾಡಲಾಗದೆ ಎಂದು ಜಿ.ಪಂ. ಸಿಇಒ ಆದೇಶಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ – ಜಿಲ್ಲಾ ಪ್ರವಾಸ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್
ನರೇಗಾ ಕಾಮಗಾರಿ ಬಿಲ್ ಪಾವತಿ ಮಾಡಲು ರೈತನ ಬಳಿ ಲಂಚ ಕೇಳಿದ್ದ ತಾಲೂಕು ಪಂಚಾಯತ್ ಅಧಿಕಾರಿಗೆ ಲಂಚ ಕೊಡಲು ಹಣವಿಲ್ಲದೆ ತನ್ನ 2 ಎತ್ತುಗಳನ್ನು ನೀಡಲು ರೈತ ಮುಂದಾಗಿದ್ದ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ರೈತ ಪ್ರಶಾಂತ್ ಬಿರಾದಾರ ಲಂಚ ರೂಪದಲ್ಲಿ ತನ್ನ 2 ಎತ್ತುಗಳನ್ನು ಕೊಡಲು ತಾ.ಪಂ. ಕಚೇರಿಗೆ ಬಂದಿದ್ದ. ಎತ್ತುಗಳ ಸಮೇತ ಬಂದಿದ್ದ ರೈತನನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದರು. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್