ಮೈಸೂರು: ಮತದಾನ ಬಹಿಷ್ಕಾರವನ್ನು ಮಾಡಿದ್ದ ಕೆಆರ್ ನಗರದ ಕುರುಬರ ಸಂಘದವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಒಪ್ಪಿ ಮತದಾನ ಬಹಿಷ್ಕಾರವನ್ನು ಹಿಂಪಡೆದಿದ್ದಾರೆ.
ಈ ಬಗ್ಗೆ ಕುರುಬರ ಸಂಘದ ಮುಖ್ಯಸ್ಥ ಶಿವಣ್ಣ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಈ ತಾಲೂಕಿಗೆ ಆಯ್ಕೆಯಾಗಿರುವ ಸಚಿವರಾದ ಸಾರಾ ಮಹೇಶ್ ಅವರು ಧೋರಣೆಯನ್ನು ತಮ್ಮ ಮಾಧ್ಯಮದ ಮುಂದೆ ಎರಡು ದಿನಗಳ ಹಿಂದೆ ಇಟ್ಟಿದ್ದೆವು. ಆ ಧೋರಣೆಯನ್ನು ನಮ್ಮ ತಾಲೂಕಿನ ಹಳ್ಳಿ ಯಾವ ಮಟ್ಟಿನಲ್ಲಿ ಇದೆ ಎಂಬುದು ಗೊತ್ತಿದೆ. ಆದರೆ ನಾವು ಬಹಿಷ್ಕಾರ ಮಾಡಿದ್ದು ನಿಜ. ಅದೇ ರೀತಿ ನಮ್ಮ ಸಂಘ ಮತ್ತು ಸಂಸ್ಥೆ ಸನ್ನದ್ಧರಾಗಿದ್ದೆವು. ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸಂಪರ್ಕ ಮಾಡಿ ನಮ್ಮ ಸಂಘದ ಪದಾಧಿಕಾರಿಗಳಿಗೆ ಕರೆ ಮಾಡಿ ಈ ಬಹಿಷ್ಕಾರ ಮಾಡಬೇಡಿ. ಚುನಾವಣೆ ಮುಗಿದ ಮೇಲೆ ಸಮಸ್ಯೆ ಬಗೆಹರಿಸುತ್ತೇನೆ. ಇಂದು ಮತದಾನ ಮಾಡಿ ಅಂತ ಕೇಳಿಕೊಂಡರು ಅಂದ್ರು.
ಅದೇ ರೀತಿ ಕಾಂಗ್ರೆಸ್ ಮುಖಂಡರಾದ ದೊಡ್ಡ ಶಾಮಗೌಡರು ಕೂಡ ನಮ್ಮ ಸಂಘವನ್ನು ಕರೆದು ಮನವೊಲಿಸುವ ಕೆಲಸವನ್ನು ಮಾಡಿದರು. ಸಚಿವ ಸಾ.ರಾ. ಮಹೇಶ್ ನಡವಳಿಕೆ ಬಗ್ಗೆ ಹಾಗೂ ಅವರು ನಮ್ಮನ್ನು ತುಂಬಾ ಕಡೆಗಣಿಸುತ್ತಿದ್ದಾರೆ ಎಂದು ಹೇಳಿದಾಗ ಎಲ್ಲಾ ವಿಷಯಗಳು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಭಿವೃದ್ಧಿ ಮಾಡಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಭರವಸೆ ಕೊಟ್ಟಿದ್ದಾರೆ. ಈ ಒಂದು ಆದೇಶದ ಮೇರೆಗೆ ಬಹಿಷ್ಕಾರವನ್ನು ವಾಪಸ್ಸು ಪಡೆದಿದ್ದೇವೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv