Bengaluru CityKarnatakaLatestLeading NewsMain Post

ಭಾರತದ ಅತಿ ಎತ್ತರದ ಏಕಶಿಲಾ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಬೆಂಗಳೂರಿನಲ್ಲಿ ಅಡಿಗಲ್ಲು

ಬೆಂಗಳೂರು: ಭಾರತದ ಅತಿ ಎತ್ತರದ ಏಕಶಿಲಾ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಅಡಿಗಲ್ಲು ಕಾರ್ಯಕ್ರಮ ಇಂದು ಬೆಂಗಳೂರಿನ ನಾಗವಾರದಲ್ಲಿ ನಡೆಯಿತು.

ಸರಿ ಸುಮಾರು 32 ವರ್ಷಗಳ ಹಿಂದೆ ಏಕಶಿಲಾ ವಿಗ್ರಹದ ಕೆತ್ತನೆ ಕಾರ್ಯಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ದೇವೇಗೌಡರು ಚಾಲನೆ ನೀಡಿದ್ದರು. ಸುಮಾರು 42 ಅಡಿ ಎತ್ತರದ ಏಕಶಿಲಾ ಪಂಚಮುಖಿ ನಾಗಲಿಂಗ ಗಣಪನ ವಿಗ್ರಹ ಇದಾಗಿದೆ. ಮೂರ್ತಿ ಕೆತ್ತನೆಗೆ ಮಾಲೂರಿನಿಂದ ಏಕಶಿಲೆ ತಂದು 40 ಕ್ಕೂ ಹೆಚ್ಚು ಶಿಲ್ಪಿಗಳು ಕೆತ್ತನೆ ಮಾಡಿದ್ದಾರೆ. ಇದನ್ನೂ ಓದಿ: ಆಂಧ್ರ ವ್ಯಕ್ತಿಯ ಕೈ ಹಿಡಿದ ಟರ್ಕಿ ಮಹಿಳೆ

ಈಗ ಗಣೇಶನ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಬರದಿಂದ ಸಾಗುತ್ತಿದ್ದು, ಇಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಅಡಿಗಲ್ಲು ಹಾಕುವ ಕಾರ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದ್ದಾರೆ.

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ನಾಗವಾರ ಗ್ರಾಮದ ನಾಗಲಿಂಗ ಗಣಪತಿ ದೇವಾಲಯ ಆವರಣದಲ್ಲಿ ಭಾರತದ ಅತಿ ಎತ್ತರದ ಗಣಪನ ಮೂರ್ತಿ ಕೆಲವೇ ತಿಂಗಳಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಅರುವನಹಳ್ಳಿ ಗ್ರಾಮದಿಂದ 42 ಅಡಿ ಎತ್ತರದ ಏಕಶಿಲೆಯನ್ನು ನಾಗವಾರದ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ 1990ರಲ್ಲಿ ಬೃಹತ್ ಲಾರಿಯ ಮೂಲಕ ತರಲಾಗಿತ್ತು. ಇದನ್ನೂ ಓದಿ: ಕೋವಿಡ್‌ ಲಸಿಕೆಯ 4ನೇ ಬೂಸ್ಟರ್‌ ಡೋಸ್‌ಗೆ ಇಸ್ರೇಲ್‌ ಅನುಮೋದನೆ

ಈಗ ಗಣಪತಿ ವಿಗ್ರಹ ಅಂತಿಮ ರೂಪ ಪಡೆದುಕೊಳ್ಳುತ್ತಿದೆ. ಮಹಾಬಲಿಪುರಂನ ಶಿಲ್ಪಿ ಅಂಬಿಕಾಪತಿ ನೇತೃತ್ವದಲ್ಲಿ ಗಣಪತಿಯ ಮೂರ್ತಿಯ ಕೆತ್ತನೆ ಕಾರ್ಯ ನಡೆದಿತ್ತು. ಏಕಶಿಲಾ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಸಿದ್ದಗಂಗಾ ಸ್ವಾಮೀಜಿ ಅವರು ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು.

Leave a Reply

Your email address will not be published.

Back to top button