ಮಂಡ್ಯ: ನಾವು ಮೋದಿಯವರ ಜೊತೆಗಿದ್ದೇವೆ. ಮಾತಿನಿಂದ ಏನು ಆಗಲ್ಲ, ಮೋದಿ ಅವರು ಮಾತನ್ನು ಕಾರ್ಯ ರೂಪಕ್ಕೆ ತಂದು ತೋರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಸ್ವಗ್ರಾಮ ಗುಡಿಗೆರೆಗೆ ಕಾಂಗ್ರೆಸ್ ನಾಯಕರು ಭೇಟಿ ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
Advertisement
Advertisement
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ 5 ಲಕ್ಷ, ಮನ್ಮುಲ್‍ನಿಂದ 3ಲಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿಂದ 2 ಲಕ್ಷ ಸೇರಿ ಒಟ್ಟಾರೆ 10 ಲಕ್ಷ ರೂ. ಹಣವನ್ನು ಯೋಧ ಗುರು ಕುಟುಂಬಕ್ಕೆ ನೀಡಲಾಯಿತು.
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡೂರಾವ್, ಮೋದಿಯವರು ಉಗ್ರರ ದಾಳಿಗೆ ಸರಿಯಾದ ಪ್ರತ್ಯುತ್ತರ ನೀಡಲಿದ್ದಾರೆ. ನಾವು ಮೋದಿಯವರ ಜೊತೆಗಿದ್ದೇವೆ. ಕಳೆದ 5 ವರ್ಷದಲ್ಲಿ ಈ ರೀತಿಯ ದಾಳಿಗಳು ಆಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಯೋಧರ ಹತ್ಯೆಯಾಗುತ್ತಿದೆ. ಮಾತಿನಿಂದ ಏನು ಆಗಲ್ಲ, ಮೋದಿ ಮಾಡಿ ತೋರಿಸಬೇಕು. ಪಾಕಿಸ್ತಾನವನ್ನ ಉಗ್ರ ರಾಷ್ಟ್ರ ಎಂದು ಘೋಷಿಸಿ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದರು.
Advertisement
ಮೈತ್ರಿ ಪಕ್ಷದಲ್ಲಿ ಸೀಟು ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ಸಂಬಂಧ ನಮ್ಮ ಸೀಟು ಅವರು ಕೇಳೋದು, ಅವರ ಸೀಟು ನಾವು ಕೇಳೋದು ಸಹಜ. ಸೀಟು ಹಂಚಿಕೆ ಬಗ್ಗೆ ಕುಳಿತು ಮಾತನಾಡಿ ತೀರ್ಮಾನಿಸಬೇಕಿದೆ. ಪರ್ಯಾಯ ವ್ಯವಸ್ಥೆ ಏನೂ ಇಲ್ಲ. ನಾನೂ ಕುಮಾರಸ್ವಾಮಿ ಅವರ ಹತ್ತಿರ ಮಾತನಾಡಿದ್ದೇನೆ. ಅವರು ಚೆನ್ನಾಗಿಯೇ ಮಾತಾಡಿದ್ದಾರೆ. ಮೈತ್ರಿಯಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು. ನಂತರ ಮೈತ್ರಿ ಕುರಿತು ಬಿಜೆಪಿ ಹೇಳಿಕೆ ವಿಚಾರ ಪ್ರಸ್ತಾಪಿಸಿ ಅವರು ಹಾಗೆ ಹೇಳಲೇ ಬೇಕು. ನಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv