ಬೆಂಗಳೂರು: ನಾನೊಬ್ಬ ದೃಢ ಕಾಂಗ್ರೆಸ್ಸಿಗ. ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿದ್ದಾರೆ.
ಬಿಜೆಪಿ ಸೇರ್ಪಡೆ ಕುರಿತಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಜೊತೆ ಚರ್ಚಿಸಿದ್ದಾರೆ ಎನ್ನುವ ವಿಚಾರಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಕೇವಲ ಟಿಆರ್‌ಪಿ, ವಾಟ್ಸಪ್, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಬೇಸರ ತಂದಿದೆ. ನಾನೊಬ್ಬ ದೃಢ ಕಾಂಗ್ರೆಸಿಗ. ನನ್ನ ಪಕ್ಷದ ವಿರೋಧಿಗಳೊಂದಿಗೆ ನಾನೆಂದು ಗುಪ್ತವಾಗಿ ಮಾತನಾಡಿಲ್ಲ ಮತ್ತು ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದವನೊಂದಿಗೆ ಯಾವ ಜನ್ಮದಲ್ಲಿಯೂ ಮಾತನಾಡಲಾರೆ ಎಂದು ಹೇಳಿದ್ದಾರೆ.
Advertisement
ಮಾಧ್ಯಮಗಳು ಕೇವಲ ಟಿ.ಆರ್.ಪಿಗಾಗಿ ವಾಟ್ಯಾಪ್ಪ್ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಬೇಸರ ತಂದಿದೆ. ನಾನೊಬ್ಬ ಧೃಡ ಕಾಂಗ್ರೆಸಿಗ. ನನ್ನ ಪಕ್ಷದ ವಿರೋಧಿಗಳೊಂದಿಗೆ ನಾನೆಂದು ಗುಪ್ತವಾಗಿ ಮಾತನಾಡಿಲ್ಲ ಮತ್ತು ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದವನೊಂದಿಗೆ ಯಾವ ಜನ್ಮದಲ್ಲಿಯೂ ಮಾತನಾಡಲಾರೆ. (2/2)
— Dr Sudhakar K (@mla_sudhakar) December 3, 2018
Advertisement
ಪ್ರೀತಿಯ ಜನರೇ, ನಾನು ಸರ್ವಿಕಲ್ ಡಿಸ್ಕ್ ಬಲ್ಜ್ ಇಂದ ಬಾಧೆಗೊಂಡಿದ್ದೇನೆ ಮತ್ತು ಕೆಲವು ದಿನಗಳಿಂದ ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಸಂದರ್ಭದಲ್ಲಿ ಕೆಲವು ಮಾಧ್ಯಮಗಳು ನಾನು ಜನಾರ್ದನ ರೆಡ್ಡಿಯವರನ್ನು ಭೇಟಿಯಾಗಿ ಬಿಜೆಪಿ ಸೇರುವವನಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವ ಶಾಸಕರ ಆಸೆಯನ್ನು ಹೈಕಮಾಂಡ್ ಈಡೇರಿಸದ ಹಿನ್ನೆಲೆಯಲ್ಲಿ ಸುಮಾರು 8 ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಆಡಿಯೋ ಒಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸುಧಾಕರ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಲು ಆರಂಭವಾಗಿತ್ತು. ಈಗ ಸುಧಾಕರ್ ತಮ್ಮ ಪ್ರತಿಕ್ರಿಯೆಯನ್ನು ತಿಳಿಸುವ ಮೂಲಕ ಎಲ್ಲ ಗಾಳಿ ಸುದ್ದಿಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಇದನ್ನೂ ಓದಿ: ರಾಜ್ಯದ ದೋಸ್ತಿ ಸರ್ಕಾರವೇ ಬೆಚ್ಚಿ ಬೀಳುವಂತಹ ಬೆಳವಣಿಗೆ – ಗುಪ್ತಚರ ಇಲಾಖೆ ನೀಡಿದ್ದ ಆಡಿಯೋ ಔಟ್