– ಪೊಲೀಸ್ರಿಗೆ ವಿಡಿಯೋ ಟ್ಯಾಗ್ ಮಾಡಿ ಕಂಪ್ಲೆಂಟ್
ಬೆಂಗಳೂರು: ಪೌರತ್ವ ಕಾಯ್ದೆ(ಸಿಎಎ) ಬೆಂಬಲಿಸುವಂತೆ ಕೋರಿ ಕಾಲೇಜ್ ಗೋಡೆ ಮೇಲೆ ಬ್ಯಾನರ್ ಹಾಕಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನಮಕಿ ನಡೆದಿದೆ.
ಬೆಂಗಳೂರಿನ ಕೋರಮಂಗಲ ಜ್ಯೋತಿ ನಿವಾಸ್ ಕಾಲೇಜ್ ಬಳಿ ಈ ಘಟನೆ ನಡೆದಿದೆ. ನಗರಾದ್ಯಂತ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸಿಎಎ ಪರ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜ್ ಮುಂಭಾದ ಗೋಡೆಗೆ ಸಿಎಎ ಬೆಂಬಲಿಸಿ ಅನ್ನೋ ಬ್ಯಾನರ್ ಹಾಕಿದ್ರು.
ಇದನ್ನು ನೋಡಿದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಲೇಜ್ ಗೋಡೆಗಳ ಮೇಲೆ ನೀವು ರಾಜಕೀಯ ಮಾಡುವುದಕ್ಕೆ ಬರಬೇಡಿ ಎಂದು ಬ್ಯಾನರ್ ತೆಗೆಯುವಂತೆ ಒತ್ತಾಯಿಸಿದ್ದಾರೆ.
ಆದರೆ ಕಾರ್ಯಕರ್ತರು ಬ್ಯಾನರ್ ತೆಗೆಯಲ್ಲ, ನಿಮ್ಮ ಕಾಲೇಜ್ ಆಡಳಿತ ಮಂಡಳಿ ಕರೆದುಕೊಂಡು ಬಂದು ಹೇಳಿಸಿ. ಆಗ ತೆಗೆಯುತ್ತೀವಿ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಈ ಗಲಾಟೆ ವಿಡಿಯೋ ಮತ್ತು ಮಾತಿನ ಚಕಮಕಿ ದೃಶ್ಯ ವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ನ್ಯಾಯ ಕೊಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.