ಮಂಡ್ಯ: ಕೆಎಸ್‍ಆರ್‍ಟಿಸಿ ಬಸ್ಸಿನ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ವಿದ್ಯಾರ್ಥಿನಿಗೆ ಬಸ್ಸಿನ ನಿರ್ವಾಹಕಿ ಮತ್ತು ಟಿಸಿ ಅವಾಜ್ ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ವಾಗ್ವಾದ ಮಾಡಿರುವ ವಿಡಿಯೋವನ್ನು ಬಸ್ಸಿನಲ್ಲಿದ್ದ ಯುವಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
Advertisement
ಕಾಲೇಜು ವಿದ್ಯಾರ್ಥಿನಿ ತರಗತಿ ಮುಗಿಸಿಕೊಂಡು ಮನೆಗೆ ಹೋಗಲು ಮೇಲುಕೋಟೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಕೆಲಹೊತ್ತಿನಲ್ಲಿ ಮೇಲುಕೋಟೆಯಿಂದ ಮಂಡ್ಯಕ್ಕೆ ಹೋಗುವ ಬಸ್ ಬಂದಿದ್ದು, ಅದರಲ್ಲಿ ಖಾಲಿ ಇದ್ದ ಸೀಟಿನಲ್ಲಿ ವಿದ್ಯಾರ್ಥಿನಿ ಕುಳಿತುಕೊಂಡಿದ್ದಾಳೆ.
Advertisement
Advertisement
ಈ ವೇಳೆ ಬಂದ ನಿರ್ವಾಹಕಿ ಟಿಕೆಟ್ ಪಡೆದವರಿಗೆ ಸೀಟು ಬಿಡಲು ಸೂಚಿಸಿದ್ದಾರೆ. ಆದರೆ ಇದಕ್ಕೆ ವಿದ್ಯಾರ್ಥಿನಿ ವಿರೋಧಿಸಿದ್ದಾರೆ. ನಾವು ಹಣ ಕೊಟ್ಟು ಪಾಸ್ ಮಾಡಿಸಿಕೊಂಡಿದ್ದೇವೆ. ನಮಗೂ ಸೀಟಿನಲ್ಲಿ ಕುಳಿತುಕೊಳ್ಳುವ ಹಕ್ಕಿದೆ ಅಂತಾ ವಾದ ಮಾಡಿದ್ದಾಳೆ.
Advertisement
ಗಲಾಟೆ ಕೇಳಿ ಬಸ್ಸಿನ ಬಳಿ ಬಂದ ನಿಲ್ದಾಣದ ಟಿಸಿ ಸರ್ಪಸೇನಾ ಕೂಡ ವಿದ್ಯಾರ್ಥಿನಿಗೆ ಅವಾಜ್ ಹಾಕಿದ್ದಾರೆ. ಯಾರಿಗೆ ಬೇಕಾದ್ರೂ ಹೇಳು, ಮೋದಿ ಬಂದ್ರು ಅಷ್ಟೇ ಅಂತಾ ಉಡಾಫೆ ಮಾತುಗಳನ್ನ ಮಾತನಾಡಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಕೆಳಗಿಳಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಎಲ್ಲ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.