ಮದ್ವೆ ಬಗ್ಗೆ ಮಾತಾಡಿ, ವಿಮಾನ ಏರಿದ ಮಲೈಕಾ ಅರೋರಾ

Public TV
1 Min Read
Malaika Arora 3

ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಜುನ್ ಕಪೂರ್ (Arjun Kapoor) ವಯಸ್ಸಿನ ಅಂತರದ ನಡುವೆಯೂ ಬಿಂದಾಸ್ ಆಗಿ ಬದುಕುತ್ತಿದ್ದಾರೆ. ಮದುವೆ ಆಗದೇ ಇದ್ದರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ, ಒಟ್ಟೊಟ್ಟಿಗೆ ಅನೇಕ ದೇಶಗಳನ್ನು ಸುತ್ತಿದ್ದಾರೆ. ಇದೀಗ ಇಬ್ಬರೂ ಮದುವೆ ಆಗುವ ಆಲೋಚನೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

Malaika Arora 1

ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲೈಕಾ, ‘ಈಗಾಗಲೇ ನಾನು ಪ್ರಿ ಹನಿಮೂನ್ ಹಂತ ತಲುಪಿದ್ದೇವೆ. ಮದುವೆ (Marriage) ಅನ್ನೋದು ವೈಯಕ್ತಿಕವಾದದ್ದು. ನಮಗೂ ಮದುವೆ ಆಗಬೇಕು ಅಂತ ಅನಿಸಿದೆ’ ಎಂದು ಹೇಳಿದ್ದರು. ಈ ಮಾತು ಸಖತ್ ವೈರಲ್ ಕೂಡ ಆಗಿತ್ತು. ಪ್ರಿ ಹನಿಮೂನ್ ಮುಗಿಸಿದವರು ಮದುವೆ ಹಂತಕ್ಕೂ ಬಂದಿದ್ದಾರೆ ಎಂದು ಕಾಲೆಳೆದಿದ್ದರು. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ ವಿಧಿವಶ

Malaika Arora

ಇತ್ತೀಚಿನ ದಿನಗಳಲ್ಲಿ ಮಲೈಕಾ ಮತ್ತು ಅರ್ಜುನ್ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿ ಬಂದವು. ಮದುವೆ ಆಗುತ್ತಾರೋ ಅಥವಾ ಇಲ್ಲವೋ  ಎನ್ನುವ ಕುರಿತಂತೆ ಚರ್ಚೆಯೂ ಆಗಿತ್ತು. ಮಲೈಕಾ ಅವರೇ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದೀಗ ಇಬ್ಬರೂ ವಿಮಾನ ಏರಿದ್ದಾರೆ. ಹಾಗಾಗಿ ಮದುವೆ ಶಾಪಿಂಗ್ ಮಾಡುವುದಕ್ಕಾಗಿ ಒಟ್ಟಾಗಿ ಹೋಗಿದ್ದಾರಾ ಎನ್ನುವ ಅನುಮಾನ ಮೂಡಿದೆ.

Share This Article