ಬೆಂಗಳೂರು: ಲವ್ ಜಿಹಾದ್(Love Jihad) ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದ್ದು, ಬಿಜೆಪಿ – ಕಾಂಗ್ರೆಸ್(BJP- Congress) ಮಧ್ಯೆ ಟಾಕ್ ವಾರ್ ಗೆ ಕಾರಣವಾಗಿದೆ. ರಾಷ್ಟ್ರೀಯ ಮಟ್ಟದಲ್ಲೂ ಕಟೀಲ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ನಳಿನ್ ಕುಮಾರ್ ಕಟೀಲ್ ಮಂಗಳೂರು ಬೂತ್ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕಟೀಲ್ ಹೇಳಿಕೆ ಫುಲ್ ಟ್ರೋಲ್ ಆಗ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗುತ್ತಿದೆ. ರಸ್ತೆ, ಮೋರಿಯಂತಹ ಅಭಿವೃದ್ಧಿ ಬಗ್ಗೆ ಮರೆತು ಲವ್ ಜಿಹಾದ್ ಬಗ್ಗೆ ಮಾತಾಡಿ ಅಂತ ಪಕ್ಷದ ಕಾರ್ಯಕರ್ತರಿಗೆ ನಳಿನ್ ಕುಮಾರ್ ಕಟೀಲ್ ಕೊಟ್ಟಿರೋ ಕರೆ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ.
ಕಟೀಲ್ ಅವರ ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಶಾಸಕ ಯು ಟಿ ಖಾದರ್, ಕಟೀಲ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿಯವರು ಹಿಂದುತ್ವ, ಲವ್ ಜಿಹಾದ್ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ಡಿಕೆಶಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನಾನು ಜನರ ಹಿತ ಕಾಯುವ ನಿಯತ್ತಿನ ನಾಯಿ – ಸಿಎಂ ಬೊಮ್ಮಾಯಿ
ಯ.ಟಿ ಖಾದರ್ ಮಾತಾಡಿ, ರಸ್ತೆ, ಗುಂಡಿ ಸರಿ ಮಾಡುವ ಅರ್ಹತೆ, ಯೋಗ್ಯತೆ ಇಲ್ಲ. ದ.ಕ ಜಿಲ್ಲೆಗೆ ಕುಚಲಕ್ಕಿ ತರಲು ಯೋಗ್ಯತೆ ಇಲ್ಲದ ಇವರು ಜನಪ್ರತಿನಿಧಿಗಳಾ? ಕಟೀಲ್ ಜಾತಿಧರ್ಮದ ಮೇಲೆ ಭಾಗ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಬಿಜೆಪಿ ಬಳಿ ಅಭಿವೃದ್ಧಿ ನೀಲನಕ್ಷೆಯೇ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ಸಹ ಟಾಂಗ್ ಕೊಟ್ಟಿದ್ದಾರೆ.
ಇತ್ತ ಕಟೀಲ್ ಅವರ ಹೇಳಿಕೆಯನ್ನು ಶಾಸಕ ಎಂ ಪಿ ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ. ಕಟೀಲ್ ಅವರ ಹೇಳಿಕೆ ಸರಿ ಇದೆ. ಲವ್ ಜಿಹಾದ್ ತಡೆಯುವುದು ನಮ್ಮ ಅಜೆಂಡಾ. ಅಭಿವೃದ್ಧಿಯೂ ಮಾಡುತ್ತಿದ್ದೇವೆ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಸಚಿವ ಆರ್ ಅಶೋಕ್, ಅಭಿವೃದ್ಧಿಯೇ ನಮ್ಮ ಮುಖ್ಯ ಅಜೆಂಡಾ, ಲವ್ ಜಿಹಾದ್ ಕೂಡಾ ಅಜೆಂಡಾ ಅಂತ ಡ್ಯಾಮೇಜ್ ಕಂಟ್ರೋಲ್ ಮಾಡುವ ಮಾತಾಡಿದ್ದಾರೆ.
ಇನ್ನು ಬಳ್ಳಾರಿಯಲ್ಲಿ ಕಟೀಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸಿಎಂ ಬೊಮ್ಮಾಯಿ, ಲವ್ ಜಿಹಾದ್ ಕಾನೂನು ತರುವ ಪ್ರಸ್ತಾಪ ಇಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುತ್ತಿದ್ದರೆ ಏನಾಗುತ್ತಿತ್ತು ? ಲವ್ ಜಿಹಾದ್, ಪಿಎಫ್‌ಐ ಬಗ್ಗೆ ರಾಜ್ಯಾದ್ಯಕ್ಷರಾದ ಶ್ರೀ @nalinkateel ಅವರು ಮಾತನಾಡಿದ್ದಿಷ್ಟು. pic.twitter.com/6HPSvrKhOb
— BJP Karnataka (@BJP4Karnataka) January 4, 2023
ತಮ್ಮ ಹೇಳಿಕೆಗೆ ಇಷ್ಟೆಲ್ಲಾ ಟೀಕೆ ಬರುತ್ತಿದ್ದರೂ ಅದನ್ನು ಸಮರ್ಥಿಸಿಕೊಳ್ಳುವ ಅಥವಾ ಸ್ಪಷ್ಟೀಕರಣ ಕೊಡುವ ಪ್ರಯತ್ನಕ್ಕೆ ನಳಿನ್ ಕುಮಾರ್ ಕಟೀಲ್ ಮುಂದಾಗಿಲ್ಲ.
ಎರಡು ದಿನ ಪ್ರವಾಸಕ್ಕಾಗಿ ಜೆ ಪಿನಡ್ಡಾ ಗುರುವಾರ ರಾಜ್ಯಕ್ಕೆ ಬರ್ತಿದ್ದಾರೆ. ನಡ್ಡಾ ಅವರಿಗೆ ಕಟೀಲ್ ಹೇಳಿಕೆ ಮುಜುಗರ ತರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಚುನಾವಣೆ ಸಮೀಪ ಕಾಂಗ್ರೆಸ್‌ಗೆ ಕಟೀಲ್ ಅವರು ಪ್ರಬಲ ಅಸ್ತ್ರವನ್ನೇ ಕೊಟ್ಟಿದ್ದಲ್ಲದೇ ತಾವೂ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k