ಕಾಬೂಲ್: ಅಫ್ಘಾನಿಸ್ತಾನದ (Afghanistan) ಎಲ್ಲಾ ಸ್ಥಳೀಯ ಹಾಗೂ ವಿದೇಶಿ ಸರ್ಕಾರೇತರ ಸಂಸ್ಥೆಗಳಿಗೆ (NGO) ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ತಾಲಿಬಾನ್ (Taliban) ಆದೇಶಿಸಿದೆ.
ಮಹಿಳೆಯರಿಗೆ ಇಸ್ಲಾಮಿಕ್ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಈ ನಿಯಮವನ್ನು ಕೆಲವರು ಪಾಲಿಸದ ಕಾರಣ, ಮಹಿಳಾ ಉದ್ಯೋಗಿಗಳಿಗೆ (Women Employees) ಕಚೇರಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ತಾಲಿಬಾನ್ ಸೂಚಿಸಿದೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್ ಏರ್‌ವೇಸ್‌ಗೆ 3 ಲಕ್ಷ ದಂಡ
Advertisement
Advertisement
ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದ ಬೆನ್ನಲ್ಲೇ ತಾಲಿಬಾನ್ ಮತ್ತೊಂದು ಆದೇಶ ಹೊರಡಿಸಿದೆ. ಇದರ ವಿರುದ್ಧ ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಜಾಗತಿಕವಾಗಿ ಖಂಡನೆ ಕೂಡ ವ್ಯಕ್ತವಾಗಿದೆ.
Advertisement
ವಿಶ್ವವಿದ್ಯಾನಿಲಯ ಶಿಕ್ಷಣದ ಮೇಲಿನ ನಿಷೇಧವನ್ನು ಪ್ರತಿಭಟಿಸುವ ಮಹಿಳೆಯರನ್ನು ಚದುರಿಸಲು ತಾಲಿಬಾನ್ ಭದ್ರತಾ ಪಡೆಗಳು ನೀರಿನ ಫಿರಂಗಿಯನ್ನು ಬಳಸಿದವು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಮಹಿಳೆಯರು ನಿಷೇಧದ ವಿರುದ್ಧ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು
Advertisement
ವಿವಿಗಳಲ್ಲಿ ಮಹಿಳೆಯರಿಗೆ ಶಿಕ್ಷಣ ನಿಷೇಧಿಸಿದ ತಾಲಿಬಾನ್ ಆದೇಶಕ್ಕೆ ಸೌದಿ ಅರೇಬಿಯಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.