ವಾಷಿಂಗ್ಟನ್: ಆಫ್ಘಾನ್ ಮಹಿಳೆಯರು ಹಿಜಬ್ ಧರಿಸುವ ಕುರಿತು ತಾಲಿಬಾನ್ ಹೊರಡಿಸಿರುವ ಆದೇಶಕ್ಕೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರ ಹಕ್ಕಿನ ವಿಚಾರವಾಗಿ ತಾಲಿಬಾನ್ ತೆಗೆದುಕೊಂಡಿರುವ ನಿರ್ಧಾರವು, ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಮೆರಿಕ ಎಚ್ಚರಿಸಿದೆ.
ಆಫ್ಘಾನಿಸ್ತಾನದ ಮಹಿಳೆಯರು ತಲೆಯಿಂದ ಕಾಲಿನವರೆಗೂ ಮುಚ್ಚುವಂತೆ ಹಿಜಬ್ ಧರಿಸಬೇಕೆಂದು ತಾಲಿಬಾನ್ ಹೊರಡಿಸಿರುವ ಆದೇಶವು ಮಹಿಳೆಯರ ಹಕ್ಕಿನ ಉಲ್ಲಂಘನೆ ಎಂದು ಆಫ್ಘಾನಿಸ್ತಾನದ ಯುನೈಟೆಡ್ ಸ್ಟೇಟ್ಸ್ ವಿಶೇಷ ಪ್ರತಿನಿಧಿ ಥಾಮಸ್ ವೆಸ್ಟ್ ಹೇಳಿದ್ದಾರೆ. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ
Advertisement
3/3 the Taliban’s policies toward women are an affront to human rights and will continue to negatively impact their relations with the international community.
— U.S. Special Representative Thomas West (@US4AfghanPeace) May 9, 2022
Advertisement
ಮಹಿಳೆಯರು ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ನಿರ್ಬಂಧಿಸುವ ತಾಲಿಬಾನ್‌ನ ಇತ್ತೀಚಿನ ನೀತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸಲು ನಾವು ಆಫ್ಘನ್ನರು ಮತ್ತು ಪ್ರಪಂಚದ ಸಹೋದ್ಯೋಗಿಗಳೊಂದಿಗೆ ಒಂದಾಗುತ್ತೇವೆ ಎಂದು ಥಾಮಸ್ ಟ್ವೀಟ್ ಮಾಡಿದ್ದಾರೆ.
Advertisement
ಶಿಕ್ಷಣ ಮತ್ತು ಕೆಲಸಕ್ಕೆ ಹೆಣ್ಣುಮಕ್ಕಳ ಪ್ರವೇಶದ ಮೇಲಿನ ನಿರಂತರ ನಿಷೇಧ, ಚಟುವಟಿಕೆಯ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ಗುರಿಯಾಗಿಸುವುದು ಸೇರಿದಂತೆ ತಾಲಿಬಾನ್‌ನ ಆಕ್ಷೇಪಾರ್ಹ ನಡೆಗೆ ಅಮೆರಿಕ ಟೀಕೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು
Advertisement
1/3 I join Afghans from across the country and colleagues worldwide in expressing deep concern over the Taliban’s latest policies that restrict women and girls’ rights. https://t.co/q0su88snCW
— U.S. Special Representative Thomas West (@US4AfghanPeace) May 9, 2022
ಮಹಿಳೆಯರ ಬಗೆಗಿನ ತಾಲಿಬಾನ್‌ನ ನೀತಿಗಳು ಮಾನವ ಹಕ್ಕುಗಳಿಗೆ ಅಪಚಾರವಾಗಿದೆ. ಇದರಿಂದ ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ತಾಲಿಬಾನ್ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಆಫ್ಘಾನಿಸ್ತಾನದ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚಿಕೊಳ್ಳುವಂತೆ ಬುರ್ಕಾವನ್ನು ಧರಿಸುವಂತೆ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ ಕುಟುಂಬದ ಪುರುಷ ಸದಸ್ಯನನ್ನು ಮೂರು ದಿನಗಳ ಕಾಲ ಜೈಲಿನಲ್ಲಿಡಲಾಗುವುದು ಎಂದು ತಾಲಿಬಾನ್ ಪರಿಶೀಲಿಸಿತ್ತು. ಇದನ್ನೂ ಓದಿ: ತಲೆಯಿಂದ ಕಾಲಿನವರೆಗೆ ದೇಹ ಮುಚ್ಚಿಕೊಳ್ಳಿ – ಅಫ್ಘಾನ್ ಮಹಿಳೆಯರಿಗೆ ತಾಲಿಬಾನ್ ಆದೇಶ
ತಾಲಿಬಾನ್ ತೀರ್ಪಿನ ಪ್ರಕಾರ, ಮಹಿಳೆ ಹಿಜಬ್ ಧರಿಸದಿದ್ದರೆ, ಮೊದಲು ಆಕೆಯ ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತದೆ. ಆಕೆ ಮತ್ತೆ ತಪ್ಪಿತಸ್ಥಳೆಂದು ಸಾಬೀತಾದರೆ ಆಕೆಯ ಮನೆಯ ಪುರುಷ ಸದಸ್ಯನನ್ನು ಕರೆಸಿ ಸಲಹೆ ನೀಡಲಾಗುವುದು. ಈ ತಪ್ಪು ಪುನರಾವರ್ತನೆಯಾದರೆ ಪುರುಷ ಸದಸ್ಯನನ್ನು ಮೂರು ದಿನಗಳವರೆಗೆ ಜೈಲಿನಲ್ಲಿಡಲಾಗುತ್ತದೆ ಎಂದು ಎಚ್ಚರಿಸಿತ್ತು.