ಕಾಬೂಲ್: ಅಧಿಕಾರಕ್ಕಾಗಿ ತಾಲಿಬಾನಿಗಳ ನಡುವೆ ಕಿತ್ತಾಟ, ಅಸಮಾಧಾನದ ನಡುವೆಯೇ ಹೊಸ ಸರ್ಕಾರದ ಘೋಷಣೆ ಆಗಿದೆ. ತಾಲಿಬಾನ್ ಸರ್ಕಾರದ ಹಂಗಾಮಿ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್, ಉಪಪ್ರಧಾನಿಯಾಗಿ ಮುಲ್ಲಾ ಬರಾದರ್ ನೇಮಕವಾಗಿದ್ದಾರೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹೆದ್ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ರಚನೆಯ ಮಾಹಿತಿಯನ್ನು ನೀಡಿದ್ದಾರೆ. ಎರಡನೇ ಉಪಪ್ರಧಾನಿಯಾಗಿ ಮುವಾಲ್ವಿ ಹನ್ನಾಪಿ, ರಕ್ಷಣಾ ಸಚಿವರಾಗಿ ಮುಲ್ಲಾ ಯಾಕೂಬ್, ಆಂತರಿಕ ಸಚಿವರಾಗಿ ಹಕ್ಕಾನಿ ನೆಟ್‍ವರ್ಕ್‍ನ ಅಂತಾರಾಷ್ಟ್ರೀಯ ಉಗ್ರ ಸಿರಾಜುದ್ದೀನ್ ಹಕ್ಕಾನಿ ಸೇರಿ 33 ಮಂದಿಯನ್ನು ನೇಮಕ ಮಾಡಲಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಎಫ್‍ಬಿಐ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
Advertisement
Advertisement
ತಾಲಿಬಾನ್‍ನ ಅತ್ಯುನ್ನತ ಮಂಡಳಿ `ರೆಹಬರಿ ಷುರಾ’ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಾಕ್ ಆಪೇಕ್ಷೆಯಂತೆ ಬರಾದಾರ್ ಹೆಸರನ್ನು ಪ್ರಧಾನಿ ಹುದ್ದೆಗೆ ಪರಿಗಣಿಸಿಲ್ಲ. ಜೊತೆಗೆ ಉಗ್ರರ ಸರ್ಕಾರದಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸಿಲ್ಲ. ಇದನ್ನೂ ಓದಿ: ಪತಿ, ಮಕ್ಕಳ ಮುಂದೆಯೇ 8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯ ಹತ್ಯೆಗೈದ್ರು!
Advertisement
Advertisement
ಸೆಪ್ಟೆಂಬರ್ 11ರಂದು ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. 2001 ಇದೇ ದಿನ ಅಮೆರಿಕ ಮೇಲೆ ಅಲ್‍ಕೈದಾ ದಾಳಿ ನಡೆಸಿತ್ತು. ಕಳೆದ ಶುಕ್ರವಾರ ನಡೆದ ಗದ್ದುಗೆ ಗಲಾಟೆಯಲ್ಲಿ ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಬರಾದಾರ್ ಮೇಲೆ ಹಕ್ಕಾನಿ ಗುಂಪು ಹಲ್ಲೆ ಮಾಡಿ ಗಾಯಗೊಳಿಸಿದೆ ಎಂದು ವರದಿಯಾಗಿತ್ತು. ಪರಿಸ್ಥಿತಿ ಮೀರಬಹುದು ಎಂದು ಅಂದಾಜಿಸಿದ ಪಾಕಿಸ್ತಾನದ ಐಎಸ್‍ಐ ಮುಖ್ಯಸ್ಥ ಫಯಾಜ್ ಹಮೀದ್ ಕೂಡಲೇ ಕಾಬೂಲ್‍ಗೆ ತೆರಳಿದ್ದರು. ಇದನ್ನೂ ಓದಿ: ಅಂದು ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ – ಇಂದು ಅಮೆರಿಕದ ವಿರುದ್ಧ ಸಿಟ್ಟು