ಕಾಬೂಲ್: ಮುಂದಿನ ವಾರ ಹೈಸ್ಕೂಲ್‍ಗಳನ್ನು ತೆರೆದಾಗ ಅಫ್ಘಾನಿಸ್ತಾನದ ಸುತ್ತಮುತ್ತಲಿನ ಹುಡುಗಿಯರಿಗೂ ಸಹ ಶಿಕ್ಷಣ ತರಬೇತಿ ನೀಡಲು ಅವಕಾಶವನ್ನು ನೀಡಲಾಗುತ್ತೆ ಎಂದು ಶಿಕ್ಷಣ ಅಧಿಕಾರಿ ಗುರುವಾರ ಹೇಳಿದ್ದಾರೆ.
ತಾಲಿಬಾನ್ ಸರ್ಕಾರ ಹುಡುಗಿಯರಿಗೆ ಮತ್ತು ಮಹಿಳೆಯರ ಶಿಕ್ಷಣಕ್ಕೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆಯೇ ಎಂಬ ಬಗ್ಗೆ ತಿಂಗಳುಗಳ ಅನಿಶ್ಚಿತತೆಯ ನಂತರ ಶಿಕ್ಷಣ ಸಚಿವಾಲಯದ ವಕ್ತಾರ ಅಜೀಜ್ ಅಹ್ಮದ್ ರಾಯಾನ್ ರಾಯಿಟಸ್ರ್ಗೆ ಎಲ್ಲದಕ್ಕೂ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇಲ್ಲ: ಸುಪ್ರೀಂಕೋರ್ಟ್
Advertisement
Advertisement
ಹುಡುಗಿಯರಿಗೆ ಶಿಕ್ಷಣ ಕುರಿತು ಸುದ್ದಿಗೋಷ್ಠಿ ನಡೆಸಿದ ಅಹ್ಮದ್, ಅಫ್ಘಾನಿಸ್ತಾನದಲ್ಲಿ ಮುಂದಿನ ವಾರ ತೆರೆಯುವ ಶಾಲೆಗಳಲ್ಲಿ ಓದಲು ಹುಡುಗರು ಮತ್ತು ಹುಡುಗಿಯರಿಗೆ ಅವಕಾಶವನ್ನು ನೀಡಲಾಗುತ್ತೆ. ಆದರೆ ಹೆಣ್ಣುಮಕ್ಕಳಿಗೆ ಕೆಲವು ಷರತ್ತುಗಳಿವೆ ಎಂದು ಹೇಳಿದ್ದಾರೆ.
Advertisement
Advertisement
ವಿದ್ಯಾರ್ಥಿನಿಗಳಿಗೆ ಪುರುಷರಿಂದ ಪ್ರತ್ಯೇಕವಾಗಿ ಮತ್ತು ಮಹಿಳಾ ಶಿಕ್ಷಕರಿಂದ ಮಾತ್ರ ಪಾಠವನ್ನು ಕಲಿಸಲಾಗುತ್ತದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಶಿಕ್ಷಕರ ಕೊರತೆಯಿದ್ದು, ಹಿರಿಯ ಪುರುಷ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಪಾಠವನ್ನು ಹೇಳಿಕೊಂಡಲು ಅವಕಾಶ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು