ಕಾಬೂಲ್: ಆಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿರುವ ಹೊತ್ತಿನಲ್ಲೇ ತಾಲಿಬಾನ್ ವಕ್ತಾರ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ್ದಾರೆ. ಈ ಕುರಿತು ಟಿವಿ ಸಂದರ್ಶನದಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ
Advertisement
"So YOUR daughters get an education because they do what you tell them."
Piers makes the point after the Taliban's spokesman Suhail Shaheen admits his daughters get an education, unlike many females in Afghanistan.@piersmorgan | @TalkTV | #piersmorganuncensored pic.twitter.com/qPtNTjQBhB
— Piers Morgan Uncensored (@PiersUncensored) May 10, 2022
Advertisement
ಅವರು ಹಿಜಾಬ್‌ಗೆ ಆದ್ಯತೆ ನೀಡುತ್ತಾರೆ. ನಾವು ನಮ್ಮ ಜನರನ್ನು ನಿರಾಕರಿಸಿಲ್ಲ ಎಂದು ಶಾಹೀನ್ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ದೂರದರ್ಶನ ವರದಿಗಾರರೊಬ್ಬರು ಸಂದರ್ಶನದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Advertisement
ಇದಕ್ಕೆ ಅನೇಕರು ಟೀಕೆ ಹಾಗೂ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸುಹೇಲ್ ಶಾಹೀನ್ ಅವರದ್ದು ಬೂಟಾಟಿಕೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜಕ್ಕೂ ಇದು ಬೂಟಾಟಿಕೆ. ತಾಲಿಬಾನ್‌ಗಳು ತಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಇತರರಿಗೆ ಶಿಕ್ಷಣವನ್ನು ನಿಷೇಧಿಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿ ಟೀಕಿಸಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್ ಘೋಷಣೆ
Advertisement
ಈ ವ್ಯಕ್ತಿಯ ಹೆಣ್ಣುಮಕ್ಕಳು ಹಿಜಬ್‌ಗೆ ಆದ್ಯತೆ ನೀಡಿ ಶಿಕ್ಷಣವನ್ನು ಪಡೆಯುತ್ತಾರೆ. ಈ ವ್ಯಕ್ತಿಯ ಒಬ್ಬ ಮಗಳು ಕತಾರಿ ಫುಟ್ಬಾಲ್ ತಂಡದಲ್ಲಿ ಆಡುತ್ತಾಳೆ. ಈ ವ್ಯಕ್ತಿಯ ಇನ್ನೊಬ್ಬ ಮಗಳಿಗೆ ಕತಾರಿ ಬಾಯ್‌ಫ್ರೆಂಡ್ ಇದ್ದಾನೆ. ಆಫ್ಘನ್ ಹುಡುಗಿಯರೂ ಹಿಜಬ್‌ಗೆ ಆದ್ಯತೆ ನೀಡುತ್ತಾರೆ. ಆದರೆ 6 ನೇ ತರಗತಿಯ ನಂತರ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರು ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಕುಟುಕಿದ್ದಾರೆ.