ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಅಲ್ಪಸಂಖ್ಯಾತ ಶಿಯಾ ಸಮುದಾಯದವರು ಹೆಚ್ಚಿರುವ ಪ್ರದೇಶದ ಮಸೀದಿ ಬಳಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡಿದ್ದು, 8 ಮಂದಿ ಸಾವಿಗೀಡಾಗಿರುವ ಘಟನೆ ನಡೆದಿದೆ. ದುರ್ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಅಧಿಕಾರಿ ತಿಳಿಸಿದ್ದಾರೆ.
ಕಾಬೂಲ್ ಪೊಲೀಸ್ ಮುಖ್ಯಸ್ಥರಾಗಿ ತಾಲಿಬಾನ್ ನೇಮಿಸಿರುವ ವಕ್ತಾರ ಖಾಲಿದ್ ಜದ್ರಾನ್ ಪ್ರಕಾರ, ಪಶ್ಚಿಮ ಕಾಬೂಲ್‌ನಲ್ಲಿ ಸರ್-ಇ ಕರೇಜ್ ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸುವಷ್ಟರಲ್ಲಿ ಸಾವಿನ ಸಂಖ್ಯೆ ಏರಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದೊಂದಿಗಿನ ಉದ್ವಿಗ್ನದ ಮಧ್ಯೆ ತೈವಾನ್ ರಕ್ಷಣಾ ಅಧಿಕಾರಿ ಶವವಾಗಿ ಪತ್ತೆ
Advertisement
Advertisement
ಶತ್ರುಗಳು ಪವಿತ್ರ ದಿನದಂದೇ ದಾಳಿ ನಡೆಸಿ ಅಮಾಯಕರನ್ನು ಕೊಂದಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜದ್ರಾನ್ ಮಾಹಿತಿ ನೀಡಿದ್ದಾರೆ.
Advertisement
ದಾಳಿ ಹೊಣೆಗಾರಿಕೆಯನ್ನು ಈವರೆಗೂ ಯಾರೂ ಹೊತ್ತಿಲ್ಲ. ಆದರೆ ಈ ಹಿಂದಿನ ದೊಡ್ಡ ಪ್ರಮಾಣದ ದಾಳಿಗಳಲ್ಲಿ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಕಷ್ಟದ ದಿನಗಳು ಹತ್ತಿರದಲ್ಲೇ ಇದೆ: ಪಾಕಿಸ್ತಾನ ಹಣಕಾಸು ಸಚಿವ ಎಚ್ಚರಿಕೆ
Advertisement
ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡ ಮೇಲೆ ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರ ಸ್ಥಾಪಿಸಿತು. ಇದಾದ ಬಳಿಕ ದೇಶಾದ್ಯಂತ ಮಸೀದಿಗಳು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಇಸ್ಲಾಮಿಕ್ ಸ್ಟೇಟ್ (ಐಎಸ್) ದಾಳಿ ನಡೆಸುತ್ತಿದೆ.
2014 ರಿಂದ ಅಫ್ಘಾನಿಸ್ತಾನದಲ್ಲಿ ಕಾರ್ಯಪ್ರವೃತ್ತವಾಗಿರುವ ಐಎಸ್, ದೇಶದ ತಾಲಿಬಾನ್ ಆಡಳಿತಗಾರರನ್ನು ಎದುರುಹಾಕಿಕೊಂಡಿದೆ. ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ದೇಶದ ಪೂರ್ವದಲ್ಲಿರುವ IS ಪ್ರಧಾನ ಕಚೇರಿ ಮೇಲೆ ದಾಳಿ ಕೂಡ ನಡೆಸಿತ್ತು.