ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ನಾಯಕರ ಜೊತೆ ಲೈವ್‍ನಲ್ಲಿ ಕುಳಿತು ಸಂದರ್ಶನ ನಡೆಸಿದ್ದ ಮಹಿಳಾ ಪತ್ರಕರ್ತೆ ತಾಲಿಬಾನಿಗರಿಗೆ ಹೆದರಿ ದೇಶವನ್ನೇ ತೊರೆದಿದ್ದಾರೆ.
ಟೋಟೋ ನ್ಯೂಸ್ ಚಾನೆಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಹೆಸ್ತಾ ಅರ್ಗಾಂಡ್(24) ಆಗಸ್ಟ್ 17ರಂದು ತಾಲಿಬಾನ್ ನಾಯಕನ ಜೊತೆ ನೇರಪ್ರಸಾರದಲ್ಲಿ ಕುಳಿತು ಸಂದರ್ಶನ ನಡೆಸಿದ್ದರು. ಇದನ್ನೂ ಓದಿ:ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು
Advertisement
Advertisement
ವೃತ್ತಿ ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಬೆಹೆಸ್ತಾ ಅರ್ಗಾಂಡ್ 9ನೇ ತರಗತಿಯಲ್ಲಿ ಓದುತ್ತಿಗಲಿಂದಲೂ ಪತ್ರಕರ್ತೆಯಾಗುವ ಕನಸ್ಸನ್ನು ಹೊಂದಿದ್ದರು. ಆದರೆ ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಪತ್ರಕರ್ತರು ಹಾಗೂ ಅಲ್ಲಿನ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಭಯಭೀತರಾಗಿ ಬೆಹೆಸ್ತಾ ಅರ್ಗಾಂಡ್ ದೇಶ ತೊರೆದಿದ್ದಾರೆ. ಇದನ್ನೂ ಓದಿ:ಲಾರಿ ರಿಪೇರಿ ಮಾಡುತ್ತಿದ್ದವರಿಗೆ ಪಿಕಪ್ ಡಿಕ್ಕಿ- ಮೂವರು ಸಾವು
Advertisement
NIMA WORAZ: #Kabul Situation Discussed [Pashto]
In this program, host Beheshta Arghand interviews Mawlawi Abdulhaq Hemad, a close member of the Taliban’s media team, about Kabul’s situation and house-to-house searches in the city. https://t.co/P11zbvxGQC pic.twitter.com/Pk95F54xGr
— TOLOnews (@TOLOnews) August 17, 2021
Advertisement
ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ದೇಶವನ್ನು ತೊರೆದಿದ್ದೇನೆ ಕಾರಣ ಲಕ್ಷಾಂತರ ಜನರಂತೆ ನಾನು ಕೂಡ ತಾಲಿಬಾನಿಗರಿಗೆ ಹೆದರುತ್ತೇನೆ. ಹೀಗಾಗಿ ದೇಶ ಬಿಟ್ಟು ಹೋಗುತ್ತಿದ್ದೇನೆ. ಒಂದು ವೇಳೆ ತಾಲಿಬಾನಿಗರು ತಾವು ನೀಡಿದ ಭರವಸೆಯಂತೆಯೇ ನಡೆದುಕೊಂಡರೆ ಹಾಗೂ ದೇಶದ ಪರಿಸ್ಥಿತಿ ಸುಧಾರಿಸಿದರೆ, ನಾನು ಪುನಃ ದೇಶಕ್ಕೆ ಮರಳುತ್ತೇನೆ ಎಂದಿದ್ದಾರೆ.