ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿಯಲ್ಲಿ ರಾಜತಾಂತ್ರಿಕರ ಹತ್ಯೆಗೆ ಮುಂದಾಗಿದ್ದ ಐಸಿಸ್ ಉಗ್ರನನ್ನು (ISIS Terrorist) ತಾಲಿಬಾನ್ (Taliban) ಪಡೆ ಹತ್ಯೆ ಮಾಡಿದೆ.
ತಾಲಿಬಾನ್ ಪಡೆಗಳು ಕಾರ್ಯಾಚರಣೆ ನಡೆಸಿ ಐಸಿಸ್‌ನ ಗುಪ್ತಚರ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಕ್ವಾರಿ ಫತೇಹ್‌ನನ್ನು ಹತ್ಯೆ ಮಾಡಿದೆ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ – ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು
ರಾಜತಾಂತ್ರಿಕರು, ಮಸೀದಿಗಳ ಮೇಲಿನ ದಾಳಿಗೆ ಕಾಬೂಲ್‌ನಲ್ಲಿ ಫತೇಹ್ ಸಂಚು ರೂಪಿಸಿದ್ದ. ಈ ಸಂಬಂಧದ ಕಾರ್ಯಾಚರಣೆಗಳ ಮಾಸ್ಟರ್ ಮೈಂಡ್ ಈತನೇ ಆಗಿದ್ದ ಎಂದು ಮುಜಾಹಿದ್ ಹೇಳಿದ್ದಾರೆ.
ತಾಲಿಬಾನ್ ಆಡಳಿತಕ್ಕೆ ಐಸಿಎಸ್ ಅತಿದೊಡ್ಡ ಭದ್ರತಾ ಸವಾಲಾಗಿದೆ. ವಿದೇಶಿಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಎರಡೂ ಗುಂಪುಗಳು ಕಠಿಣವಾದ ಸುನ್ನಿ ಇಸ್ಲಾಮಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್
ಈ ಹಿಂದೆ ಕಾಬೂಲ್‌ನ ಅನೇಕ ಕಡೆಗಳಲ್ಲಿ ಐಸಿಸ್ ದಾಳಿಗಳನ್ನು ನಡೆಸಿದೆ. ದಾಳಿಯಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಆತ್ಮಾಹುತಿ ದಾಳಿಗಳ ವಿಚಾರವಾಗಿ ಐಸಿಸ್ ವಿರುದ್ಧ ತಾಲಿಬಾನ್ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದೆ.