ಕಾಬೂಲ್: ರಷ್ಯಾ ಹಾಗೂ ಉಕ್ರೇನ್ ದೇಶಗಳು ತಮ್ಮ ನಡುವಿನ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ತಾಲಿಬಾನ್ ಸಲಹೆ ನೀಡಿದೆ.
ಸಂವಾದ ಮತ್ತು ಶಾಂತಿಯುತ ವಿಧಾನಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು. ಹಿಂಸಾಚಾರವನ್ನು ತೀವ್ರಗೊಳಿಸುವ ನಿಲುವು ತೆಗೆದುಕೊಳ್ಳುವುದನ್ನು ಎಲ್ಲಾ ದೇಶಗಳು ತ್ಯಜಿಸಬೇಕಾಗಿದೆ ಎಂದು ತಾಲಿಬಾನ್ ಕರೆ ನೀಡಿದೆ. ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ
Advertisement
Advertisement
ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ ನಿಕಟವಾಗಿ ಗಮನಿಸುತ್ತಿದೆ. ನಾಗರಿಕರ ಸಾವು-ನೋವುಗಳ ಸಾಧ್ಯತೆಗಳ ಬಗ್ಗೆ ಕಳವಳ ಇದೆ. ಎರಡೂ ರಾಷ್ಟ್ರಗಳು ಸಂಯಮದಿಂದ ಇರುವುದು ಒಳಿತು ಎಂದು ತಾಲಿಬಾನ್ ತಿಳಿಸಿದೆ.
Advertisement
ಅಫ್ಘಾನ್ ವಿದ್ಯಾರ್ಥಿಗಳು ಮತ್ತು ಉಕ್ರೇನ್‌ನಲ್ಲಿರುವ ವಲಸಿಗರ ಸುರಕ್ಷತೆಗಾಗಿ ಉಕ್ರೇನ್ ಮತ್ತು ರಷ್ಯಾ ದೇಶಗಳಿಗೆ ತಾಲಿಬಾನ್ ಮನವಿ ಮಾಡಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್ ಸೇನೆ
Advertisement
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧದ ಯುಎನ್‌ಎಸ್‌ಸಿ ನಿರ್ಣಯದಿಂದ ಸಂಯುಕ್ತ ಅರಬ್ ಒಕ್ಕೂಟ (ಯುಎಇ) ಕೂಡ ದೂರ ಉಳಿದಿದೆ. ಆದರೆ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಮಗಳಿಂದ ವಾಯ್ಸ್ ಮೆಸೇಜ್- ಪೋಷಕರಲ್ಲಿ ಆತಂಕ