ವಾಷಿಂಗ್ಟನ್: ಅಲ್‍ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕಿಡಿಕಾರಿದ್ದಾರೆ.
ಅಫ್ಗಾನಿಸ್ತಾನದಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಆಯ್ಮಾನ್ ಅಲ್ ಝವಾಹಿರಿಯನ್ನು ಹತ್ಯೆ ಮಾಡಲಾಗಿದೆ. ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಆಯ್ಮಾನ್ ಅಲ್ ಝವಾಹಿರಿ, ಒಸಾಮಾ ಬಿಲ್ ಲಾಡೆನ್ ನಂತರದಲ್ಲಿ ಅಲ್‍ಖೈದಾ ಮುಖ್ಯಸ್ಥನಾಗಿದ್ದ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ದಾಳಿಯ ಪ್ರಮುಖ ಶಂಕಿತ ಸಂಚುಕೋರನೂ ಆಗಿದ್ದನು. ಜೊತೆಗೆ ಜಾಗತಿಕ ಭಯೋತ್ಪಾದನಾ ಜಾಲದ ಪ್ರಮುಖ ಆದರ್ಶವಾದಿಯಾಗಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್
Advertisement
Advertisement
ಈ ಹಿನ್ನೆಲೆ ಆಂಟೋನಿ ಬ್ಲಿಂಕೆನ್ ಅಸಮಾಧಾನ ವ್ಯಕ್ತಪಡಿಸಿದ್ದು, ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದವನ್ನು ‘ತೀವ್ರವಾಗಿ’ ಉಲ್ಲಂಘಿಸಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
Advertisement
Advertisement
ತಾಲಿಬಾನ್ ಅವರು ತಮ್ಮ ಒಪ್ಪಂದಗಳಿಗೆ ಬದ್ಧವಾಗಿರಲು ಅಸಮರ್ಥವಾಗಿದೆ. ಈ ಹಿನ್ನೆಲೆ ನಾವು ಅಫ್ಘಾನ್ ಜನರನ್ನು ಮಾನವೀಯ ನೆರವಿನೊಂದಿಗೆ ಬೆಂಬಲಿಸುವುದನ್ನು ಮುಂದುವರಿಸುತ್ತೇವೆ. ಅವರ ಮಾನವ ಹಕ್ಕುಗಳ ರಕ್ಷಣೆಗಾಗಿ, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ರಕ್ಷಣೆಗಾಗಿ ಪ್ರತಿಪಾದಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಲಸಿನ ಹಣ್ಣಿಗಾಗಿ ಗಜರಾಜನ ಸರ್ಕಸ್ – ಕೊನೆಗೆ ಏನಾಯ್ತು ನೋಡಿ