ಕಾಬೂಲ್: ಅಘ್ಘಾನಿಸ್ತಾನದಲ್ಲಿ ಇಂದು ತಾಲಿಬಾನ್ ಸರ್ಕಾರ ರಚನೆಯಾಗುವ ಸಾಧ್ಯತೆಯಿದ್ದು, ಈ ಮೂಲಕ ಅಫ್ಘಾನ್ ವಶಪಡಿಸಿಕೊಂಡ ಎರಡು ವಾರಗಳ ಬಳಿಕ ಆಡಳಿತ ಆರಂಭಿಸುವ ನಿರೀಕ್ಷೆ ಇದೆ.
ಇಂದು ತಾಲಿಬಾನ್ ಮುಖ್ಯಸ್ಥರಿಂದ ಅಧಿಕೃತ ಘೋಷಣೆ ಸಾಧ್ಯತೆ ಇದ್ದು, ನಿನ್ನೆಯೇ ಘೋಷಣೆಯಾಗಬೇಕಿದ್ದ ಸರ್ಕಾರ ರಚನೆ ಕಡೆಯ ಕ್ಷಣದಲ್ಲಿ ತಾಲಿಬಾನ್ ರದ್ದುಗೊಳಿಸಿತ್ತು. ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಪ್ರಧಾನಿ ಹುದ್ದೆಗೆ ಹೆಸರು ಕೇಳಿಬರುತ್ತಿದ್ದು, ಅಫ್ಘಾನ್ ನಲ್ಲಿ ಇರಾನ್ ಮಾದರಿಯ ಅಧ್ಯಕ್ಷೀಯ ಸರ್ಕಾರದ ರಚನೆ ಚಿಂತನೆ ನಡೆದಿದೆ. ಇದನ್ನೂ ಓದಿ: ಪಂಜ್‍ಶೀರ್ ವಶಕ್ಕೆ ಪಡೆದ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು!
ಅಫ್ಘಾನ್ ಅಧ್ಯಕ್ಷರಾಗಲು ತಾಲಿಬಾನ್ ಸರ್ವೋಚ್ಚ ನಾಯಕ ಮುಲ್ಲಾ ಹೆಬತುಲ್ಲಾಹ್ ಅಖುನ್ದಝದ ಸಿದ್ಧರಾಗಿದ್ದು, ಈ ನಿರ್ಧಾರವನ್ನು ಕೈಗೊಳ್ಳಲು ದೋಹಾ ತಾಲಿಬಾನ್ ನಾಯಕರು ನಿರ್ಣಾಯಕ ಪಾತ್ರವಹಿಸಲಿದ್ದಾರೆ. ತಾಲಿಬಾನ್ ಸರ್ಕಾರದಲ್ಲಿ ಶೇ.80ರಷ್ಟು ಪ್ರಾತಿನಿಧ್ಯ ಹೊಂದುವ ನಿರೀಕ್ಷೆ ಇದ್ದು, ಸರ್ಕಾರದಲ್ಲಿ ಮಹಿಳೆಯರ ಪಾತ್ರ ಅನುಮಾನ, ಮಹಿಳೆಯರಿಗೆ ಸರ್ಕಾರದಲ್ಲಿ ಸ್ಥಾನ ಮಾನ ನೀಡದಿರಲು ನಿರ್ಧಾರ ಕೈಗೊಂಡಿದೆ.
ಈಗಾಗಲೇ ಸಂವಿಧಾನವನ್ನು ರಚನೆ ಮಾಡಿರುವ ತಾಲಿಬಾನ್ ಸರ್ಕಾರ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಧ್ವಜದ ಬಗ್ಗೆ ನಿರ್ಧಾರ ಮಾಡಿದೆ. ಈಗಾಗಲೇ ಪೊಲೀಸ್ ಮುಖ್ಯಸ್ಥರು, ರಾಜ್ಯಪಾಲರ ಆಯ್ಕೆ ಮಾಡಿರುವ ತಾಲಿಬಾನ್ ನಾಯಕರು, ಇಂದು ಸರ್ಕಾರದ ಘೋಷಣೆ ಮಾಡುವ ನಿರೀಕ್ಷೆ ಇದ್ದು, ಅಫ್ಘಾನ್ ವಶಪಡಿಸಿಕೊಂಡ ಎರಡು ವಾರಗಳ ಬಳಿಕ ಅಫ್ಘಾನ್ ನಲ್ಲಿ ತಾಲಿಬಾನ್ ಆಡಳಿತ ಆರಂಭಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು