ಜಗತ್ತಿನಲ್ಲೇ ಮೊದಲ ರಾಷ್ಟ್ರ – ತಾಲಿಬಾನ್‌ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಚೀನಾ

Public TV
1 Min Read
taliban china ambassador

ಕಾಬೂಲ್: ತಾಲಿಬಾನ್ (Taliban) ಅಫ್ಘಾನಿಸ್ತಾನಕ್ಕೆ (Afghanistan) ಚೀನಾದ ಹೊಸ ರಾಯಭಾರಿಯನ್ನು (China Ambassador) ಸ್ವಾಗತಿಸಿದೆ. ತಾಲಿಬಾನ್‌ ಆಡಳಿತದ ರಾಷ್ಟ್ರಕ್ಕೆ ರಾಯಭಾರಿ ನೇಮಿಸಿದ ಜಗತ್ತಿನ ಮೊದಲ ರಾಷ್ಟ್ರವಾಗಿ ಚೀನಾ ಹೊರಹೊಮ್ಮಿದೆ.

2021 ರಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್‌ಗೆ ರಾಯಭಾರಿಯೊಬ್ಬರಿಗೆ ಇಂತಹ ಅದ್ದೂರಿ ಸ್ವಾಗತ ನೀಡಿರುವುದು ಇದೇ ಮೊದಲು. ಹೊಸ ರಾಯಭಾರಿಯ ಆಗಮನವು ಇತರ ರಾಷ್ಟ್ರಗಳು ಮುಂದೆ ಬರಲು ಮತ್ತು ತಾಲಿಬಾನ್ ನೇತೃತ್ವದ ಸರ್ಕಾರದೊಂದಿಗೆ ಸಂಬಂಧ ಸ್ಥಾಪಿಸುವ ಸಂಕೇತವಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

taliban China ambassador 1

ಚೀನಾ ರಾಯಭಾರಿ ಝಾವೋ ಅವರಿಗೆ ಅಫ್ಘಾನ್ ಸೈನಿಕರು ಸ್ವಾಗತ ಕೋರಿದರು. ಆಡಳಿತದ ಮುಖ್ಯಸ್ಥರಾದ ಮೊಹಮ್ಮದ್ ಹಸನ್ ಅಖುಂಡ್ ಮತ್ತು ವಿದೇಶಾಂಗ ಸಚಿವ ಮುತಾಕಿ ಸೇರಿದಂತೆ ಉನ್ನತ ಶ್ರೇಣಿಯ ತಾಲಿಬಾನ್ ಅಧಿಕಾರಿಗಳನ್ನು ರಾಯಭಾರಿ ಭೇಟಿ ಮಾಡಿದರು.

ಚೀನಾ ಮತ್ತು ಅಫ್ಘಾನಿಸ್ತಾನದ ನಡುವೆ ಮಾತುಕತೆ, ಸಹಕಾರವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಫ್ಘಾನಿಸ್ತಾನದ ಬಗ್ಗೆ ಚೀನಾದ ನೀತಿ ಸ್ಪಷ್ಟ ಮತ್ತು ಸ್ಥಿರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?

ತಾಲಿಬಾನ್ ಆಫ್ಘಾನಿಸ್ತಾನದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಹೆಣಗಾಡುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ದೇಶಕ್ಕೆ ಹಣಕಾಸಿನ ನೆರವು ಸ್ಥಗಿತಗೊಳಿಸಿವೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article