ಕಾಬೂಲ್: ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಬ್ಬರನ್ನು ಸಾರ್ಜಜನಿಕವಾಗಿ ಕ್ರೀಡಾಂಗಣದಲ್ಲಿ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ ಶಿಕ್ಷೆ ನೀಡಿದ ಘಟನೆ ಅಫ್ಘಾನಿಸ್ತಾನದಲ್ಲಿ (Afghanistan) ನಡೆದಿದೆ.
ಸಯ್ಯದ್ ಜಮಾಲ್ ಮತ್ತು ಗುಲ್ ಖಾನ್ ಶಿಕ್ಷೆಗೆ ಗುರಿಯಾದವರು. ಸೆಪ್ಟೆಂಬರ್ 2017 ಮತ್ತು ಜನವರಿ 202ರಲ್ಲಿ ನಡೆದ 2 ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಇವರಿಬ್ಬರನ್ನು ದೋಷಿ ಎಂದು ತಾಲಿಬಾನ್ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾಲಿಬಾನ್ ನಾಯಕ ಹೈಬತುಲ್ಲಾ ಅಖುಂದ್‌ಜಾದಾ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆದೇಶ ನೀಡಿದ್ದರು.
Advertisement
Advertisement
ಇಬ್ಬರು ಅಪರಾಧಿಗಳನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ಘಜ್ನಿ ನಗರದ ಅಲಿ ಲಲಾ ಪ್ರದೇಶದಲ್ಲಿರುವ ಫುಟ್ಬಾಲ್ ಕ್ರೀಡಾಂಗಣಕ್ಕೆ ಕರೆ ತರಲಾಯಿತು. ಈ ವೇಳೆ ಕ್ರೀಡಾಂಗಣದ ಸುತ್ತ ಸಾವಿರಾರು ಮಂದಿ ಜಮಾಯಿಸಿದ್ದರು. ಒಬ್ಬನ ತಲೆಗೆ 8, ಮತ್ತೊಬ್ಬನ ತಲೆಗೆ 7 ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಲಾಯಿತು. ಇದನ್ನೂ ಓದಿ: ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ- ಬಸ್ ನದಿಗೆ ಉರುಳಿ ಇಬ್ಬರ ದುರ್ಮರಣ
Advertisement
ಕುಟುಂಬಸ್ಥರ ಮನವಿಗೆ ಡೋಂಟ್ ಕೇರ್: ಮರಣದಂಡನೆ ಶಿಕ್ಷೆ ನೀಡುವುದಕ್ಕೂ ಮುನ್ನ ಅಪರಾಧಿಗಳ ಕುಟುಂಬಸ್ಥರು ಬಂದು ವಿನಾಯ್ತಿ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಕ್ಯಾರೇ ಎನ್ನದೇ ಗುಂಡು ಹಾರಿಸಿ ಕೊಲ್ಲಲಾಯಿತು. ಒಟ್ಟಿನಲ್ಲಿ ಈ ಮೂಲಕ ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್‌ನ (Taliban) ಷರಿಯಾ ವ್ಯವಸ್ಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.