– ಯುದ್ಧ ಮುಂದುವರಿಯಲಿದೆ ಎಂದ ಸಾಲೇಹ
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನಿಗಳಿಗೆ ಪಂಜ್‍ಶೀರ್ ಬಿಸಿತುಪ್ಪವಾಗಿದೆ. ಸರ್ಕಾರ ರಚನೆಗೂ ಮುನ್ನವೇ ಪಂಜ್‍ಶೀರ್ ಪ್ರಾಂತ್ಯ ನಮ್ಮ ವಶದಲ್ಲಿರಲಿದೆ ಎಂದು ತಾಲಿಬಾನಿಗಳು ಘೋಷಣೆ ಮಾಡಿದ್ದಾರೆ. ಆದ್ರೆ ಮಾಜಿ ಉಪಾಧ್ಯಕ್ಷ ಅಮರೂಲ್ಲಾ ಸಾಲೇಹ, ಯುದ್ಧ ಮುಂದುವರಿಯವ ಮಾತುಗಳನ್ನಾಡಿದ್ದಾರೆ.
Advertisement
ಕಳೆದ ಕೆಲ ದಿನಗಳಿಂದ ಪಂಜ್‍ಶೀರ್ ಪ್ರಾಂತ್ಯದ ಅಹಮದ್ ಮಸೂದ್ ಮತ್ತು ಅಫ್ಘಾನಿಸ್ತಾನದ ಅಮರೂಲ್ಲಾ ಸಾಲೇಹ ತಾಲಿಬಾನಿಗಳ ವಿರುದ್ಧ ಯುದ್ಧ ಸಾರಿದ್ದಾರೆ. ಆರಂಭದಲ್ಲಿ ಮಸೂದ್ ಮತ್ತು ತಾಲಿಬಾನಿಗಳ ನಡುವೆ ಮಾತುಕತೆ ನಡೆದಿದ್ರೂ ಅದು ವಿಫಲವಾಗಿತ್ತು. ಆದ್ದರಿಂದ ಪಂಜ್‍ಶೀರ್ ವಶಕ್ಕಾಗಿ ತಾಲಿಬಾನಿ ತನ್ನ ಜನರನ್ನ ಕಳಿಸಿತ್ತು.
Advertisement
Advertisement
ಕಾಬೂಲ್‍ನಲ್ಲಿ ಸಂಭ್ರಮದ ಫೈರಿಂಗ್:
ಇನ್ನೂ ಕೆಲ ಮಾಧ್ಯಮಗಳ ವರದಿ ಪ್ರಕಾರ, ತಾಲಿಬಾನಿಗಳು ಪಂಜ್‍ಶೀರ್ ವಶಕ್ಕೆ ಮಾಡಿಕೊಂಡ ಹಿನ್ನೆಲೆ ಕಾಬೂಲ್ ನಲ್ಲಿ ಗುಂಡು ಸಿಡಿಸಿ ಸಂಭ್ರಮ ಆಚರಿಸಿದ್ದಾರೆ. ಪಂಜ್‍ಶೀರ್ ದಲ್ಲಿರುವ ಗುಂಪು ತಾಲಿಬಾನಿಗಳ ಮುಂದೆ ಶರಣಾಗಿದ್ದು, ಇಡೀ ಅಫ್ಘಾನಿಸ್ತಾನ ನಮ್ಮ ವಶದಲ್ಲಿದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ
Advertisement
"Taliban forces have taken full control of Afghanistan including the Panjshir valley where opposition forces had been holding out," Reuters quoted Taliban sources as saying pic.twitter.com/EVWI6H0fhW
— ANI (@ANI) September 3, 2021
ಸುಳ್ಳು ಎಂದ ಸಾಲೇಹ:
ತಾಲಿಬಾನಿಗಳ ಸಂಭ್ರಮಾಚರಣೆ ಬಗ್ಗೆ ವರದಿಗಳು ಬಿತ್ತರವಾಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಾಲೇಹ, ನಮ್ಮ ಹೋರಾಟ ನಿಂತಿಲ್ಲ, ಮುಂದುವರಿದಿದೆ. ನಾವು ಭೂಮಿ ತಾಯಿಯ ಜೊತೆಯಲ್ಲಿದ್ದು, ಅದರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇವೆ. ಪಾಕಿಸ್ತಾನ, ರಷ್ಯಾ ಮತ್ತು ಚೀನಾ ಪಂಜ್‍ಶೀರ್ ರೆಜಿಸ್ಟೆನ್ಸ್ ವಿರುದ್ಧ ತಮ್ಮ ಪ್ರೊಪೆಗೆಂಡಾ ಪ್ರಯೋಗಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ತಾವು ದೇಶ ತೊರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಂದು ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ – ಇಂದು ಅಮೆರಿಕದ ವಿರುದ್ಧ ಸಿಟ್ಟು