ಕಾಬೂಲ್: ಅಫ್ಘಾನಿಸ್ತಾನ ವಶಕ್ಕೆ ಪಡೆದುಕೊಂಡಿರು ಉಗ್ರ ತಾಲಿಬಾನಿಗಳು ಅಮೆರಿಕಾಗೆ ಬೆದರಿಕೆ ಹಾಕಿದ್ದಾರೆ. ಆಗಸ್ಟ್ 31ರೊಳಗೆ ನಿಮ್ಮ ಸೈನಿಕರನ್ನು ಅಫ್ಘಾನಿಸ್ತಾನದಿಂದ ಕರೆಸಿಕೊಳ್ಳುವಂತೆ ಸಂದೇಶ ರವಾನಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ತಾಲಿಬಾನಿ ವಕ್ತಾರ ಸೋಹೆಲ್ ಶಾಹಿನ್ ಎಂಬಾತ ಕತಾರ್ ನಲ್ಲಿ ಕುಳಿತು ಹೇಳಿಕೆ ನೀಡಿದ್ದಾನೆ. ಒಂದು ವೇಳೆ ಅಮೆರಿಕ ತನ್ನ ಸೇನೆಯನ್ನ ಹಿಂಪಡೆಯಲು ವಿಳಂಬ ನೀತಿ ತೋರಿದ್ರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ನಾವು ನಿಮಗೆ ಆಗಸ್ಟ್ 31ರವರೆಗೆ ನಿಮ್ಮ ಸೇನೆ ಕರೆಸಿಕೊಳ್ಳಲು ಸಮಯ ನೀಡಿದ್ದೇವೆ ಎಂದು ಹೇಳಿದ್ದಾನೆ.
Advertisement
Advertisement
ಇತ್ತ ಅಮೆರಿಕ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚದಿರಲು ನಿರ್ಧರಿಸಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ವಿದೇಶಿಗರಿಗೆ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ಸುಮಾರು 6 ಸಾವಿರ ಅಮೆರಿಕ ಸೈನಿಕರಿದ್ದಾರೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!
Advertisement
Advertisement
ತಾಲಿಬಾನಿಗಳಿಗೆ ಬೈಡನ್ ಎಚ್ಚರಿಕೆ:
ನಾವು 20 ವರ್ಷ ಅಫ್ಘಾನಿಸ್ತಾನದ ಜೊತೆ ಕೆಲಸ ಮಾಡಿದ್ದೇವೆ. ಸದ್ಯ ಕಾಬೂಲ್ ನಲ್ಲಿ ಅಮೆರಿಕದ 6 ಸಾವಿರ ಸೈನಿಕರಿದ್ದಾರೆ. ಒಂದು ವೇಳೆ ಅಮೆರಿಕ ಸೇನೆಯ ಮೇಲೆ ತಾಲಿಬಾನಿಗಳು ದಾಳಿ ನಡೆಸಿದ್ರೆ ಪ್ರತ್ಯುತ್ತರ ನೀಡುತ್ತೇವೆ. ಅಫ್ಘಾನಿಸ್ತಾನದ ಕುರಿತು ಮುಂದಿನ ವಾರದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗವುದು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು