– ಸಂಗೀತ, ಹೆಣ್ಣುಮಕ್ಕಳ ಧ್ವನಿ ನಿಷೇಧ
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಇನ್ನೂ ತಣ್ಣಗಾಗುತ್ತಿಲ್ಲ. ಖ್ಯಾತ ಸಂಗೀತಗಾರನನ್ನು ಹತ್ಯೆಗೈದ ಬಳಿಕ ಇದೀಗ ಅಫ್ಘಾನಿಸ್ತಾನದ ಕಂದಹಾರ್‍ನಲ್ಲಿ ಮಹಿಳೆಯರ ಧ್ವನಿಯನ್ನು ಬ್ಯಾನ್ ಮಾಡಲಾಗಿದೆ. ಟಿವಿ, ರೇಡಿಯೋಗಳಲ್ಲಿ ಎಲ್ಲೂ ಸಂಗೀತ ಹಾಗೂ ಮಹಿಳೆಯರ ಧ್ವನಿ ಕೇಳುವಂತಿಲ್ಲ ಎಂದು ತಾಲಿಬಾನಿಗಳು ಹೇಳಿದ್ದಾರೆ.
Advertisement
ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ ಕೆಲ ಟಿವಿ ವಾಹಿನಿಗಳು ಮಹಿಳಾ ನಿರೂಪಕಿಯರನ್ನು ಕೆಲಸದಿಂದ ತೆಗೆದುಹಾಕಿವೆ. ಅಲ್ಲದೆ ಕಾಬೂಲ್‍ನಲ್ಲಿನ ಸ್ಥಳೀಯ ಮೀಡಿಯಾಗಳಲ್ಲಿ ಹಲವು ಮಹಿಳೆಯರನ್ನು ಮನೆಗೆ ಕಳುಹಿಸಿವೆ. ಇದನ್ನೂ ಓದಿ: ಜನಪ್ರಿಯ ಹಾಡುಗಾರನನ್ನ ಹತ್ಯೆಗೈದ ತಾಲಿಬಾನಿಗಳು
Advertisement
ಇಷ್ಟಾದರೂ ತಾಲಿಬಾನಿಗಳು ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದು, ಮಹಿಳೆಯರನ್ನು ಕೆಲಸಕ್ಕೆ ಕಳುಹಿಸುತ್ತೇವೆ. ಅಲ್ಲದೆ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಓದಲು ಅವಕಾಶ ನೀಡುತ್ತೇವೆ ಎಂದಿತ್ತು. ಆದರೆ ತಾಲಿಬಾನ್ ತನ್ನ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
Advertisement
Advertisement
ಹಿಂದಿನ ಅಧಿಕಾರಾವಧಿಯಲ್ಲಿ ತಾಲಿಬಾನ್ ಮಹಿಳೆಯರನ್ನು ಕಠಿಣವಾಗಿ ನಡೆಸಿಕೊಳ್ಳಲು ಹೆಸರುವಾಸಿಯಾಗಿತ್ತು. ಮಹಿಳೆಯರು ತಮ್ಮ ಮನೆಗಳಿಂದ ಹೊರ ಬರಬೇಕಾದಲ್ಲಿ ತಲೆ ಸಂಪೂರ್ಣವಾಗಿ ಮುಚ್ಚಿಕೊಂಡು ಹಾಗೂ ಕುಟುಂಬದ ಪುರುಷರೊಬ್ಬರು ಜೊತೆಯಾಗಿರಬೇಕು ಎಂದು ಹೇಳಿತ್ತು.
ಅಫ್ಘಾನಿಸ್ತಾನದಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿರುವಾಗ ಜನಪ್ರಿಯ ಹಾಡುಗಾರ ಫವಾದ್ ಕಿಶನಾಬಾದ್ ಅವರನ್ನು ಉಗ್ರರು ಹತ್ಯೆ ಗೈದಿದ್ದಾರೆ. ಅಫ್ಘಾನಿಸ್ತಾನದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ತಾಲಿಬಾನಿಗಳು ನಿಷೇಧಿಸಿದ್ದಾರೆ. ಹಾಡುಗಾರ ಫವಾದ್ ಕಿಶನಾಬಾದ್ ತಾಲಿಬಾನ್‍ಗೆ ವಿರುದ್ಧವಾಗಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಯಲ್ಲಿ ತಾಲಿಬಾನಿಗಳು ಫವಾದ್‍ರನ್ನು ಹುಡುಕಿ ಹತ್ಯೆ ಮಾಡಿದ್ದಾರೆ.
ಅಂದ್ರಾಬ್ ಪ್ರದೇಶದ ಗಾಯಕನನ್ನು ತಾಲಿಬಾನಿಗಳು ಕೊಂದಿದ್ದನ್ನು ಸ್ಥಳೀಯ ಮಾಧ್ಯಮ ದೃಢಪಡಿಸಿದೆ. ಮಾಜಿ ಆಂತರಿಕ ವ್ಯವಹಾರಗಳ ಸಚಿವ ಮಸೂದ್ ಅಂದರಾಬಿ ಹೇಳಿದ್ದಾಗಿ ಉಲ್ಲೇಖಿಸಿದೆ.