ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್

Public TV
2 Min Read
ipl 2021 chennai delhi team e1632982998556

ಕಾಬೂಲ್: ತನ್ನ ವಿಚಿತ್ರ ನಿರ್ಧಾರಗಳಿಂದಲೇ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ತಾಲಿಬಾನ್ ಆಡಳಿತ ಈಗ ಅಫ್ಘಾನಿಸ್ಥಾನದಲ್ಲಿ ಮತ್ತೊಂದು ಹಾಸ್ಯಾಸ್ಪದ ನಿರ್ಧಾರವನ್ನು ಕೈಗೊಂಡಿದೆ. ಕ್ರಿಕೆಟ್ ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ ಎಂಬ ಕಾರಣಕ್ಕೆ ಐಪಿಎಲ್ ಪ್ರಸಾರವನ್ನೇ ದೇಶದಲ್ಲಿ ನಿಷೇಧಿಸಿದೆ.

taliban 1

ಅಫ್ಘಾನಿಸ್ಥಾನದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ತನ್ನ ದೇಶದಲ್ಲಿ ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಿದೆ. ಎಲ್ಲಾ ಮಾಧ್ಯಮಗಳಿಗೂ ಎಚ್ಚರಿಕೆ ರವಾನಿಸಿರುವ ತಾಲಿಬಾನ್ ಐಪಿಎಲ್‍ನ ಯುಎಇನಲ್ಲಿ ನಡೆಯುವ ಪಂದ್ಯಗಳನ್ನು ಪ್ರಸಾರ ಮಾಡದಂತೆ ಸೂಚಿಸಿದೆ. ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇರುತ್ತಾರೆ ಎನ್ನುವ ಕಾರಣದಿಂದಾಗಿ ಈ ನಿರ್ಧಾರವನ್ನು ತಾಲಿಬಾನ್ ಸರ್ಕಾರ ತೆಗೆದುಕೊಂಡಿದೆ. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

ಹಾಸ್ಯಾಸ್ಪದ, ಅಫ್ಘಾನಿಸ್ಥಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ ಪ್ರಸಾರವನ್ನು ತಾಲಿಬಾನ್ ನಿಷೇಧಿಸಿದೆ. ಕ್ರೀಡಾಂಗಣಗಳಲ್ಲಿ ಮಹಿಳಾ ಪ್ರೇಕ್ಷಕರ ಉಪಸ್ಥಿತಿ ಹಾಗೂ ಯುವತಿಯರು ನೃತ್ಯಗಳನ್ನು ಮಾಡುವ ಕಾರಣದಿಂದಾಗಿ ಅಫ್ಘಾನ್ ಮಾಧ್ಯಮಗಳು ಐಪಿಎಲ್ ಲೀಗ್‍ನ ಪ್ರಸಾರವನ್ನು ಮಾಡಬಾರದು ಎಂದು ತಾಲಿಬಾನ್ ಎಚ್ಚರಿಸಿದೆ ಎಂದು ಅಫ್ಘಾನಿಸ್ತಾನದ ಪತ್ರಕರ್ತ ಫಾವದ್ ಅಮನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಅಂತ್ಯ – ಶೀಘ್ರದಲ್ಲಿ ಡಿಸಿಜಿಐಗೆ ವರದಿ ಸಲ್ಲಿಕೆ

Taliban 2

ಇಸ್ಲಾಂನ ಚೌಕಟ್ಟಿನೊಳಗೆ ಮಹಿಳಾ ಹಕ್ಕುಗಳನ್ನು ಗೌರವಿಸಲಾಗುವುದು ಎಂದು ಭಯೋತ್ಪಾದಕ ಗುಂಪು ಹೇಳುತ್ತಿದೆ. ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು, ಮಾತ್ರವಲ್ಲದೇ ಮಹಿಳೆಯರನ್ನು ಕ್ರೀಡೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

 

TALIBAN 2 1

400 ಕ್ರೀಡೆಗಳಿಗೆ ಅವಕಾಶ ನೀಡುವುದಾಗಿ ತಾಲಿಬಾನ್ ಹೇಳಿತ್ತು. ಆದರೆ ಮಹಿಳೆಯರು ಆಡಬಹುದೇ ಎಂಬ ಪ್ರಶ್ನೆಗೆ ಖಚಿತ ಉತ್ತರ ನೀಡಲು ನಿರಾಕರಿಸಿದ್ದರು. ದಯವಿಟ್ಟು ಮಹಿಳೆಯರ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಬೇಡಿ ಎಂದು ಅಫ್ಘಾನಿಸ್ಥಾನದ ಹೊಸ ಕ್ರೀಡಾ ಮುಖ್ಯಸ್ಥ ಬಶೀರ್ ಅಹ್ಮದ್ ರುಸ್ತಮಜಾ ಕಳೆದ ವಾರವಷ್ಟೇ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *