ಕಾಬೂಲ್: ಈ ಹಿಂದೆ ಮಹಿಳೆಯರು (Womens) ಮನರಂಜನಾ ಸ್ಥಳಗಳಿಗೆ ಹೋಗುವುದನ್ನ ನಿಷೇಧಿಸಿದ್ದ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಸರ್ಕಾರ ಇದೀಗ ಕಾಬೂಲ್ ಸೇರಿದಂತೆ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ (Women Beauty Salons) ನಿಷೇಧಿಸುವಂತೆ ಆದೇಶಿಸಿದೆ.
ತಾಲಿಬಾನ್(Taliban) ಸಚಿವಾಲಯದ ವಕ್ತಾರ ಮೊಹಮ್ಮದ್ ಅಕಿಫ್ ಮಹಜರ್ ಕೂಡಲೇ ಮಹಿಳೆಯರ ಬ್ಯೂಟಿ ಸಲೊನ್‌ಗಳನ್ನ ನಿಷೇಧಿಸಲು ಆದೇಶ ಹೊರಡಿಸುವಂತೆ ಕಾಬೂಲಿನ ಮುನ್ಸಿಪಾಲಿಟಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ
Advertisement
Advertisement
ಈ ನಡುವೆ ಪುರುಷರು ನಿರುದ್ಯೋಗಿಗಳಾಗಿದ್ದಾರೆ, ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಹಿಳೆಯರು ಒಂದೊತ್ತಿನ ಊಟಕ್ಕಾಗಿ ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡಲು ಹೋಗ್ತಿದ್ದಾರೆ. ಅದನ್ನೂ ನಿಷೇಧಿಸಿದ್ರೆ ನಾವೇನು ಮಾಡಬೇಕು? ಎಂದು ಮೇಕಪ್ ಕಲಾವಿಧ ರೈಹಾನ್ ಮುಬಾರಿಜ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ಸೂಚನೆ
Advertisement
ಪುರುಷರಿಗೆ ಉದ್ಯೋಗವಿದ್ದರೆ ನಾವು ಮನೆಯಿಂದ ಹೊರಬರುವುದಿಲ್ಲ. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ನಾವೇನು ಮಾಡೋದು? ನಾವು ಹಸಿವಿನಿಂದ ಸಾಯುವಂತ ಪರಿಸ್ಥಿತಿ ಬಂದಿದೆ. ಅದನ್ನೇ ನೀವು ಬಯಸುತ್ತಿದ್ದೀರಿ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
Advertisement
ಈ ಹಿಂದೆ ಮುಸ್ಲಿಂ ಹುಡುಗಿಯರು ಹಾಗೂ ಯುವತಿಯರು ಶಾಲೆ-ಕಾಲೇಜುಗಳಿಗೆ ಹೋಗುವುದು, ಎನ್‌ಜಿಒಗಳಲ್ಲಿ ಕೆಲಸ ಮಾಡುವುದನ್ನ ತಾಲಿಬಾನ್ ಸರ್ಕಾರ ನಿಷೇಧಿಸಿತ್ತು. ಆ ನಂತರ ಪುರುಷ-ಮಹಿಳೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು, ಪಾರ್ಕ್‌ಗೆ ಹೋಗುವುದು, ಚಿತ್ರಮಂದಿರ ಮತ್ತು ಇತರ ಮನರಂಜನಾ ಪ್ರದೇಶಗಳಿಗೆ ಹೋಗುವುದಕ್ಕೂ ಬ್ರೇಕ್ ಹಾಕಿದೆ. ಇದೀಗ ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನ ನಿಷೇಧಿಸಿ ಆದೇಶ ಹೊರಡಿಸಿದೆ.
ಕಾಬೂಲಿನ ನಿವಾಸಿಗಳು, ಸರ್ಕಾರವು ತನ್ನ ಕ್ರಮಗಳಿಗೆ ಒಂದು ಚೌಕಟ್ಟನ್ನು ರೂಪಿಸಬೇಕು. ಆ ಚೌಕಟ್ಟು ಇಸ್ಲಾಂಗೆ ಅಥವಾ ದೇಶಕ್ಕೆ ಹಾನಿಯಾಗದ ರೀತಿಯಲ್ಲಿ ಇರಬೇಕು ಎಂದು ಮನವಿ ಮಾಡಿದ್ದಾರೆ.
Web Stories