ಕಾಬೂಲ್: ಶುಕ್ರವಾರದ ನಮಾಜ್ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಎಂಬುದರ ಬಗ್ಗೆ ವರದಿಯಾಗಿದೆ. ಪ್ರಾರ್ಥನೆ ಬಳಿಕ ಸರ್ಕಾರ ರಚನೆಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.
Advertisement
ಆಗಸ್ಟ್ 15ರಂದು ರಾಜಧಾನಿ ಕಾಬೂಲ್ ಪ್ರವೇಶಿಸಿದ ತಾಲಿಬಾನಿಗಳು ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಆಗಸ್ಟ್ 31ರಂದು ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಸ್ವಾತಂತ್ರ್ಯಯ ಆಚರಿಸಿದ್ದರು. ಇದೇ ವೇಳೆ ಜನರಿಗೆ ದೇಶ ತೊರೆಯದಂತೆ ಸಹ ಮನವಿ ಮಾಡಿಕೊಂಡಿದ್ದರು. ದೇಶದಲ್ಲಿ ಶಾಂತಿ ಕಾಪಾಡೋದರ ಜೊತೆ ಎಲ್ಲರಿಗೂ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಇದನ್ನೂ ಓದಿ: ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ
Advertisement
Advertisement
ಅಮೆರಿಕ ಸೇನೆ ಹಿಂದಿರುಗುತ್ತಿದ್ದಂತೆ ಕಾಬೂಲ್ ವಿಮಾನನಿಲ್ದಾಣದಿಂದ ನಡೆಯುತ್ತಿದ್ದ ಏರ್ ಲಿಫ್ಟ್ ಸ್ಥಗಿತಗೊಳಿಸಲಾಗಿದೆ. ಏರ್ ಲಿಫ್ಟ್ ನಿಂತಿದ್ರೂ ವಿಮಾನ ನಿಲ್ದಾಣದ ಇಕ್ಕೆಲ ರಸ್ತೆಗಳಲ್ಲಿ ಗಂಟುಮೂಟೆಗಳ ಜೊತೆ ದೇಶ ತೊರೆಯಲು ಕಾಯುತ್ತಿದ್ದಾರೆ. ಇತ್ತ ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ಅವರ ದೇಶಕ್ಕೆ ಕಳುಹಿಸಲಾಗುವುದು ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ – ಹೇಗಿರಲಿದೆ ಆಡಳಿತ ವ್ಯವಸ್ಥೆ?