ಕಾಬೂಲ್: ಅಫ್ಘಾನ್ ನಾಗರಿಕರು ದೇಶ ಬಿಟ್ಟು ತೆರಳದಂತೆ ತಾಲಿಬಾನ್ ಉಗ್ರರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಈನಿಟ್ಟಿನಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗದಂತೆ ತಡೆಯೊಡ್ಡುತ್ತಿರುವುದರಿಂದ ಅಫ್ಘಾನ್ ನಾಗರಿಕರು ಕಂಗಾಲಾಗಿದ್ದಾರೆ.
Advertisement
ಕಾಬೂಲ್ ವಿಮಾನ ನಿಲ್ದಾಣದಿಂದ ವಿದೇಶಿ ಪ್ರಜೆಗಳು ತೆರಳಬಹುದಾಗಿದೆ ಎಂದು ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬೀವುಲ್ಲಾ ಮಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಅಫ್ಘಾನಿಸ್ತಾನ್ ಪ್ರಜೆಗಳು ದೇಶ ಬಿಟ್ಟು ತೆರಳದಂತೆ ತಡೆಯೊಡ್ಡಲು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೆ ವಿದೇಶಿ ಪ್ರಜೆಗಳು ಈ ರಸ್ತೆಯಲ್ಲಿ ತೆರಳಬಹುದಾಗಿದೆ. ಇದನ್ನೂ ಓದಿ: ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ
Advertisement
ಅಫ್ಘಾನ್ ನಾಗರಿಕರಿಗೆ ತಾಲಿಬಾನ್ ನಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ಜಬೀವುಲ್ಲಾ ತಿಳಿಸಿದ್ದು, ಯಾವುದೇ ಕಾರಣಕ್ಕೂ ವೈದ್ಯರು, ಉನ್ನತ ವ್ಯಾಸಂಗ ಮಾಡುವವರು ದೇಶ ಬಿಟ್ಟು ತೆರಳದಂತೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ತಾಲಿಬಾನಿಗಳು ಹುಡುಕುತ್ತಾ ನನ್ನ ಮನೆಗೆ ಬಂದ್ರು: ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್
Advertisement
Advertisement
ಈಗಾಗಲೇ ಅಮೆರಿಕ ಘೋಷಿಸಿರುವಂತೆ ಅಗಸ್ಟ್ 31ರೊಳಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಜನರನ್ನು ಏರ್‍ಲಿಫ್ಟ್ ಮಾಡಬೇಕು. ಅಲ್ಲದೇ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಅಷ್ಟೇ ಅಲ್ಲದೆ ಅಂತಿಮ ಗಡುವನ್ನು ವಿಸ್ತರಿಸುವುದಿಲ್ಲ ಎಂದು ತಾಲಿಬಾನ್ ತಿಳಿಸಿದೆ.
ಅಗಸ್ಟ್ 31ರ ಬಳಿಕ ಜನರ ಸ್ಥಳಾಂತರಕ್ಕೆ ನಾವು ಅವಕಾಶ ನೀಡುವುದಿಲ್ಲ. ವೈದ್ಯರು, ತಂತ್ರಜ್ಞರು ದೇಶದಲ್ಲಿಯೇ ಇದ್ದು ತಮ್ಮ ಕೆಲಸವನ್ನು ಮುಂದುವರಿಸಬೇಕು ಎಂದು ತಾಲಿಬಾನ್ ಕಟ್ಟಪ್ಪಣೆ ಹೊರಡಿಸಿದೆ.