ಶ್ರೀದೇವಿ ಸಾವಿನ 30 ನಿಮಿಷ ಮೊದ್ಲು ಸರ್ಪ್ರೈಸ್ ನೀಡಲು ಮುಂದಾಗಿದ್ದ ಪತಿ ಬೋನಿ ಕಪೂರ್

Public TV
1 Min Read
SRIDEVI KAPOOR

ನವದೆಹಲಿ: ಹಿರಿಯ ನಟಿ ಶ್ರೀದೇವಿ ಅವರ ಅಕಾಲಿಕ ಮರಣ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇವರ ಮರಣದ ಬಳಿಕ ದುಬೈನ ಪತ್ರಿಕೆಯೊಂದು ಶ್ರೀದೇವಿ ಅವರ ಸಾವಿನ 30 ನಿಮಿಷದ ಮೊದಲು ನಡೆದಿರುವ ಸ್ಟೋರಿಯೊಂದನ್ನು ಬಿಚ್ಚಿಟ್ಟಿದೆ.

ಪತ್ರಿಕೆಯ ವರದಿ ಪ್ರಕಾರ, ಪತಿ ಬೋನಿ ಕಪೂರ್ ಜೊತೆ ಸಂಬಂಧಿಕರ ಮದುವೆಗೆ ತೆರಳಿದ್ದ ಬಳಿಕ ಶ್ರೀದೇವಿ ಒಬ್ಬರನ್ನೇ ಹೊಟೇಲ್ ರೂಮ್ ನಲ್ಲಿ ಬಿಟ್ಟು ಪತಿ ಮುಂಬೈಗೆ ತೆರಳಿದ್ದರು. ಬಳಿಕ ಶ್ರೀದೇವಿಯವರಿಗೆ ಸರ್ಪ್ರೈಸ್  ನೀಡಲೆಂದು ಬೋನಿ ಕಪೂರ್ ಮತ್ತೆ ದುಬೈಗೆ ವಾಪಸ್ಸಾಗಿದ್ದರು.

sridevi boneykapoor

ದುಬೈಗೆ ವಾಪಸ್ ಬಂದ ಬೋನಿ ಕಪೂರ್ ಪತ್ನಿ ಶ್ರೀದೇವಿ ಜೊತೆ ಸುಮಾರು 15 ನಿಮಿಷ ಮಾತಾಡಿದ್ದಾರೆ. ನಂತರ ಹೊರಗಡೆ ಊಟಕ್ಕೆ ಹೋಗಲು ರೆಡಿಯಾಗುವಂತೆ ಪತ್ನಿಗೆ ಬೋನಿ ಕಪೂರ್ ಹೇಳಿದ್ದಾರೆ.

ಪತಿ ಜೊತೆ ಡಿನ್ನರ್ ಗೆ ಹೋಗಲು ರೆಡಿಯಾಗಲೆಂದು ಶ್ರೀದೇವಿ ಸ್ನಾನದ ಮನೆಗೆ ತೆರಳಿದ್ದಾರೆ. ಹೀಗೆ ಹೋದವರು ಸುಮಾರು 15 ನಿಮಿಷವಾದ್ರೂ ಹಿಂದಿರುಗಲೇ ಇಲ್ಲ. ಈ ವೇಳೆ ಬೋನಿಕಪೂರ್ ಬಾತ್ ರೂಮ್ ಬಾಗಿಲು ಬಡಿದಿದ್ದಾರೆ. ಆದ್ರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಆತಂಕಗೊಂಡ ಪತಿ ಬಾತ್ ರೂಮ್ ಬಾಗಿಲು ಒಡೆದಿದ್ದಾರೆ. ಒಳಗಡೆ ಟಬ್ ನಲ್ಲಿ ಬಿದ್ದಿದ್ದ ಶ್ರೀದೇವಿಯನ್ನು ಕಂಡು ಪತಿ ಬೋನಿಕಪೂರ್ ಶಾಕ್ ಆಗಿದ್ದಾರೆ.

SRIDEVI

ಕೂಡಲೇ ಅವರನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದು, ತನ್ನ ಗೆಳೆಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಅದಾಗಲೇ ಶ್ರೀದೇವಿ ಇಹಲೋಕ ತ್ಯಜಿಸಿದ್ದರು.

54 ವರ್ಷದ ಶ್ರೀದೇವಿ ಅವರ ಅಕಾಲಿಕ ಮರಣಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.

https://www.youtube.com/watch?v=_KNZgFFSYj4

https://www.youtube.com/watch?v=AKpA8kTgC6o

https://www.youtube.com/watch?v=A3Eg5WQxYY4

https://www.youtube.com/watch?v=TMaN009AkTc

https://www.youtube.com/watch?v=P5i7pF4Xhxc

https://www.youtube.com/watch?v=7-t7NbVkcJQ

https://www.youtube.com/watch?v=NTm7FXx_s-A

Share This Article
Leave a Comment

Leave a Reply

Your email address will not be published. Required fields are marked *