ಚಿತ್ರದುರ್ಗ: ತರಳುಬಾಳು ಗುರುಪೀಠದ ಸಾಣೇಹಳ್ಳಿ ಶಾಖಾ ಮಠದ ಶ್ರೀಗಳ ವಿರುದ್ಧ ಎಂಎಲ್‍ಸಿ ರಘು ಆಚಾರ್ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಮಠದ ಭಕ್ತ ರಘು ಆಚಾರ್ ಅವರಿಗೆ ಕರೆ ಮಾಡಿ ಆವಾಜ್ ಹಾಕಿದ್ದಾರೆ.
`ನಾ ರಾಜಕೀಯ ಬಿಡ್ತೀನಿ ಶ್ರೀಗಳೇ ನೀವು ಮಠ ಬಿಟ್ಟು ಹೊರ ಬನ್ನಿ’ ಎಂದು ಎಂಎಲ್‍ಸಿ ರಘು ಆಚಾರ್ ಶ್ರೀಗಳ ಬಗ್ಗೆ ಹಗರುವಾಗಿ ಮಾತನಾಡಿದ್ದರು. ಇದರಿಂದ ಆಕ್ರೋಶಗೊಂಡ ತರಳುಬಾಳು ಮಠದ ಭಕ್ತ ಲೋಕೇಶ್ ಎಂಬವರು ರಘು ಆಚಾರ್ ಅವರಿಗೆ ಕರೆ ಮಾಡಿ ಆವಾಜ್ ಹಾಕಿದ್ದಾರೆ.
Advertisement
Advertisement
ಒಬ್ಬರ ಬಗ್ಗೆ ಮಾತನಾಡುವಾಗ ಹುಷಾರ್ ಆಗಿ ಮಾತಾಡು, ಸಾಣೇಹಳ್ಳಿಗೆ ಎಷ್ಟು ಜನ ಕರ್ಕೊಂಡು ಬರ್ತಿಯಾ ಬಾ. ಧಮ್ ಇದ್ರೆ ಹೊಸದುರ್ಗ ಗಡಿಯೊಳಗೆ ಕಾಲಿಡು ನೋಡ್ತಿವಿ. ಪಂಡಿತಾರಾಧ್ಯ ಸ್ವಾಮಿಜಿ ಬಗ್ಗೆ ಹೇಗೆ ನೀವು ಹಗುರವಾಗಿ ಮಾತಾನಾಡಿದ್ರಿ? ಸ್ವಾಮಿಗಳ ಬಳಿ ಕ್ಷಮೆಯಾಚಿಸಬೇಕು. ಮೂಲಭೂತವಾದಿ ಪದದ ಅರ್ಥ ಗೊತ್ತಿಲ್ಲ ಅಂದ್ಮೇಲೆ ಹೇಗೆ ಸ್ವಾಮಿಜೀಗಳ ಬಗ್ಗೆ ಮಾತಾನಾಡಿದ್ರಿ. ಕೋಟ್ಯಾಂತರ ಜನ ಭಕ್ತರು ಸೇರಿ ಅವರನ್ನ ಸ್ವಾಮಿಜಿಗಳನ್ನಾಗಿ ಮಾಡಿದ್ದಾರೆ. ನೀವು ಮಠದ ಭಕ್ತರಲ್ಲವೇ, ಈ ಹಿಂದೆ ಎಷ್ಟು ಸಾರಿ ಮಠಕ್ಕೆ ಭೇಟಿ ನೀಡಿದ್ದಿರಾ ಎಂದು ರಘು ಆಚಾರ್‍ಗೆ ಭಕ್ತರು ಪ್ರಶ್ನಿಸಿದ್ದಾರೆ.
Advertisement
ಅಷ್ಟೆ ಅಲ್ಲದೆ ನೀವು 11 ತಾಲೂಕುಗಳಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ. ಹೊಸದುರ್ಗ ಗಡಿ ಎಂಟ್ರಿ ಆಗ್ತೀರಾ ಇಲ್ಲಾ ನಾವೇ ನೀವಿದ್ದಲ್ಲಿ ಬರುತೀವಿ. ಮೈಸೂರು, ಬೆಂಗಳೂರು ಎಲ್ಲಿಗೆ ಬರಬೇಕು ನೀವೇ ಹೇಳಿ, ಅಲ್ಲಿಗೆ ಬರುತ್ತೇವೆ ಅಂತ ತರಳುಬಾಳು ಮಠದ ಭಕ್ತರು ಆವಾಜ್ ಹಾಕಿದ್ದಾರೆ. ರಘು ಆಚಾರ್ ಅವರು ತಮ್ಮ ತಪ್ಪಿಗೆ ಮಾಧ್ಯಮ ಮೂಲಕ ಕ್ಷಮೆ ಕೇಳಬೇಕು, ಇಲ್ಲ ಅಂದರೆ ಪರಿಣಾಮ ಸರಿ ಇರಲ್ಲ ಎಂದ ಭಕ್ತರು ಹೇಳಿದ್ದಾರೆ.
Advertisement
ಇದಕ್ಕೆ ಪ್ರತಿಕ್ರಿಯಿಸಿದ ರಘು ಆಚಾರ್, ನಾನು ಯಾವುದೇ ತಪ್ಪು ಮಾಡಿಲ್ಲ ನನ್ನ ಬಗ್ಗೆ ಮಾತಾಡುವಾಗ ಯೋಚಿಸಿ ಮಾತಾನಾಡಿ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv