ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಝಿಕಾ ವೈರಸ್ (Zika Virus) ಪತ್ತೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr. K Sudhakar) ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯ ಡಿಜಿಟಲ್ ವರದಿಗೆ ರೀ ಎಕ್ಸ್ ಮಾಡಿರುವ ಮಾಜಿ ಸಚಿವರು, ಝಿಕಾ ವೈರಸ್ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಝಿಕಾ ಆತಂಕ; ಚಿಕ್ಕಬಳ್ಳಾಪುರದ 5 ಗ್ರಾಮಗಳಲ್ಲಿ ಅಲರ್ಟ್ – 31 ಮಂದಿ ಗರ್ಭಿಣಿಯರಿಗೆ ರಕ್ತ ಪರೀಕ್ಷೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾರಕ ಝಿಕಾ ವೈರಸ್ ಪತ್ತೆಯಾಗಿರುವುದು ಅತ್ಯಂತ ಕಳವಳಕಾರಿ.
ವೈರಾಣು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು
ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು… https://t.co/D8JXFzu5Ho
— Dr Sudhakar K (@DrSudhakar_) November 2, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾರಕ ಝಿಕಾ ವೈರಸ್ ಪತ್ತೆಯಾಗಿರುವುದು ಅತ್ಯಂತ ಕಳವಳಕಾರಿ. ವೈರಾಣು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿ ಆಗ್ರಹಿಸುತ್ತೇನೆ ಎಂದಿದ್ದಾರೆ.
ಝಿಕಾ ವೈರಸ್ ಬರುವುದು ಹೇಗೆ?: ಇದು ಸೊಳ್ಳೆಗಳಿಂದ ಹರಡುವ ವೈರಸ್. ಈಡಿಸ್ ಸೊಳ್ಳೆಗಳೇ ಝಿಕಾ ವೈರಸ್‍ನ ಮೂಲಕಾರಣ. ಸಾಧಾರಣವಾಗಿ ಹಗಲುಹೊತ್ತಿನಲ್ಲೇ ಈ ಸೊಳ್ಳೆಗಳು ಕಡಿಯುತ್ತವೆ.
ರೋಗ ಲಕ್ಷಣಗಳೇನು?: ಜ್ವರ, ತಲೆ ನೋವು, ಕೀಲು ನೋವು, ಸ್ನಾಯು ನೋವು ಇದರ ಪ್ರಮುಖ ಲಕ್ಷಣಗಳು. ಸಾಧಾರಣವಾಗಿ 2ರಿಂದ 7 ದಿನಗಳ ಕಾಲ ಈ ಲಕ್ಷಣ ಕಾಣಿಸುತ್ತದೆ. ಸೊಳ್ಳೆ ನಿಮ್ಮನ್ನು ಕಚ್ಚಿದ ತಕ್ಷಣ ಲಕ್ಷಣಗಳು ಕಾಣಿಸಲ್ಲ. ಆದರೆ 3ರಿಂದ 12 ದಿನಗಳ ಅವಧಿಯೊಳಗೆ ದೇಹ ಹೊಕ್ಕ ವೈರಸ್ ಗುಣಲಕ್ಷಣಗಳನ್ನು ತೋರಿಸಲು ಆರಂಭಿಸುತ್ತದೆ. ಈ ವೈರಸ್ ಬಾಧಿಸಿದರೆ ಮರಣವನ್ನಪ್ಪುವ ಸಾಧ್ಯತೆ ತೀರಾ ಕಡಿಮೆ.
ಆದರೆ ಗರ್ಭಿಣಿಯರು ಎಚ್ಚರದಿಂದಿರಬೇಕು. ಗರ್ಭಾವಸ್ಥೆಯ ವೇಳೆ ಝಿಕಾ ವೈರಸ್ ಕಾಣಿಸಿದರೆ ಹುಟ್ಟುವ ಮಗು ಅಂಗವೈಕಲ್ಯಕ್ಕೀಡಾಗಬಹುದು. ಕೆಲವೊಮ್ಮೆ ಗರ್ಭಪಾತಕ್ಕೂ ಕಾರಣವಾಗಬಹುದು. ಮಕ್ಕಳು ಹಾಗೂ ಹಿರಿಯರಿಗೆ ವೈರಸ್ ತಗುಲಿದರೆ ನರ ಸಂಬಂಧಿತ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]