ಹಾಸನ: ಭ್ರಷ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬಿಗಿ ಕ್ರಮ ಮುಂದುವರಿದಿದ್ದು, ಅಕ್ರಮ ಸಾಗುವಳಿ ಚೀಟಿ ಮಂಜೂರಾತಿಗೆ ಸಹಕರಿಸಿದ ಆರೋಪ ಹೊತ್ತಿರುವ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದಾರೆ.
ಅರಕಲಗೂಡು ತಹಶೀಲ್ದಾರ್ ಪ್ರಸನ್ನಮೂರ್ತಿ ವಿರುದ್ಧ ರಾಜ್ಯ ಮುಖ್ಯಕಾರ್ಯದರ್ಶಿಗೆ ರೋಹಿಣಿ ಸಿಂಧೂರಿ ಪತ್ರ ಬರೆದಿದ್ದಾರೆ. ಪ್ರಸನ್ನಮೂರ್ತಿ ಹಾಲಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದರು. ಜುಲೈ 4 ರಂದೇ ಪ್ರಸನ್ನಮೂರ್ತಿ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದರು.
Advertisement
ಮಾಜಿ ಸಚಿವ ಬಗರ್ ಹುಕುಂ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವಾಗ, ಸಾಗುವಳಿ ಚೀಟಿ ಫಲಾನುಭವಿಗಳ ಆಯ್ಕೆ ವಿಚಾರವಾಗಿ ಸಭೆ ನಡೆಸದೇ ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ನೀಡುವ ಕಡತಕ್ಕೆ ಸಹಿ ಮಾಡಿದ್ದರು. ಈ ವೇಳೆ ಪ್ರಸನ್ನಮೂರ್ತಿ ಕೂಡ ಸಹಾಯ ಮಾಡಿದ್ದರು. ಸಚಿವರಿಗೆ ತಹಶೀಲ್ದಾರ್ ಪ್ರಸನ್ನಮೂರ್ತಿ ಸಹಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಸಿಂಧೂರಿ ಅವರು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
Advertisement
ಮಾಜಿ ಉಸ್ತುವಾರಿ ಸಚಿವ ಎ.ಮಂಜುರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಅಧಿಕಾರಿ ವಿರುದ್ಧ ಆರೋಪ ಸಾಬೀತಾಗಿರೋದು ಇದೀಗ ಮಾಜಿ ಸಚಿವರಿಗೂ ಸಂಕಷ್ಟ ತಂದೊಡ್ಡುವ ಆತಂಕ ಶುರುವಾಗಿ. ಸಚಿವ ಎ. ಮಂಜು ಮೇಲೂ ಕಾನೂನು ಕ್ರಮ ಸಾಧ್ಯತೆ ಇದೆ.
Advertisement
ವಾರದ ಹಿಂದೆಯಷ್ಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೌಕರನನ್ನ ಅಮಾನತು ಮಾಡಿ ಓರ್ವ ಅಧಿಕಾರಿ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದರು. ಇದೀಗ ನಿಯಮ ಮೀರಿ ಕೆಲಸಮಾಡುವ ಅಧಿಕಾರಿಗೆ ರೋಹಿಣಿ ಬಿಸಿ ಮುಟ್ಟಿಸಿದ್ದಾರೆ.