ಲಕ್ನೋ: ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಭಾರತಕ್ಕೆ ಸೆಳೆಯುವ ಆಗ್ರಾದ ತಾಜ್ ಮಹಲ್ (Taj Mahal) ಕಟ್ಟಡಕ್ಕೆ ಆಸ್ತಿ ತೆರಿಗೆ (Property Tax) ಹಾಗೂ ನೀರಿನ ಬಿಲ್‍ಗಳನ್ನು (Water Bill) ಪಾವತಿಸುವಂತೆ ಮೊದಲ ಬಾರಿಗೆ ಯುಪಿ ಸರ್ಕಾರ (Uttar Pradesh Government) ನೋಟಿಸ್ ನೀಡಿದೆ.
ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿವಿಧ ಘಟಕಗಳು 320 ವರ್ಷಗಳ ಇತಿಹಾಸ ಇರುವ ಆಗ್ರಾದ ತಾಜ್ ಮಹಲ್ ಹಾಗೂ ಆಗ್ರಾ ಕೋಟೆ ಎರಡಕ್ಕೂ ಬಾಕಿ ಬಿಲ್‍ಗಳನ್ನು ಪಾವತಿಸುವಂತೆ ನೋಟಿಸ್ ನೀಡಿದೆ. ಬಿಲ್‍ಗಳ ಮೊತ್ತ 1 ಕೋಟಿಗೂ ಹೆಚ್ಚು ಬಾಕಿ ಇದೆ ಎಂದು ಎಎಸ್‍ಐಗೆ ತಿಳಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‍ಐ) ಅಧಿಕಾರಿಗಳು ಇದು, ತಪ್ಪು, ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ತಿಳಿಸಿದರು.
Advertisement
Advertisement
ಈ ಬಗ್ಗೆ ಆಗ್ರಾದ ಎಎಸ್‍ಐನ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್‍ಕುಮಾರ್ ಪಟೇಲ್ ಮಾತನಾಡಿ, ಇಲ್ಲಿಯವರೆಗೆ 3 ನೋಟಿಸ್‍ಗಳು ಬಂದಿದ್ದು, ತಾಜ್‍ಮಹಲ್‍ಗೆ ಎರಡು ಮತ್ತು ಆಗ್ರಾ ಕೋಟೆಗೆ ಒಂದು ಎಂದು ದೃಢಪಡಿಸಿದ್ದಾರೆ.
Advertisement
ತಾಜ್ ಮಹಲ್‍ಗೆ ಸಂಬಂಧಿಸಿದಂತೆ, ನಮಗೆ ಎರಡು ನೋಟಿಸ್‍ಗಳು ಬಂದಿವೆ. ಒಂದು ಆಸ್ತಿ ತೆರಿಗೆ ಮತ್ತು ಇನ್ನೊಂದು ನೀರು ಸರಬರಾಜು ಇಲಾಖೆಯಿಂದಾಗಿದೆ. ಒಟ್ಟು 1 ಕೋಟಿಗೂ ಅಧಿಕ ರೂ.ಗಳನ್ನು ಎಎಸ್‍ಐನಿಂದ ಬೇಡಿಕೆಯಿಡಲಾಗಿದೆ. ಆದರೆ ಅಂತಹ ತೆರಿಗೆಗಳು ಸ್ಮಾರಕಗಳಿಗೆ ಅನ್ವಯಿಸುವುದಿಲ್ಲವಾದ್ದರಿಂದ ಇದು ತಪ್ಪಾಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಮನೆಯಲ್ಲಿಯೇ ED, CBI ಕಚೇರಿ ಓಪನ್ ಮಾಡಿ: ರಣದೀಪ್ ಸಿಂಗ್ ಸುರ್ಜೇವಾಲಾ
Advertisement
ಮೊದಲನೆಯದಾಗಿ, ಸ್ಮಾರಕದ ಆವರಣಗಳಿಗೆ ಆಸ್ತಿ ತೆರಿಗೆ ಅಥವಾ ಮನೆ ತೆರಿಗೆ ಅನ್ವಯಿಸುವುದಿಲ್ಲ. ಉತ್ತರ ಪ್ರದೇಶದಲ್ಲೂ ಈ ಕಾನೂನು ಇದೆ. ಜೊತೆಗೆ ನಾವು ಯಾವುದೇ ವಾಣಿಜ್ಯ ಉದ್ದೇಶಗಳಿಗಾಗಿ ನೀರನ್ನು ಬಳಸುತ್ತಿಲ್ಲ. ಬದಲಿಗೆ ತಾಜ್ ಸಂಕೀರ್ಣದ ಒಳಗೆ, ಹುಲ್ಲುಹಾಸುಗಳಿಗಾಗಿ, ಸಾರ್ವಜನಿಕ ಸೇವೆಗಾಗಿ ಬಳಸುತ್ತಿದ್ದೇವೆ. ಇದರಿಂದಾಗಿ ಬಾಕಿಯ ಪ್ರಶ್ನೆಯೇ ಇಲ್ಲ ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಗಡಿ ವಿವಾದ – ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ: ದೇವೇಂದ್ರ ಫಡ್ನವಿಸ್