ಲಕ್ನೋ: ತಾಜ್ ಮಹಲ್ ಅನ್ನು ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ಕಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶ ಬಿಜೆಪಿ ಶಾಸಕ ಸಂಗೀತ್ ಸೋಮ್ ಭಾರತೀಯ ಸಂಸ್ಕೃತಿಯಲ್ಲಿ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
Advertisement
ತಾಜ್ ಮಹಲ್ ಯಾರು ಕಟ್ಟಿಸಿದ್ದು, ಯಾಕೆ ಕಟ್ಟಿಸಿದ್ದು ಎನ್ನುವುದು ಮುಖ್ಯವಲ್ಲ. ಆದರೆ ಈ ಶ್ರಮದ ಹಿಂದೆ ಭಾರತ ಮಾತೆಯ ಪುತ್ರರಿದ್ದಾರೆ ಎಂದು ತಿಳಿಸುವ ಮೂಲಕ ವಿವಾದವನ್ನು ತಣ್ಣಗೆ ಮಾಡಲು ಮುಂದಾಗಿದ್ದಾರೆ.
Advertisement
ಯೋಗಿ ಆದಿತ್ಯನಾಥ್ ಅವರು ಅಕ್ಟೋಬರ್ 25ರಂದು ಆಗ್ರಾಕ್ಕೆ ಭೇಟಿ ನೀಡಲಿದ್ದು, ಆ ಸಂದರ್ಭ ತಾಜ್ ಮಹಲ್ ಸೇರಿ ಇತರ ಸ್ಮಾರಕಗಳಿಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮಾಧ್ಯಗಳು ವರದಿ ಮಾಡಿವೆ.
Advertisement
ಪ್ರವಾಸೋದ್ಯಮದ ನಿಟ್ಟಿನಲ್ಲಿ ತಾಜ್ ಮಹಲ್ ಒಂದು ಪ್ರಮುಖ ಸ್ಮಾರಕವಾಗಿದ್ದು, ಇದನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡಿ ಭದ್ರತೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
Advertisement
ಇದನ್ನೂ ಓದಿ: ತಾಜ್‍ಮಹಲ್ ಜೊತೆ ಗುಲಾಮಗಿರಿಯ ಸಂಕೇತವಾಗಿರೋ ರಾಷ್ಟ್ರಪತಿ ಭವನವನ್ನು ಕೆಡವಿ: ಅಜಂ ಖಾನ್
It does not matter who built it and for what reason; it was built by blood and sweat of Indian labourers: UP CM Yogi Adityanath #TajMahal pic.twitter.com/KSFU56KIRz
— ANI UP/Uttarakhand (@ANINewsUP) October 17, 2017
UP Chief Minister Yogi Adityanath to be in Agra on 25th October, will visit Taj Mahal and other monuments in the city.
— ANI UP/Uttarakhand (@ANINewsUP) October 17, 2017