ತೈಪೆ: ತೈವಾನ್‌ನಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯನ್ನು ಹೊಂದಿದೆ. ಈ ತಿಂಗಳಲ್ಲಿ ತೈವಾನ್‌ನಲ್ಲಿ ಸಂಭವಿಸಿದ ಎರಡನೇ ದೊಡ್ಡ ಭೂಕಂಪನ ಇದಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ದೇಶದ ಪೂರ್ವ ಭಾಗದಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಶನಿವಾರ ಹೌಲಿನ್‌ನಲ್ಲಿ ಈ ಭೂಕಂಪ ಸಂಭವಿಸಿದೆ. ತೈವಾನ್‌ನ (Taiwan Earthquake) ರಾಜಧಾನಿ ತೈಪೆಯಲ್ಲೂ ಕಟ್ಟಡಗಳು ಅಲುಗಾಡಿರುವುದು ಕಂಡುಬಂದಿದೆ. ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.
Advertisement
Advertisement
ತೈವಾನ್‌ನಲ್ಲಿ ಒಂದು ತಿಂಗಳೊಳಗೆ ಸಾವಿರಕ್ಕೂ ಹೆಚ್ಚು ಕಂಪನದ ಅನುಭವವಾಗಿದೆ. ಈ ತಿಂಗಳ ಆರಂಭದಲ್ಲಿ7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 17 ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಂದಿನಿಂದ ತೈವಾನ್ ಭೂಮಿ ನಿರಂತರವಾಗಿ ನಡುಗುತ್ತಿದೆ. ಶನಿವಾರ ಕೂಡ ಇಲ್ಲಿ 30 ನಿಮಿಷಗಳ ಅಂತರದಲ್ಲಿ ಎರಡು ಕಂಪನದ ಅನುಭವವಾಗಿದೆ. ಇವುಗಳಲ್ಲಿ ಒಂದರ ತೀವ್ರತೆ 6.1 ಮತ್ತು ಇನ್ನೊಂದರ ತೀವ್ರತೆ 5.8 ಆಗಿತ್ತು. ಎರಡೂ ಭೂಕಂಪಗಳ ಕೇಂದ್ರಬಿಂದು ಬಹುತೇಕ ಒಂದೇ ಆಗಿತ್ತು. ಇದನ್ನೂ ಓದಿ: ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ – 155 ಮಂದಿ ಸಾವು