ತೈವಾನ್: ತಾಯಿಯೊಬ್ಬಳು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮನೆಯಿಂದ ಹೊರಗೆ ಎಸೆದಿದ್ದ ನವಜಾತ ಶಿಶುವನ್ನು ನಾಯಿಗಳು ಕಚ್ಚಿ ಕಚ್ಚಿ ತಿಂದ ಘಟನೆ ತೈವಾನ್‍ನಲ್ಲಿ ನಡೆದಿದೆ.
ದಕ್ಷಿಣ ತೈವಾನ್‍ನ ಕಾವೋಸಿಯುಂಗ್‍ನ ನಿವಾಸಿ ಕ್ಸಿಯಾವೋ ಮೇ (19) ಮಗುವನ್ನು ಎಸೆದಿದ್ದ ತಾಯಿ. ಕ್ಸಿಯಾವೋ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.
Advertisement
Advertisement
ದಕ್ಷಿಣ ತೈವಾನ್‍ನ ಕಾವೋಸಿಯುಂಗ್‍ನಲ್ಲಿನ ಬಂಜರು ಭೂಮಿಯಲ್ಲಿ ಬೆಳೆದಿದ್ದ ಎತ್ತರದ ಕಳೆಗಳ ಮಧ್ಯೆ ನವಜಾತ ಶಿಶುವಿನ ಮೂಳೆಗಳು ಪತ್ತೆಯಾಗಿದ್ದವು. ಇದನ್ನು ನೋಡಿದ್ದ ತೈವಾನ್‍ನ ಪೊಲೀಸರು, ಯಾರೋ ಮಗುವನ್ನು ಕೊಲೆಗೈದು, ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದರು. ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದರು.
Advertisement
ಕ್ಸಿಯಾವೋ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆಗಿದ್ದಳು. ಹಣಕ್ಕಾಗಿ ಕಷ್ಟಪಡುತ್ತಿದ್ದ ಕ್ಸಿಯಾವೋ ದಂಪತಿ ಕಾವೋಸಿಯುಂಗ್‍ನ ಬಾಡಿಗೆ ಫ್ಲ್ಯಾಟ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಮಾನಸಿಕವಾಗಿ ಕುಂದಿದ್ದ ಕ್ಸಿಯಾವೋ ಅಕ್ಟೋಬರ್ 2ರಂದು ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಆ ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ತುಂಬಿ ಮನೆಯ ಹಿಂಭಾಗದಲ್ಲಿ ಎಸೆದಿದ್ದಳು.
Advertisement
ಕೃತ್ಯದ ಬಳಿಕ ಈ ಜೋಡಿಯು ತೈವಾನ್‍ಗೆ ಓಡಿಹೋಗಿ ಸುಮಾರು ಒಂದು ತಿಂಗಳು ಇಂಟರ್ನೆಟ್ ಕೆಫೆಯಲ್ಲಿ ತಲೆಮರೆಸಿಕೊಂಡಿದ್ದರು. ಈ ಕುರಿತು ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನಿನ್ನ ಮಗು ಎಲ್ಲಿದೆ ಎಂದು ಪೊಲೀಸರು ವಿಚಾರಣೆ ವೇಳೆ ಕ್ಸಿಯಾವೋಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಆರೋಪಿಯು, ಆ ಮಗುವನ್ನು ಹುಟ್ಟಿದ ದಿನವೇ ಎಸೆದಿದ್ದೇನೆ ಎಂದು ಸತ್ಯ ಒಪ್ಪಿಕೊಂಡಿದ್ದಾಳೆ. ಬಳಿಕ ಮಹಿಳೆ ತಿಳಿಸಿದ ಜಾಗದಲ್ಲಿ ಪರಿಶೀಲನೆ ನಡೆಸಿದಾಗ ಮಗುವಿನ ಅವಶೇಷಗಳನ್ನು ಪತ್ತೆಯಾಗಿವೆ.