ತೈಪೆ: ಚೀನಾ 71 ಯುದ್ಧ ವಿಮಾನಗಳನ್ನು ಹಾರಿಸಿದ ಬೆನ್ನಲ್ಲೇ ತೈವಾನ್(Taiwan) ತನ್ನ ಪ್ರಜೆಗಳಿಗೆ ಮಿಲಿಟರಿ ಸೇವೆಯನ್ನು(Military service) ಒಂದು ವರ್ಷ ಕಡ್ಡಾಯ ಮಾಡಿದೆ.
ಚೀನಾದಿಂದ(China) ಬೆದರಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯ ಮಿಲಿಟರಿ ಸೇವೆಯನ್ನು ನಾಲ್ಕು ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸುವುದಾಗಿ ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್(Tsai Ing-wen) ಹೇಳಿದ್ದಾರೆ.
Advertisement
ಯಾರೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಶಾಂತಿ ಆಕಾಶದಿಂದ ಬೀಳುವುದಿಲ್ಲ. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಪ್ರಸ್ತುತ ಇರುವ ನಾಲ್ಕು ತಿಂಗಳ ತರಬೇತಿ ಸಾಲುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಿಂತಿದ್ದ ವೇಳೆ ಆಕಸ್ಮಿಕ ಬೆಂಕಿ- ಮೂರು ಬಸ್‍ಗಳು ಬೆಂಕಿಗಾಹುತಿ
Advertisement
Advertisement
2024 ರಿಂದ ಇದು ಜಾರಿಗೆ ಬರಲಿದೆ. 2005 ಜನವರಿ 1 ರಿಂದ ಜನಿಸಿದ ಪುರುಷರಿಗೆ ಮಾತ್ರ ಕಡ್ಡಾಯ ಮಿಲಿಟರಿ ಸೇವೆ ಅನ್ವಯವಾಗಲಿದೆ. ಚೀನಾ ತೈವಾನ್ ತನ್ನ ಪ್ರದೇಶದ ಭಾಗ ಎಂದು ಪರಿಗಣಿಸುತ್ತಿದೆ. ಅಗತ್ಯವಿದ್ದರೆ ಬಲವಂತವಾಗಿ ತೈವಾನ್ ವಶ ಪಡಿಸಲಾಗುವುದು ಎಂದು ಹೇಳಿತ್ತು.
Advertisement
ಸೋಮವಾರ ಮುಂಜಾನೆ 6 ಗಂಟೆ ವೇಳೆ ಚೀನಾದ 71 ಯುದ್ಧ ವಿಮಾನಗಳು ಹಾಗೂ 7 ನೌಕಾ ಹಡಗುಗಳು ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಲೀಮು ನಡೆಸಿತ್ತು. ಈವರೆಗೆ ಚೀನಾ ನಡೆಸಿರುವ ದೈನಂದಿನ ತಾಲೀಮುಗಳಿಗಿಂತಲೂ ಇದು ಅತೀ ದೊಡ್ಡದಾದ ಮಿಲಿಟರಿ (Chinese Military Aircraft) ಶಕ್ತಿ ಪ್ರದರ್ಶನ ನಡೆಸಿದೆ ಎಂದು ವರದಿಯಾಗಿತ್ತು.