ತೈವಾನ್, ತೈಪೆ: ರೈಲು ಹಳಿ ತಪ್ಪಿದ ಪರಿಣಾಮ 18 ಜನರು ಸಾವನ್ನಪ್ಪಿ, 160ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಈಶಾನ್ಯ ತೈವಾನ್ ಯಿಲಾನ್ ನಲ್ಲಿ ಭಾನುವಾರ ನಡೆದಿದೆ ಎಂದು ವರದಿಗಳು ಪ್ರಕಟವಾಗಿವೆ.
ರೈಲು ಹಳಿ ತಪ್ಪಿದ ಪರಿಣಾಮ ಬೋಗಿಗಳು ಒಂದಕ್ಕೊಂದು ಡಿಕ್ಕಿ ಆಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ರೈಲಿನಲ್ಲಿ ಒಟ್ಟು 366 ಜನರು ಪ್ರಯಾಣಿಸುತ್ತಿದ್ದರು. ನಜ್ಜುಗುಜ್ಜಾದ ಬೋಗಿಗಳಲ್ಲಿ ಇನ್ನೂ 30 ಜನರು ಸಿಲುಕಿದ್ದಾರೆ ಎಂದು ಸ್ಥಳೀಯ ಸರ್ಕಾರ ಮಾಧ್ಯಮಗಳಿಗೆ ತಿಳಿಸಿದೆ.
ಈಗಾಗಲೇ ಘಟನಾ ಸ್ಥಳಕ್ಕೆ 12ಕ್ಕೂ ಅಧಿಕ ಮಿಲಟರಿ ಪಡೆಗಳು ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಎಲ್ಲ ಪ್ರವಾಸಿಗರನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದು ತೈವಾನ್ ಅಧ್ಯಕ್ಷ ತ್ಸಾಯ್ ಇಂಗ್-ವೆನ್ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ರೈಲಿಗೆ ಕೆಲ ಬೋಗಿಗಳು ಮಾತ್ರ ಜಖಂಗೊಂಡಿದ್ದು, ಉಳಿದಂತೆ ಎಲ್ಲವು ಸುರಕ್ಷಿತವಾಗಿದೆ. ಅಧಿಕಾರಿಗಳು ರೈಲಿನಲ್ಲಿ ವಿದೇಶಿ ಪ್ರವಾಸಿಗರು ಪ್ರಯಾಣಿಸುತ್ತಿದ್ದರಾ ಎಂಬುದರ ಬಗ್ಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಡೆಪ್ಯೂಟಿ ಚೀಫ್ ಲು ಚಿಹೆ-ಶೆನ್ ತಿಳಿಸಿದ್ದಾರೆ.
ಅಮೃತಸರ ರೈಲು ದುರಂತ:
ರಾವಣ ಸಂಹಾರದ ಕಾರ್ಯಕ್ರಮವನ್ನು ನೋಡುತ್ತಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ 60ಕ್ಕೂ ಹೆಚ್ಚು ಜನ ಧಾರುಣವಾಗಿ ಮೃತಪಟ್ಟಿರುವ ಘಟನೆ ಪಂಜಾಬ್ ರಾಜ್ಯದ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ನಡೆದಿತ್ತು.
ವಿಜಯದಶಿಮಿ ಹಿನ್ನೆಯಲ್ಲಿ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ರಾವಣನ ಪ್ರತಿಕೃತಿ ಸಂಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದು ಕೆಲವರು ರೈಲು ಹಳಿ ಮೇಲೆ ನಿಂತಿದ್ದರು. ಈ ವೇಳೆ ರೈಲು ಹಳಿ ಮೇಲೆ ಜಮಾಯಿಸಿದ್ದ ಜನರ ಮೇಲೆ ಏಕಾಏಕಿ ರೈಲು ಹರಿದ ಪರಿಣಾಮ 60ಕ್ಕೂ ಅಧಿಲ ಜನರು ಸಾವನ್ನಪ್ಪಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv