ವಿಜಯಪುರ ತಹಶೀಲ್ದಾರ್ ಗೆ ಅವಾಜ್ ಹಾಕಿದ ಕಾರ್ಪೊರೇಟರ್, ಕರವೇ ಮುಖಂಡ

Public TV
1 Min Read
BIJ AWAJ copy

ವಿಜಯಪುರ: ಸೌರ ವಿದ್ಯುತ್ ತಯಾರಿಕಾ ಘಟಕದ ಭೂ ಪರಿವರ್ತನೆ ಕಡತ ಹಾಗೂ ಸ್ಥಳ ಪರಿಶೀಲನೆಗೆ ಮುಂದಾದ ತಹಶೀಲ್ದಾರ್ ಮೇಲೆ ಕಾರ್ಪೋರೇಟರ್ ಗಲಾಟೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ತಾಲೂಕಿನ ತಹಶೀಲ್ದಾರ್ ರವಿಚಂದ್ರ ಮೇಲೆ ಮಹಾನಗರ ಪಾಲಿಕೆಯ ವಾರ್ಡ್ 14ರ ಸದಸ್ಯ ರವೀಂದ್ರ ಲೋಣಿ ಹಾಗೂ ಕರವೇ ಮುಖಂಡ ಸೋಮಶೇಖರ್ ಗಣಾಚಾರಿ ಗರಂ ಆಗಿ ಆವಾಜ್ ಹಾಕಿದ್ದಾರೆ. ಒಂದು ತಿಂಗಳಾದರೂ ಒಂದು ಫೈಲ್ ಗೆ ಸಹಿ ಮಾಡಿ ಕೊಟ್ಟಿಲ್ಲ ಎಂದು ಆವಾಜ್ ಹಾಕಿದ್ದಾರೆ.

ಈ ಹಿಂದಿನ ತಹಶೀಲ್ದಾರ್ ಕಡತ ಹಾಗೂ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನೀವ್ಯಾಕೆ ಪುನಃ ಪರಿಶೀಲಿಸುತ್ತೀರಿ. ಕರೆ ಮಾಡಿದಾಗ ಫೋನ್ ರಿಸೀವ್ ಮಾಡಿಲ್ಲವೆಂದು ಗರಂ ಆಗಿ ಕಾರ್ಪೋರೇಟರ್ ರವೀಂದ್ರ ಲೋಣಿ ಮತ್ತು ಸೋಮಶೇಖರ್ ತಹಶೀಲ್ದಾರ್ ಮೇಲೆ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಪರವಾನಿಗೆ ನೀಡಬೇಕು ಕಡತ ತಪಾಸಣೆ ಹಾಗೂ ಸ್ಥಳ ಪರಿಶೀಲನೆ ಮಾಡಬಾರದೆಂದು ಒತ್ತಾಯಿಸಿದ್ದಾರೆ.

bij

ಕರವೇ ಮುಖಂಡ ಸೋಮಶೇಖರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲವು ಬ್ರೋಕರ್ ಗಳಿದ್ದಾರೆ, ಅವರಿಗೆ ಹಣ ಬಿಟ್ಟು ಬೇರೆನು ಇಲ್ಲ.  ತುಂಬಾ ಬಾರಿ ಮನವಿ ಮಾಡಿಕೊಂಡಿದ್ದೇನೆ. ನಾವು ಪರಿಶೀಲನೆ ನಡೆಸುವುದನ್ನ ಬೇಡ ಎಂದಿಲ್ಲ. ನಾವು ಸಮಾಧಾನವಾಗಿ ಮಾತನಾಡಿದ್ದು, ಅವಾಚ್ಯ ಶಬ್ದದಿಂದ ಮಾತನಾಡಿಲ್ಲ. ಎರಡು ತಿಂಗಳಾದರು ನಮ್ಮ ಫೈಲಿಗೆ ಸಹಿ ಮಾಡಿಲ್ಲ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article