ʻಕೆಂಡಸಂಪಿಗೆʼ, ಟಗರು ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಮಾನ್ವಿತಾ ಕಾಮತ್ (Manvitha Kamath) ಅವರು ಇದೀಗ ಶಿಕ್ಷಕಿಯಾಗಿ (Teacher) ಬರುತ್ತಿದ್ದಾರೆ. ಅಮ್ಮನ ಸೀರೆಯುಟ್ಟು ಟೀಚರ್ ಆಗಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ (Sandalwood) ಪ್ರತಿಭಾನ್ವಿತ ನಾಯಕಿಯಾಗಿ ಮಿಂಚ್ತಿರುವ ಮಾನ್ವಿತಾ ಕಾಮತ್ (Manvitha Kamath) ಅವರು ಸಿನಿಮಾ, ಫೋಟೋಶೂಟ್ ಅಂತಾ ಬ್ಯುಸಿಯಾಗಿದ್ದಾರೆ. ತಾಯಿ (Mother) ಸುಜಾತಾ ಕಾಮತ್ ಅವರ ಆರೋಗ್ಯದ ಆರೈಕೆಯತ್ತ ಕೂಡ ಗಮನ ನೀಡುತ್ತಿದ್ದಾರೆ.
View this post on Instagram
ಇದೀಗ ಅಮ್ಮನ ಚೆಂದದ ಸೀರೆಯಟ್ಟು ಕ್ಯೂಟ್ ಆಗಿ ನಗುತ್ತಾ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುತ್ತಿರುವ ನಟಿ ಮಾನ್ವಿತಾ ಅವರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿಯ ಟ್ರಡಿಷನಲ್ ಲುಕ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಚೊಚ್ಚಲ ಸಿನಿಮಾ ಟೈಟಲ್ ಅನೌನ್ಸ್‌ಮೆಂಟ್‌ಗೆ ಕೌಂಟ್‌ಡೌನ್: ಯುವ ರಾಜ್‌ಕುಮಾರ್ ಟೆಂಪಲ್ ರನ್
ಸದ್ಯ ತಬಲಾ ನಾಣಿ ನಿರ್ಮಾಣ ಹೊಸ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್‌ಗೆ (Lovely Star Prem) ಜೋಡಿಯಾಗಿ ಮಾನ್ವಿತಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಟೀಚರ್ ರೋಲ್‌ನಲ್ಲಿ ʻಟಗರುʼ ನಟಿ ಮಾನ್ವಿತಾ ನಟಿಸುತ್ತಿದ್ದಾರೆ.