Wednesday, 19th June 2019

Recent News

2 months ago

ಹೊಸ ತಿರುವು ಪಡೆದುಕೊಂಡ ಶಾಸಕ ತಿಪ್ಪಾರೆಡ್ಡಿ-ಸಿಇಓ ಸತ್ಯಭಾಮಾ ಜಟಾಪಟಿ

ಚಿತ್ರದುರ್ಗ: ಸೋಮವಾರ ನಡೆದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಸತ್ಯಭಾಮಾ ನಡುವೆ ನಡೆದ ಜಟಾಪಟಿ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಇಓ ಸತ್ಯಭಾಮಾರ ಪರವಾಗಿ ಕಾಡುಗೊಲ್ಲ ಸಮಾಜ ಮುಖಂಡರು ಬ್ಯಾಟಿಂಗ್ ಮಾಡಿದ್ದು, ಶಾಸಕರ ವಿರುದ್ಧ ಪ್ರತಿಭಟನೆ ನಡೆಸಲು ಚರ್ಚೆ ನಡೆಸುತ್ತಿದ್ದಾರೆ. ಕಾಡುಗೊಲ್ಲ ಸಮಾಜ ಮುಖಂಡರ ಪ್ರತಿಭಟನೆಯ ವಿಷಯ ತಿಳಿದ ಸಿಇಓ ಸತ್ಯಭಾಮಾ, ವೃತ್ತಿ ಜೀವನದಲ್ಲಿ ಇಂಥ ಸವಾಲು ಎದುರಿಸಿದ್ದೇನೆ. ಸರ್ಕಾರಿ ಕೆಲಸದಲ್ಲಿ ಇಂತಹ ವ್ಯಕ್ತಿಗಳನ್ನು ನೋಡಿದ್ದೇನೆ. ನಾನು ಐಎಎಸ್ ಕೇಡರ್ ಅಧಿಕಾರಿಯಾಗಿದ್ದು, ಶಾಸಕರು, ಅವರ ಬೆಂಬಲಿಗರಿಗೆ […]

3 months ago

ಗಂಡ ಬಿಜೆಪಿ ಲೋಕಸಭಾ ಅಭ್ಯರ್ಥಿ – ಹೆಂಡ್ತಿ ಕಾಂಗ್ರೆಸ್ ಕಟ್ಟಾಳು!

– ಬಳ್ಳಾರಿ ಕದನ ಕಣದಲ್ಲಿ ವಿಶಿಷ್ಟ ಪರಿಸ್ಥಿತಿ ಬಳ್ಳಾರಿ: ಗಣಿನಾಡಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಕಾವು ಏರುತ್ತಿದ್ದಂತೆ ಚುನಾವಣಾ ಕಾವು ಕೂಡ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ಪತ್ನಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರಾದರೆ, ಪತಿ ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಜನ ಯಾರನ್ನೂ ನಂಬಿ ಮತ ಹಾಕಬೇಕು ಎಂದು ಗೊಂದಲದಲ್ಲಿದ್ದಾರೆ. ಅಣ್ಣ ಒಂದು ಪಕ್ಷದಲ್ಲಿದ್ದರೆ ತಮ್ಮ...

ಸಿದ್ದರಾಮಯ್ಯ ಊರಲ್ಲೇ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ..!

4 months ago

ಮೈಸೂರು: ಮೈಸೂರು ಜಿಲ್ಲಾಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಗೆ ಕೈ ಕೊಡಲು ಜೆಡಿಎಸ್ ನಿರ್ಧರಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಲು ಜೆಡಿಎಸ್ ಮುಂದಾಗಿದ್ದು, ಈ ಹಿಂದೆ 30 ತಿಂಗಳ ಅವಧಿಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳಲಾಗಿತ್ತು. ಅಧ್ಯಕ್ಷರಾಗಿ ಜೆಡಿಎಸ್, ಉಪಾಧ್ಯಕ್ಷರಾಗಿ...

ಮೈಸೂರಿನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಕೆ: ಸಾರಾ ಮಹೇಶ್

4 months ago

ಮೈಸೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇದ್ದರೂ ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮುಂದುವರಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಸಚಿವರು, ಮೈಸೂರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ...

ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

4 months ago

ಯಾದಗಿರಿ: ಸರ್ಕಾರದಿಂದ ಸಿಗಬೇಕಾದ ಕೂಲಿ ಹಣ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸಿದ ಕಾರ್ಮಿಕ ಮಹಿಳೆಯೊಬ್ಬರು ಜಿ.ಪಂ ಸಿಇಓ ಅವರನ್ನು ಪ್ರಶ್ನೆ ಮಾಡಿದ್ದರು. ಈ ವೇಳೆ ನನಗೆ ಕಳೆದ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದು ಯಾದಗಿರಿ ಜಿ.ಪಂ ಸಿಇಓ ಕವಿತಾ ಮನ್ನಿಕೇರಿ...

ಉದ್ಯೋಗ ಖಾತ್ರಿ ಯೋಜನೆಯ ಹಣ ಗುಳಂ ಮಾಡಿದ್ರಾ ಅಧಿಕಾರಿಗಳು!

5 months ago

-ಮಾಜಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ 26 ಜನರ ವಿರುದ್ಧ ದೂರು ದಾಖಲು ಕೊಪ್ಪಳ: ಬೋಗಸ್ ಬಿಲ್ ಮೂಲಕ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಎತ್ತುವಳಿ ಆರೋಪದ ಹಿನ್ನಲೆ ಮಾಜಿ ಸಚಿವ ಶಿವರಾಜ್ ತಂಗಡಗಿ ಮತ್ತು ಕೊಪ್ಪಳ ಜಿಲ್ಲಾ ಪಂಚಾಯತ ಅಧಿಕಾರಿಗಳು...

ಸಂಖ್ಯಾ ಬಲವಿದ್ದರೂ ಬಿಜೆಪಿ ಕೈ ತಪ್ಪಿದ ಅಧ್ಯಕ್ಷ ಸ್ಥಾನ – ಗದ್ದುಗೆ ಪಡೆದ ಕಾಂಗ್ರೆಸ್

5 months ago

ವಿಜಯಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿಯಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಶಿವಯೋಗಿ ನೇದಲಗಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಇತ್ತ ಸಂಖ್ಯಾಬಲವಿದ್ದರು ಬಿಜೆಪಿ ಪಕ್ಷಕ್ಕೆ ಸ್ಥಾನ ಕೈ ತಪ್ಪಿದೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಕಾಂಗ್ರೆಸ್...

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಭುಗಿಲೆದ್ದ ಭಿನ್ನಮತ – ಅಧ್ಯಕ್ಷಗಾದಿಗೆ ಬಿಗ್ ಫೈಟ್

6 months ago

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ಹಾಗೂ ಕೃಷಿ ಸಚಿವರಾಗಿರುವ ಗೌರಿಬಿದನೂರು ಶಾಸಕ ಬೆಂಬಲಿಗರ ನಡುವಿನ ಭಿನ್ನಮತ ಸ್ಫೋಟಗೊಂಡಿದೆ. ಹಾಲಿ ಅಧ್ಯಕ್ಷರಾಗಿರುವ ಶಿವಶಂಕರರೆಡ್ಡಿ ಬೆಂಬಲಿತ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಅವರನ್ನು...