Tuesday, 20th November 2018

Recent News

1 week ago

ಮೊದಲು ಅಮಿತ್ ಶಾ ಹೆಸರನ್ನ ಬದಲಿಸಿ: ಯೋಗಿ ಆದಿತ್ಯನಾಥ್ ಗೆ ಸವಾಲ್

ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಗರಗಳ ಹೆಸರನ್ನು ಬದಲಾಯಿಸುತ್ತಿರುವುದಕ್ಕೆ ಖ್ಯಾತ ಇತಿಹಾಸಕಾರ ಹಾಗೂ ಆಲೀಗಢ ಮುಸ್ಲಿಂ ವಿವಿಯ ಗೌರವ ಪ್ರೊಫೆಸರ್ ಇರ್ಫಾನ್ ಹಬೀಬ್ ವ್ಯಂಗ್ಯವಾಡಿದ್ದಾರೆ. ಆಗ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಹೆಸರಿನಲ್ಲಿರುವ ಶಾ ಎನ್ನುವ ಅಕ್ಷರ ಪರ್ಶಿಯನ್ ಮೂಲದ್ದು, ಅದು ಗುಜರಾತಿಗೆ ಸೇರಿದ್ದಲ್ಲ. ಹೀಗಾಗಿ ಅವರ ಹೆಸರನ್ನು ಮೊದಲು ಬದಲಾಯಿಸುವ ಕುರಿತು ಬಿಜೆಪಿ ಚಿಂತಿಸಲಿ. ಅಲ್ಲದೇ ಗುಜರಾತ್ ಹೆಸರು ಕೂಡ ಪರ್ಶಿಯನ್ ಮೂಲದ್ದು, ಇದನ್ನು ಗುಜರಾತ್ರ ಎಂದು ಕರೆಯಲಾಗುತ್ತಿತ್ತು. […]

3 months ago

ರಾಷ್ಟ್ರಗೀತೆಗೆ ಅಡ್ಡಿ- ಮದರಸದ ಮಾನ್ಯತೆ ರದ್ದುಗೊಳಿಸಿದ ಯೋಗಿ ಸರ್ಕಾರ!

ಲಕ್ನೋ: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಕ್ಕಳು ರಾಷ್ಟ್ರಗೀತೆ ಹಾಡುತ್ತಿರುವಾಗ ಅಡ್ಡಿಪಡಿಸಿದ ಕ್ರಮಕ್ಕೆ ಮದರಸದ ಮಾನ್ಯತೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆಗಸ್ಟ್ 15ರಂದು ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಮದರಸದಲ್ಲಿ ಪ್ರಾಂಶುಪಾಲರು ಹಾಗೂ ಮುಸ್ಲಿಂ ಧರ್ಮಗುರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ನಂತರ ಮಕ್ಕಳು ಹಾಡುತ್ತಿದ್ದ ರಾಷ್ಟ್ರಗೀತೆಯನ್ನು ತಡೆದು, ಇದು ಇಸ್ಲಾಂಗೆ ವಿರೋಧವೆಂದು...

ನಾನು ಕರ್ನಾಟಕಕ್ಕೆ ಬಂದ್ರೆ ನಿಮ್ಗೇನ್ ಕಷ್ಟ- ಬೈಂದೂರಲ್ಲಿ ಸಿಎಂಗೆ ಯೋಗಿ ಆದಿತ್ಯನಾಥ್ ಪ್ರಶ್ನೆ

7 months ago

ಉಡುಪಿ: ನಾನು ಕರ್ನಾಟಕಕ್ಕೆ ಬಂದ್ರೆ ಸಿದ್ದರಾಮಯ್ಯ ಹರಿಹಾಯೋದ್ಯಾಕೆ? ಅವರಿಗೇನು ಕಷ್ಟ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಬಿ.ಎಂ ಸುಕುಮಾರ್ ಶೆಟ್ಟಿ ಪರ ಪ್ರಚಾರ ನಡೆಸಲು ಬಂದಿದ್ದ ಸಂದರ್ಭ ರಾಜ್ಯ...

ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ- ಹೆಚ್‍ಡಿಕೆ

9 months ago

ಮಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಯ ನಾಯಕರು ಭೋಗಿಯಾಗಿರೋದ್ರಿಂದ ಯೋಗಿಯನ್ನು ಕರೆಸಿಕೊಂಡಿದ್ದಾರೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಟಿ ವೇಳೆ ಬಿಜೆಪಿ ಜನಸುರಕ್ಷಾ ಜಾಥಾದ ಕುರಿತು ಮಾತನಾಡಿದ ಅವರು, ಕರಾವಳಿಯಲ್ಲಿ ಜನ ಆತಂಕದಲ್ಲಿದ್ದಾರೆ....

ಮೋದಿ, ಯುಪಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ರೇಪ್ ಸಂತ್ರಸ್ತೆ!

10 months ago

ಲಕ್ನೋ: ರೇಪ್ ಸಂತ್ರಸ್ತೆಯೊಬ್ಬರು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ಉನ್ನತ ಅಧಿಕಾರಿಗಳ ಪರಿಚಯವಿರುವುದರಿಂದ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ....

ಪ್ರಕಾಶ್ ರೈಗೆ ಪ್ರಶಸ್ತಿ ನೀಡದಂತೆ ಹಿಂದೂ ಸಂಘಟನೆ ಪ್ರತಿಭಟನೆ- ರೈ ಪ್ರತಿಕ್ರಿಯಿಸಿದ್ದು ಹೀಗೆ

1 year ago

ಮಂಗಳೂರು, ಉಡುಪಿ: ಕಳೆದ 12 ವರ್ಷಗಳಿಂದ ವಿವಾದವೇ ಇಲ್ಲದೆ, ತಣ್ಣಗೆ ನಡೆಯುತ್ತಿದ್ದ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಈ ಬಾರಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯ ಭಾರೀ ವಿರೋಧದ ನಡುವೆ ಡಾ. ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು...

ಉತ್ತರಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ `ಪಿಂಕ್ ಬಸ್’

1 year ago

ಲಕ್ನೋ: ಅತ್ಯಾಚಾರದಂತಹ ಪ್ರಕರಣಗಳಿಗೆ ಬ್ರೇಕ್ ಹಾಕಲು ಹಾಗೂ ಪ್ರಯಾಣದ ವೇಳೆ ಮಹಿಳೆಯರ ಸುರಕ್ಷತೆಗಾಗಿ ಉತ್ತರಪ್ರದೇಶದಲ್ಲಿ ಗುಲಾಬಿ ಬಣ್ಣದ ಹವಾನಿಯಂತ್ರಿತ ಬಸ್‍ಗಳನ್ನ ರಸ್ತೆಗಿಳಿಸಲು ನಿರ್ಧರಿಸಲಾಗಿದೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ನಂತರ ಕೇಂದ್ರ ಸರ್ಕಾರ ನಿಧಿ ಸ್ಥಾಪಿಸಿತ್ತು. ಇದೀಗ ಪಿಂಕ್ ಬಸ್...

ಉತ್ತರಪ್ರದೇಶದ ಸದನದೊಳಗೆ ಮೊಬೈಲ್ ಫೋನ್ ಬ್ಯಾನ್

1 year ago

ಲಕ್ನೋ: ಉತ್ತರಪ್ರದೇಶದ ವಿಧಾನಸಭೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಸದನದೊಳಗೆ ಶಾಸಕರು ಮೊಬೈಲ್ ಫೋನ್ ತರದಂತೆ ಖಡಕ್ ಸೂಚನೆ ನೀಡಿದ್ದಾರೆ. ಬುಧವಾರ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಭದ್ರತಾ ಪಡೆಗಳು ಶೋಧಕಾರ್ಯ ನಡೆಸುತ್ತಿದ್ದ ವೇಳೆ ವಿರೋಧ ಪಕ್ಷದ...