Wednesday, 11th December 2019

1 year ago

ಹಲ್ಲೆ ಮಾಡಿದ್ದಕ್ಕೆ ಮನನೊಂದು ಕಾಂಗ್ರೆಸ್ ಕಾರ್ಯಕರ್ತ ಆತ್ಮಹತ್ಯೆ!

ಕಲಬುರಗಿ: ತನ್ನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಕ್ಕೆ ಮನನೊಂದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬುರು ಗ್ರಾಮದಲ್ಲಿ ನಡೆದಿದೆ. ಭೀಮರಾಯ್ ಆತ್ಮಹತ್ಯೆ ಮಾಡಿಕೊಂಡ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇವರು ಮೂಲತಃ ಗೊಬ್ಬುರು ಗ್ರಾಮದ ನಿವಾಸಿ. ಕಳೆದ ವಿಧಾನಸಭಾ ಫಲಿತಾಂಶ ಹೊರಬಿದ್ದ ನಂತರ ಗ್ರಾಮದಲ್ಲಿ ನಡೆದ ವಿಜಯೋತ್ಸವ ಸಮಾರಂಭ ನಡೆದಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತ ಹೂಗಾರ ಗುತ್ತೇದಾರ್ ಎಂಬವರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಮೂರು ದಿನಗಳ ಹಿಂದೆ ಹೂಗಾರ್ ಮನೆಯವರು ಭೀಮರಾಯ […]

1 year ago

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಮೇಲೆ ಮರಬಿದ್ದು ಓರ್ವ ಸಾವು, ಮೂವರ ಸ್ಥಿತಿ ಗಂಭೀರ

ಮಡಿಕೇರಿ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಮರ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿ ಬಳಿ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಗ್ರಾಮದ ಪಂಚವಳ್ಳಿ ನಿವಾಸಿ ರಾಜು (36) ಮೃತ ಕಾರ್ಮಿಕ. ಚಾಲಕ ಸ್ವಾಮಿ ಹಾಗೂ ಜೊತೆಯಲ್ಲಿದ್ದ ಸುನೀಲ್ (28) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಮಿಕರು...

ಪೌರಕಾರ್ಮಿಕರಿಂದ ಬರಿಗೈಯಲ್ಲೇ ಮ್ಯಾನ್ ಹೋಲ್ ಸ್ವಚ್ಛತಾ ಕಾರ್ಯ

2 years ago

ಮೈಸೂರು: ದೇಶದ ನಂಬರ್ ಓನ್ ಸ್ವಚ್ಛ ನಗರಿ ಎಂಬ ಪಟ್ಟ ಕಳೆದುಕೊಂಡ ಚಿಂತೆಯಲ್ಲಿ ಮೈಸೂರು ಮಹಾನಗರಪಾಲಿಕೆ ಇದೆ. ಆದರೆ ನಂಬರ್ 1 ಪಟ್ಟಕ್ಕಿಂತಾ ಮೈಸೂರನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರನ್ನು ಮೊದಲು ಮನುಷ್ಯರಂತೆ ನೋಡುವ ಮನಃಸ್ಥಿತಿ ಬೆಳೆಸಿಕೊಳ್ಳುವ ಅಗತ್ಯ ಇದೆ. ಮೈಸೂರು ಮಹಾನಗರಪಾಲಿಕೆ...

ಬೆಳೆ ನಷ್ಟ ಪರಿಹಾರ ಆಯ್ತು, ಇದೀಗ ನರೇಗಾ ಸರದಿ- ಕೂಲಿ ಕಾರ್ಮಿಕರ ಖಾತೆಗೆ ಬರೀ 1 ರೂ. ಜಮೆ

2 years ago

ಚಿತ್ರದುರ್ಗ: ಏಟು ತಿಂದ ರೈತರಿಗೆ ನೂರು ರೂಪಾಯಿಯ ಚೆಕ್ ನೀಡಿದ್ದಾಯ್ತು. ಬೆಳೆ ಪರಿಹಾರ ರೂಪದಲ್ಲಿ 1 ರೂ. ಕೊಟ್ಟು ಅವಮಾನ ಮಾಡಿದ್ದಾಯ್ತು. ಇದೀಗ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರ ಸರದಿ. ಬಿರುಬಿಸಿಲಲ್ಲಿ ದುಡಿದವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು ಬರೀ...

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು

3 years ago

ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಗಣಿ ಸಂಸ್ಥೆಯಾದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಕಂಪೆನಿಯು ವಿಭಾಗೀಯ ಸ್ಟೋರ್ ಪ್ರಾರಂಭಿಸಲು ಸಹಕಾರ ಸಂಘದ ವ್ಯವಹಾರಗಳನ್ನ ನಿಲ್ಲಿಸಿದ್ದು ಸುಮಾರು ವರ್ಷಗಳಿಂದ ದುಡಿದ ಕಾರ್ಮಿಕರನ್ನ...