Wednesday, 17th July 2019

Recent News

3 days ago

ಪ್ರಾಣ ಪಣಕ್ಕಿಟ್ಟು ನದಿ ದಾಟುತ್ತಾರೆ ವೃದ್ಧರು, ಮಹಿಳೆಯರು: ವಿಡಿಯೋ

ಭೋಪಾಲ್: ಬಿದಿರಿನಿಂದ ನಿರ್ಮಾಣ ಮಾಡಿದ ಸೇತುವೆ ಮೇಲೆ ಸಾಗುವುದಕ್ಕೆ ಕೆಲವರು ಭಯಪಡುತ್ತಾರೆ. ಆದರೆ ಮಧ್ಯಪ್ರದೇಶದಲ್ಲಿ ಪ್ರಾಣ ಪಣಕ್ಕಿಟ್ಟು ಕೇವಲ ಎರಡು ಹಗ್ಗದ ಸಹಾಯದಿಂದ ಮಹಿಳೆಯರು, ವೃದ್ಧರು ನದಿ ದಾಟುತ್ತಾರೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಸೋನ್ಕಾಚ್ ತಹಸಿಲ್ ಅರಣ್ಯ ಪ್ರದೇಶದಲ್ಲಿ ಹರಿಯುವ ನದಿಗೆ ಸೇತುವೆ ಇಲ್ಲ. ಹೀಗಾಗಿ ಅಲ್ಲಿನ ಗ್ರಾಮಸ್ಥರು ನದಿಗೆ ಅಡ್ಡಲಾಗಿ ಕಟ್ಟಿರುವ ಎರಡು ಹಗ್ಗಗಳ ಸಹಾಯದಿಂದ ನದಿ ದಾಟುತ್ತಿದ್ದಾರೆ. ಗೃಹೋಪಯೋಗಿ ವಸ್ತುಗಳನ್ನು, ಆಹಾರ ಪದಾರ್ಥಗಳನ್ನು ತರಲು ಗ್ರಾಮಸ್ಥರು ನದಿಯನ್ನು ದಾಟಿಯೇ ಬರಬೇಕು. ಮಹಿಳೆಯರು ಒಂದು ಕೈಯಲ್ಲಿ […]

2 weeks ago

ಮಂಡ್ಯದಲ್ಲಿ ಕುಡಿಯುವ ನೀರಿಗೆ ಸದ್ದು ಮಾಡ್ತಿದೆ ಸೇಡಿನ ರಾಜಕೀಯ

ಮಂಡ್ಯ: ಲೋಕಸಭಾ ಚುನಾವಣೆಯ ಬಳಿಕ ಮಂಡ್ಯದಲ್ಲಿ ಸೇಡಿನ ರಾಜಕೀಯದ ಸದ್ದು ಜೋರಾಗಿದ್ದು, ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಪ್ರಾರಂಭವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು, ಮಂಡ್ಯ ತಾಲೂಕಿನ ಬೇವುಕಲ್ಲುಕೊಪ್ಪಲು ಗ್ರಾಮದಲ್ಲಿ ಸುಮಲತಾಗೆ ಹೆಚ್ಚು ಲೀಡ್ ಬಂದಿದೆ ಎಂಬ ಕಾರಣಕ್ಕೆ ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಚುನಾವಣೆಗೂ...

ಇದ್ದಕ್ಕಿದ್ದಂತೆ ದಿಢೀರ್ ಬಿರುಕು, ಕುಸಿಯುವ ಭೀತಿಯಲ್ಲಿ ಮನೆಗಳು – ಆತಂಕದಲ್ಲಿ ಗ್ರಾಮಸ್ಥರು

2 weeks ago

ಬಾಗಲಕೋಟೆ: ಇದ್ದಕ್ಕಿದ್ದಂತೆ ಮನೆಗಳಲ್ಲಿ ದಿಢೀರ್ ಬಿರುಕು ಕಾಣಿಸಿಕೊಳ್ಳುತ್ತಿರುವ ಘಟನೆ ಬಾಗಲಕೋಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಮನೆಗಳಲ್ಲಿ ದಿಢೀರ್ ಬಿರುಕು ಬಿಟ್ಟಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಕೇವಲ ಮೂರೇ ದಿನಗಳಲ್ಲಿ ಮನೆ ಗೋಡೆಗಳಲ್ಲಿ ವಿಪರೀತ ಬಿರುಕು ಕಾಣಿಸಿಕೊಂಡು ಮನೆಗಳು ಕುಸಿಯುವ ಭೀತಿಯಲ್ಲಿ...

ಕುಸಿದ ಜಾಗದಲ್ಲೇ ಭೂಮಿ ತಾಯಿಗೆ ವಿಶೇಷ ಪೂಜೆ

2 weeks ago

ಬೆಳಗಾವಿ: ಜಿಲ್ಲೆಯ ಕುಳ್ಳೂರ ಗ್ರಾಮದಲ್ಲಿ ಭೂಮಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯದಿಂದ ದೇವರ ಮೊರೆ ಹೋಗಿದ್ದಾರೆ. ಕುಳ್ಳೂರ ಗ್ರಾಮದಲ್ಲಿ ಏಕಾಏಕಿ ಕಳೆದ ಹದಿನೈದು ದಿನಗಳಿಂದ ಕಿ.ಮೀ ಗಟ್ಟಲೆ ಭೂಮಿ ಬಾಯಿ ಬಿಡುತ್ತಿದೆ. ರಸ್ತೆ ಸೇರಿದಂತೆ ಜಮೀನುಗಳಲ್ಲಿ ಭೂಮಿ ಕುಸಿದು ಕಂದಕಗಳು ನಿರ್ಮಾಣ...

ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಯುವಕರಿಗೆ ಗ್ರಾಮಸ್ಥರಿಂದ ಥಳಿತ

2 weeks ago

ಚಿಕ್ಕಬಳ್ಳಾಪುರ: ಗ್ರಾಮದಲ್ಲಿ ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ಮೂವರು ಯುವಕರನ್ನು ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹಳೇಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ. ನಾಲ್ವರು ಯುವಕರು ಗ್ರಾಮದ ಸುತ್ತಮುತ್ತ ಅನುಮಾನಸ್ಪದವಾಗಿ ಓಡಾಡುತ್ತಿದ್ದನ್ನು ಕಂಡ ಗ್ರಾಮಸ್ಥರು ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ...

ಬೆಳಗಾವಿ ಏಕಾಏಕಿ ಕಿ.ಮೀ ಗಟ್ಟಲೇ ಬಾಯಿ ಬಿಟ್ಟ ಭೂಮಿ – ಗ್ರಾಮಸ್ಥರಲ್ಲಿ ಆತಂಕ

2 weeks ago

ಬೆಳಗಾವಿ: ಜಿಲ್ಲೆಯಲ್ಲೊಂದು ಭಯಾನಕ ಘಟನೆ ನಡೆದಿದ್ದು ಏಕಾಏಕಿ ಕಿ.ಮೀ ಗಟ್ಟಲೇ ಭೂಮಿ ಬಾಯಿ ಬಿಡುತ್ತಿದೆ. ಭೂಮಿ ಬಾಯಿ ಬಿಡುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುಳ್ಳುರು ಗ್ರಾಮದಲ್ಲಿ ಕಂಡು ಬಂದಿದೆ. ಈ ದೃಶ್ಯ ನೋಡಿದ ಇಲ್ಲಿನ ಜನರು ಅಕ್ಷರಶಃ ತತ್ತರಿಸಿ...

ರಾಮದೇವರ ಬೆಟ್ಟದಲ್ಲಿ ಎರಡು ಕರಡಿ ಪ್ರತ್ಯಕ್ಷ – ಜನರಲ್ಲಿ ಆತಂಕ

2 weeks ago

ಬೆಂಗಳೂರು: ರಾಮದೇವರ ಬೆಟ್ಟದಲ್ಲಿ ಕರಡಿ ಮತ್ತು ಕರಡಿ ಮರಿ ಕಾಣಿಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯ ಗ್ರಾಮದ ಬಳಿ ಇರುವಂತಹ ರಾಮದೇವರ ಬೆಟ್ಟದಲ್ಲಿ ಎರಡು ಕರಡಿಗಳು ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದೆ. ಕರಡಿಗಳನ್ನು ಕಂಡ...

ಮಳೆಯಾದ್ರೆ ಕೆರೆಯಾಗುತ್ತೆ ಗ್ರಾಮದ ಮುಖ್ಯರಸ್ತೆ

2 weeks ago

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಮೆದೆಕೆರೆನಹಳ್ಳಿ ಗ್ರಾಮದಲ್ಲಿ ಮಳೆಯಾದರೆ ಮುಖ್ಯರಸ್ತೆಯೇ ಕೆರೆಯಾಗಿ ಮಾರ್ಪಾಡು ಆಗುತ್ತದೆ. ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಮಳೆಯಾದರೆ ಸಾಕು ಇಲ್ಲಿನ ಮುಖ್ಯ ರಸ್ತೆ ಕೆರೆಯಾಗಿ ಮಾರ್ಪಾಡು ಆಗುತ್ತಿದ್ದು, ಶಾಲಾ...