Tag: Vijay Sethupathi

  • ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಿಂದ ಹೊರ ನಡೆದ ವಿಜಯ್ ಸೇತುಪತಿ- ಕಾರಣವೇನು?

    ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಿಂದ ಹೊರ ನಡೆದ ವಿಜಯ್ ಸೇತುಪತಿ- ಕಾರಣವೇನು?

    ಚೆನ್ನೈ: ಕೆಲ ದಿನಗಳ ಹಿಂದೆಯಷ್ಟೇ ನಟ ವಿಜಯ್ ಸೇತುಪತಿ, ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್‍ನಲ್ಲಿ ನಟಿಸುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ಕೂಡ ಸಿನಿಮಾ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು. ಆದರೆ ಇದೀಗ ಸಿನಿಮಾದಿಂದ ನಟ ವಿಜಯ್ ಸೇತುಪತಿ ಹೊರ ನಡೆದಿದ್ದು, ಮುರಳೀಧರನ್ ಅವರ ಮನವಿಯ ಮೇರೆಗೆ ಈ ನಿರ್ಧಾರ ಮಾಡಿದ್ದಾರೆ.

    ಮುರಳೀಧರನ್ ಬಯೋಪಿಕ್‍ನಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವುದು ಖಚಿತವಾಗುತ್ತಿದಂತೆ ತಮಿಳುನಾಡಿನಲ್ಲಿ ಹೊಸ ವಿವಾದ ಸೃಷ್ಟಿಯಾಗಿತ್ತು. 2009ರಲ್ಲಿ ಮುರಳೀಧರನ್ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖರ್ ವೈರಲ್ ಆಗಿತ್ತು. ಅಲ್ಲದೇ ಸಿನಿಮಾ ವಿರುದ್ಧ ಟ್ವಿಟ್ಟರಿನಲ್ಲಿ ಟ್ರೆಂಟ್ ಕೂಡ ಮಾಡಲಾಗಿತ್ತು.

    Vijay Sethupathi Muthiah Muralidaran

    ವಿವಾದ ಬೆನ್ನಲ್ಲೇ ಮುತ್ತಯ್ಯ ಮುರಳೀಧರನ್ ಅವರ ಮನವಿಯ ಮೇರೆಗೆ ವಿಜಯ್ ಸೇತುಪತಿ ಸಿನಿಮಾದಿಂದ ಹೊರನಡೆದಿದ್ದಾರೆ. ತನ್ನ ಕಾರಣದಿಂದ ನಟ ವಿಜಯ್ ಸೇತುಪತಿ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎಂದು ಮುರಳೀಧರನ್ ಹೇಳಿದ್ದಾರೆ.

    ಈ ಕುರಿತಂತೆ ಮುರಳೀಧರನ್ ತಮಿಳು ಭಾಷೆಯಲ್ಲೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬಯೋಪಿಕ್ ‘800’ ಕುರಿತಂತೆ ವಿವಾದಗಳು ಬಂದಿರುವುದರಿಂದ ನಾನು ಈ ಹೇಳಿಕೆ ನೀಡುತ್ತಿದ್ದೇನೆ. ತಪ್ಪು ಕಲ್ಪನೆಯಿಂದ ಹಲವರು ನಟ ವಿಜಯ್ ಸೇತುಪತಿ ಅವರನ್ನು ಚಿತ್ರದಿಂದ ದೂರ ಉಳಿಯುವಂತೆ ಒತ್ತಾಯಿಸಿದ್ದರು. ಅವರಿಗೆ ತೊಂದರೆಯಾಗಲು ನಾನು ಬಯಸುವುದಿಲ್ಲ. ಆದ್ದರಿಂದ ನಾನೇ ಅವರನ್ನು ಯೋಜನೆಯಿಂದ ಹೊರಗುಳಿಯುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದರು.

    vijay sethupathi muralitharan

    ನಾನು ಈ ಸಿನಿಮಾವನ್ನು ಉತ್ತಮ ಮಹತ್ವಾಕಾಂಕ್ಷಿ ಉದ್ದೇಶದಿಂದ ಒಪ್ಪಿಕೊಂಡಿದ್ದು, ಸಿನಮಾ ಹಲವು ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ. ಸದ್ಯ ಎದುರಾಗಿರುವ ಅಡೆತಡೆಗಳನ್ನು ಚಿತ್ರದ ತಯಾರಕರು ನಿವಾರಿಸುತ್ತಾರೆ ಎಂಬ ವಿಶ್ವಾಸವಿದೆ. ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ನನ್ನನ್ನು ಬೆಂಬಲಿಸಿದ ಅಭಿಮಾನಿಗಳು, ಮಾಧ್ಯಮಗಳಿಗೆ ನನ್ನ ಧನ್ಯವಾದ ಎಂದು ಮುರಳೀಧರನ್ ತಿಳಿಸಿದ್ದಾರೆ.

     

    View this post on Instagram

     

    நன்றி.. வணக்கம் ????????

    A post shared by Vijay Sethupathi (@actorvijaysethupathi) on

    2009ರ ಮೇನಲ್ಲಿ ಶ್ರೀಲಂಕಾದ ಸೇನೆ ಈಶಾನ್ಯ ಶ್ರೀಲಂಕಾದಲ್ಲಿ ವಾಸವಿದ್ದ ಅನೇಕ ಮಂದಿ ತಮಿಳಿಗರನ್ನು ಹೊಡೆದು ಹಾಕಿತ್ತು. ಅಂದು ಮುತ್ತಯ್ಯ ಮುರಳೀಧರನ್, ಇಂದು ನನಗೆ ಅತ್ಯಂತ ಸಂತೋಷದ ದಿನ ಎಂದು ಹೇಳಿದ್ದರು. ಈಗ ಈ ಕಾರಣಕ್ಕೆ ತಮಿಳುನಾಡಿನ ಕೆಲ ಚಿತ್ರ ಪ್ರೇಮಿಗಳು ಮತ್ತು ರಾಜಕಾರಣಿಗಳು ಸಾವಿರಾರು ತಮಿಳಿಗರು ಸತ್ತ ದಿನವನ್ನು ಸಂತೋಷದ ದಿನ ಎಂದಿದ್ದ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ತಮಿಳಿನ ನಟ ಅಭಿನಯಿಸುವುದು ಬೇಡ ಎಂದು ಆಗ್ರಹಿಸಿದ್ದರು. ಇದರ ಬೆನಲ್ಲೇ ಸ್ಪಷ್ಟ ನೀಡಿದ್ದ ಮುರಳೀಧರನ್, ಅಂದು ನಾನು ಹೇಳಿದ ಹೇಳಿಕೆಯನ್ನು ತಿರುಚಲಾಗಿದೆ. ಅಂದು ನಾನು ಅಮಾಯಕರು ಸತ್ತಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿರಲಿಲ್ಲ. ಸುಮಾರು ವರ್ಷದಿಂದ ನಡೆದುಕೊಂಡು ಬರುತ್ತಿದ್ದ ಯುದ್ಧ, ಘರ್ಷಣೆ ಇಲ್ಲಿಗೆ ಕೊನೆಯಾಗಿದೆ. ಅದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದೆ. ನಾನು ಎಂದು ಅಮಾಯಕರ ಕೊಲ್ಲುವುದನ್ನು ಬೆಂಬಲಿಸಿಲ್ಲ ಎಂದು ಮುತ್ತಯ್ಯ ಮುರಳೀಧರನ್ ಸ್ಪಷ್ಟಪಡಿಸಿದ್ದರು.

    800 motion poster 1200 1

  • ಅಮಾಯಕರ ಕೊಲ್ಲುವುದನ್ನು ನಾನೆಂದೂ ಬೆಂಬಲಿಸಿಲ್ಲ: ಮುತ್ತಯ್ಯ ಮುರಳೀಧರನ್

    ಅಮಾಯಕರ ಕೊಲ್ಲುವುದನ್ನು ನಾನೆಂದೂ ಬೆಂಬಲಿಸಿಲ್ಲ: ಮುತ್ತಯ್ಯ ಮುರಳೀಧರನ್

    – ಲೆಜೆಂಡ್ ಸ್ಪಿನ್ನರ್‌ಗೆ ಮುಳುವಾಯ್ತು 2009ರ ಹೇಳಿಕೆ
    – 2009ರ ಮೇಯಲ್ಲಿ ಎಲ್‍ಟಿಟಿಇ ಧ್ವಂಸ

    ಚೆನ್ನೈ: ಅಮಾಯಕರ ಕೊಲ್ಲುವುದನ್ನು ನಾನು ಎಂದೂ ಬೆಂಬಲಿಸಿಲ್ಲ ಎಂದು ಶ್ರೀಲಂಕಾ ತಂಡದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು ಹೇಳಿದ್ದಾರೆ.

    ಸದ್ಯ ತಮಿಳುನಾಡಿನಲ್ಲಿ ಒಂದು ವಿವಾದ ಸಖತ್ ಸದ್ದು ಮಾಡುತ್ತಿದೆ. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ‘800’ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಿರುವುದಕ್ಕೆ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುತ್ತಯ್ಯ 2009ರಲ್ಲಿ ತಮಿಳಿಗರ ವಿರುದ್ಧ ಹೇಳಿಕೆ ನೀಡಿದ್ದು, ಈ ಕಾರಣದಿಂದ ಅವರ ಸಿನಿಮಾದಲ್ಲಿ ವಿಜಯ್ ನಟಿಸಬಾರದು ಎಂದು ಹೇಳಲಾಗುತ್ತಿದೆ.

    Muttiah Muralitharan

    2009ರ ಮೇನಲ್ಲಿ ಶ್ರೀಲಂಕಾದ ಸೇನೆ ಈಶಾನ್ಯ ಶ್ರೀಲಂಕಾದಲ್ಲಿ ವಾಸವಿದ್ದ ಅನೇಕ ಮಂದಿ ತಮಿಳಿಗರನ್ನು ಹೊಡೆದು ಹಾಕಿತ್ತು. ಅಂದು ಮುತ್ತಯ್ಯ ಮುರಳೀಧರನ್, ಇಂದು ನನಗೆ ಅತ್ಯಂತ ಸಂತೋಷದ ದಿನ ಎಂದು ಹೇಳಿದ್ದರು. ಈಗ ಈ ಕಾರಣಕ್ಕೆ ತಮಿಳುನಾಡಿನ ಕೆಲ ಚಿತ್ರ ಪ್ರೇಮಿಗಳು ಮತ್ತು ರಾಜಕಾರಣಿಗಳು ಸಾವಿರಾರು ತಮಿಳಿಗರು ಸತ್ತ ದಿನವನ್ನು ಸಂತೋಷದ ದಿನ ಎಂದಿದ್ದ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ತಮಿಳಿನ ನಟ ಅಭಿನಯಿಸುವುದು ಬೇಡ ಎಂದು ಒತ್ತಾಯಿಸುತ್ತಿದ್ದಾರೆ.

    vijay sethupathi muralitharan

    ಈಗ ಇದೇ ವಿಚಾರವಾಗಿ ಹೇಳಿಕೆ ನೀಡಿರುವ ಮುತ್ತಯ್ಯ ಮುರಳೀಧರನ್, ಅಂದು ನಾನು ಹೇಳಿದ ಹೇಳಿಕೆಯನ್ನು ತಿರುಚಲಾಗಿದೆ. ಅಂದು ನಾನು ಅಮಾಯಕರು ಸತ್ತಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿರಲಿಲ್ಲ. ಸುಮಾರು ವರ್ಷದಿಂದ ನಡೆದುಕೊಂಡು ಬರುತ್ತಿದ್ದ ಯುದ್ಧ, ಘರ್ಷಣೆ ಇಲ್ಲಿಗೆ ಕೊನೆಯಾಗಿದೆ. ಅದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದೆ. ನಾನು ಎಂದು ಅಮಾಯಕರ ಕೊಲ್ಲುವುದನ್ನು ಬೆಂಬಲಿಸಿಲ್ಲ ಎಂದು ಮುತ್ತಯ್ಯ ತಿಳಿಸಿದ್ದಾರೆ.

    Muthiah Muralidara

    ನಾನು ನನ್ನ ಬಯೋಪಿಕ್ ಮಾಡಲು ಏಕೆ ಒಪ್ಪಿಗೆ ಸೂಚಿಸಿದ್ದೇನೆ ಎಂದರೆ, ನನ್ನ ಕಥೆ ಇನ್ನೊಬ್ಬರಿಗೆ ಸ್ಫೂತಿಯಾಗಲಿ. ನನ್ನ ಈ ಮಟ್ಟಕ್ಕೆ ತರಲು ಕಷ್ಟಪಟ್ಟ ನನ್ನ ತಾಯಿ ನನ್ನ ಕುಟುಂಬ ಮತ್ತು ಸ್ನೇಹಿತರ ಕಷ್ಟ ಎಲ್ಲರಿಗೂ ಅರ್ಥವಾಗಲಿ ಎಂದು ಬಯೋಪಿಕ್ ಮಾಡಲು ಒಪ್ಪಿದ್ದೇನೆ. ನಾನು 30 ವರ್ಷ ಯದ್ಧದ ಮಧ್ಯದಲ್ಲಿ ಬೆಳೆದಿದ್ದೇನೆ. ನಾನು ಏಳು ವರ್ಷ ಇರುವಾಗಲೇ ನನ್ನ ತಂದೆ ತೀರಿಕೊಂಡರು. ಬಹಳ ದಿನ ನಾವು ಬೀದಿಯಲ್ಲಿ ಬದುಕಿದ್ದೇವೆ ಎಂದು ಹೇಳಿದ್ದಾರೆ.

    800 motion poster 1200 1

    2009ರ ಮೇ – ಎಲ್‍ಟಿಟಿಇ ಧ್ವಂಸ
    ಈಶಾನ್ಯ ಶ್ರೀಲಂಕಾದಲ್ಲಿ ಹಿಂದೂ ತಮಿಳರಿಗೆ ಸ್ವತಂತ್ರ ಭೂಮಿ ಬೇಕು ಎಂದು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‍ಟಿಟಿಇ) ಎಂಬ ಪ್ರತ್ಯೇಕತಾವಾದಿ ಗುಂಪೊಂದು ಹುಟ್ಟಿಕೊಂಡಿತ್ತು. 1970ರಲ್ಲಿ ವೇಲುಪಿಳ್ಳೈ ಪ್ರಭಾಕರನ್ ಇದನ್ನು ಸ್ಥಾಪಿಸಿ ಪ್ರತ್ಯೇಕ ಭೂಮಿಗಾಗಿ ಹೋರಾಟ ಮಾಡುತ್ತಿದ್ದರು. ಆದರೆ 2009ರ ಮೇನಲ್ಲಿ ಶ್ರೀಲಂಕಾದ ಸಶಸ್ತ್ರ ಪಡೆಗಳು ಅವರ ಮೇಲೆ ದಾಳಿ ಮಾಡಿದ್ದರು. ಅಂದು ಲಕ್ಷಾಂತರ ತಮಿಳಿಗರು ಅಸುನೀಗಿದ್ದರು.

  • ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ವಿಜಯ್ ಸೇತುಪತಿ

    ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ವಿಜಯ್ ಸೇತುಪತಿ

    ಚೆನ್ನೈ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬಯೋಪಿಕ್‍ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ.

    ಕ್ರೀಡಾರಂಗದಲ್ಲಿ ಈಗಾಗಲೇ ಭಾಗ್ ಮಿಲ್ಕಾ ಭಾಗ್, ಮೇರಿ ಕೋಮ್, ಎಂಎಸ್ ಧೋನಿ, ಅಜರ್, ದಂಗಲ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಸಿನಿಮಾಗಳು ನಿರ್ಮಾಣವಾಗಿದೆ. ಸದ್ಯ ಇದೇ ಸಾಲಿಗೆ ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಜೀವನ ಆಧರಿಸಿ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಲಾಗುತ್ತಿದೆ. ಸದ್ಯ ಈ ಕುರಿತ ಅಧಿಕೃತ ಪ್ರಕಟನೆಯೂ ಹೊರಬಿದ್ದಿದೆ.

    ಮುರಳೀಧರನ್ ಅವರ ಬಯೋಪಿಕ್ ಸಿನಿಮಾವನ್ನು ಮೂವಿ ಟ್ರೈನ್ ಮೋಷನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಎಂಎಸ್ ಶ್ರೀಪತಿ ನಿರ್ದೇಶನ ಮಾಡುತ್ತಿದ್ದಾರೆ. ಈ ಬಯೋಪಿಕ್ ಸಿನಿಮಾಗೆ ‘800’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಡಿಸೆಂಬರ್ ಅಂತ್ಯ ವೇಳೆಗೆ ಚಿತ್ರದ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ.

    Muthiah Muralidara

    ಸಿನಿಮಾದ ಲೀಡ್ ರೋಲ್‍ನಲ್ಲಿ ನಟಿಸಲಿರುವ ವಿಜಯ್ ಸೇತುಪತಿ ಈಗಾಗಲೇ ಮುರಳೀಧರನ್ ಅವರ ಬೌಲಿಂಗ್ ಶೈಲಿಯನ್ನು ಕಲಿಯುವ ತರಬೇತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈಗಾಗಲೇ ಸಾಕಷ್ಟು ವಿಶಿಷ್ಟ ಪಾತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿರುವ ವಿಜಯ್ ಸೇತುಪತಿ, ಮುರಳೀಧರನ್ ಪಾತ್ರದಲ್ಲಿ ಹೇಗೆ ಕಾಣಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

    ಸದ್ಯ ವಿಜಯ್ ಸೇತುಪತಿ ನಟಿಸಿರುವ ಹೊಸ ಸಿನಿಮಾ ‘ಕಾ ಪೇ ರಣಸಿಂಗಂ’ ಸಿನಿಮಾ ಅಕ್ಟೋಬರ್ 2ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಸದ್ಯ ಈ ಸಿನಿಮಾ ಅಕ್ಟೋಬರ್ 16 ರಂದು ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ಇತ್ತ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿರುವ ಮುತ್ತಯ್ಯ ಮುರಳೀಧರನ್, ಟೆಸ್ಟ್ ಕ್ರಿಕೆಟ್‍ನಲ್ಲಿ 800 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದರು. ಏಕದಿನ ಕ್ರಿಕೆಟ್‍ನಲ್ಲಿ 534 ವಿಕೆಟ್ ಪಡೆದಿದ್ದ ಅವರು, 2011ರಲ್ಲಿ ವಿಶ್ವಕಪ್ ಫೈನಲ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಉಳಿದಂತೆ ಮುರಳೀಧರನ್ 2015ರಿಂದಲೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ವಿಜಯ್ ಸೇತುಪತಿ ಜಾಗಕ್ಕೆ ಧನಂಜಯ್?

    ವಿಜಯ್ ಸೇತುಪತಿ ಜಾಗಕ್ಕೆ ಧನಂಜಯ್?

    ಬೆಂಗಳೂರು: ಡಾಲಿ ಖ್ಯಾತಿಯ ಧನಂಜಯ್ ಮತ್ತೊಮ್ಮೆ ಟಾಲಿವುಡ್‍ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗಿದ್ದು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಇನ್ನೊಂದು ಅಚ್ಚರಿಯ ಪಾತ್ರವೆಂದರೆ ತಮಿಳಿನ ವಿಜಯ್ ಸೇತುಪತಿಯವರ ಜಾಗಕ್ಕೆ ಡಾಲಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಹಿಂದೆ ಕನ್ನಡದ ಭೈರವಗೀತ ಚಿತ್ರದಲ್ಲಿ ಧನಂಜಯ್ ಅಭಿನಯಿಸಿದ್ದರು, ಅದು ತೆಲುಗಿಗೂ ಡಬ್ ಆಗಿತ್ತು. ಇದೀಗ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

    dhananjaya ka 27890578 331557504018594 7060367382069379072 n

    ಟಾಲಿವುಡ್‍ನ ಬಹುನಿರೀಕ್ಷಿತ ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈ ಮೂಲಕ ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬರುತ್ತಿರುವ ಮಾಹಿತಿ ಪ್ರಕಾರ ಪುಷ್ಪ ಸಿನಿಮಾದಿಂದ ವಿಜಯ್ ಸೇತುಪತಿ ಹೊರ ನಡೆದಿದ್ದಾರಂತೆ. ಇದಕ್ಕೆ ಸೂಕ್ತ ಕಾರಣವನ್ನೂ ಸೇತುಪತಿ ನೀಡಿದ್ದಾರಂತೆ. ಸಿನಿಮಾ ಬಹುಭಾಷೆಯಲ್ಲಿ ತಯಾರಾಗುತ್ತಿರುವುದೇ ವಿಜಯ್ ಸೇತುಪತಿ ಸಿನಿಮಾದಿಂದ ಹೊರ ಬರಲು ಕಾರಣ ಎನ್ನಲಾಗಿದೆ. ಹೌದು ಚಿತ್ರ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ.

    Untitled 3

    ವಿಜಯ್ ಒಪ್ಪಿಕೊಂಡ ನಂತರ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗುತ್ತಿದೆ ಎಂದು ತಿಳಿದಿದೆ. ಹೀಗಾಗಿ ಸಿನಿಮಾದಿಂದ ಹೊರನಡೆದಿದ್ದಾರಂತೆ. ವಿಜಯ್‍ಗೆ ತಮಿಳಿನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲವಂತೆ. ಇದರಿಂದಾಗಿ ಅವರ ತಮಿಳು ಅಭಿಮಾನಿಗಳಿಗಾಗಿ ಬೇಸರವಾಗುತ್ತಂತೆ. ಹೀಗಾಗಿ ವಿಜಯ್ ಪುಷ್ಪ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    EVDuiE1UwAElZub

    ವಿಜಯ್ ಸದ್ಯ ತಮಿಳಿನ ಮಾಸ್ಟರ್ ಸಿನಿಮಾ ರಿಲೀಸ್‍ಗೆ ಎದುರು ನೋಡುತ್ತಿದ್ದು, ಮತ್ತೊಂದೆಡೆ ತಮಿಳು, ತೆಲುಗು ಹಾಗೂ ಹಿಂದಿ ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬ್ಯುಸಿಯಾಗಿದ್ದಾರಂತೆ. ಹೀಗಾಗಿ ಡೇಟ್ ಹೊಂದಾಣಿಕೆಯಾಗುತ್ತಿಲ್ಲವಂತೆ. ಇದಕ್ಕಾಗಿ ಪುಷ್ಪ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.

    dhananjaya ka 26073655 539558749734543 4921170392430673920 n Copy

    ವಿಜಯ್ ಸೇತುಪತಿ ಚಿತ್ರದಿಂದ ಹೊರನಡೆದಿದ್ದರಿಂದ ಆ ಜಾಗಕ್ಕೆ ಕನ್ನಡದ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಡಾಲಿಗೆ ಈಗಾಗಲೇ ಚಿತ್ರ ತಂಡದಿಂದ ಆಫರ್ ಬಂದಿದ್ದು, ಲಾಕ್‍ಡೌನ್ ಮುಗಿದ ಬಳಿಕ ಸಿನಿಮಾಗೆ ಸಹಿ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ವಿಜಯ್ ಸೇತುಪತಿ ಪಾತ್ರವನ್ನೇ ನಿರ್ವಹಿಸುತ್ತಾರಾ, ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಖಚಿತವಾಗಿಲ್ಲ. ಡಾಲಿ ಸಹ ಪುಷ್ಪ ತಂಡ ಸೇರಿದರೆ ಕನ್ನಡದ ಮೂವರು ನಟಿಸಿದಂತಾಗುತ್ತದೆ. ಈಗಾಗಲೇ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು, ಕರಾವಳಿಯ ಸುನೀಲ್ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಟ್ಟಿಗೆ ಧನಂಜಯ್ ಸೇರಿದರೆ ಒಟ್ಟು ಮೂವರು ಕನ್ನಡಿಗರು ಚಿತ್ರ ತಂಡ ಸೇರಿದಂತಾಗುತ್ತದೆ.

  • ತಾಯಿಯಾಗ್ತಿದ್ದಾರಾ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ?

    ತಾಯಿಯಾಗ್ತಿದ್ದಾರಾ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ?

    ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಇದೀಗ ಎಲ್ಲ ಚಿತ್ರಗಳಿಂದಲೂ ದೂರ ಉಳಿಯುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಶೂಟಿಂಗ್ ಪ್ರಾರಂಭವಾಗಿದ್ದ ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರದಿಂದಲೂ ಸಮಂತ ಹೊರಗೆ ಬಂದಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಚಿತ್ರಗಳಿಂದ ಯಾಕೆ ದೂರ ಉಳಿಯುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.

    Naga Chaitanya

    ಇದಕ್ಕೆ ಕಾರಣವೂ ಇದ್ದು, ಸಮಂತಾ ಅವರು ಖುಷಿ ವಿಚಾರವನ್ನು ಹೇಳುತ್ತಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಅದೇನಪ್ಪಾ ಖುಷಿ ವಿಚಾರ ಅಂತೀರಾ, ಅದೇ ಅವರು ತಾಯಿಯಾಗುವುದು. ಹೌದು ತಮಿಳಿನ ವಿಘ್ನೇಶ್ ಶಿವನ್ ನಿರ್ದೇಶನದ ಹೊಸ ಚಿತ್ರ `ಕಾತುವಾಕುಲ ರೆಂಡು ಕಾದಲ್’ ಚಿತ್ರದ ಶೂಟಿಂಗ್‍ನಲ್ಲಿ ಸಮಂತಾ ತೊಡಗಿದ್ದರು. ಆದರೆ ಇದ್ದಕ್ಕಿದ್ದಂತೆ ಚಿತ್ರದಿಂದ ಹೊರ ಬಂದಿದ್ದಾರೆ.

    nagachaitanyaoffl 68678794 413728642682031 3558971386176528676 n

    ಈ ಬೆಳವಣಿಗೆ ಬಳಿಕ ಯಾಕೆ ಸಿನಿಮಾದಿಂದ ಹೊರ ಬಂದರು ಎಂಬುದು ಅಧೀಕೃತವಾಗಿರಲಿಲ್ಲ. ಆದರೆ ಮೂಲಗಳ ಪ್ರಕಾರ ಸಮಂತಾ ಅವರೇ ಚಿತ್ರದಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಮಾತ್ರಲ್ಲದೆ ಈ ವರ್ಷ ಅವರು ಯಾವುದೇ ಸಿನಿಮಾಗೆ ಸಹಿ ಹಾಕಿಲ್ಲ. ಸಮಂತಾ ಗರ್ಭಿಣಿಯಾಗಿದ್ದಾರೆ, ಹೀಗಾಗಿಯೇ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಚೆನ್ನೈನಲ್ಲಿ ವಿಘ್ನೇಶ್ ಅವರ ಕಚೇರಿಗೆ ಭೇಟಿ ನೀಡಿದ್ದ ಅವರು, ಹೊಸ ಚಿತ್ರದಿಂದ ಹೊರ ನಡೆಯುತ್ತಿರುವುದಕ್ಕೆ ನಿರ್ದೇಶಕರ ಬಳಿ ಕ್ಷಮೆ ಕೋರಿದ್ದಾರೆ. ಜೊತೆಗೆ ತಾವು ನಿರ್ವಹಿಸಬೇಕಿದ್ದ ಪಾತ್ರಕ್ಕೆ ಕೆಲವು ನಟಿಯರ ಹೆಸರನ್ನೂ ಸಮಂತಾ ಸೂಚಿಸಿದ್ದಾರಂತೆ.

    nagachaitanyaoffl 74804714 961036467609604 2137242741455981844 n

    ನಟ ವಿಜಯ್ ಸೇತುಪತಿ ನಾಯಕರಾಗಿರುವ `ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಯನತಾರಾ ಮತ್ತು ಸಮಂತಾ ನಟಿಸಲಿದ್ದಾರೆ ಎಂದು ಪ್ರೇಮಿಗಳ ದಿನ ನಿರ್ದೇಶಕರೇ ಘೋಷಿಸಿದ್ದರು. ಒಂದೇ ಸಿನಿಮಾದಲ್ಲಿ ಇಬ್ಬರು ಖ್ಯಾತ ನಟಿಯರು ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದರು. ಆದರೆ ಸಮಂತಾ ದಿಢೀರನೇ ಈ ಚಿತ್ರದಿಂದ ಹೊರಬಂದಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

    nagachaitanyaoffl 70848416 692354517945960 5727815059101271628 n

    ಕೌಟುಂಬಿಕ ಜೀವನದತ್ತ ಹೆಚ್ಚು ಒತ್ತು ನೀಡಲು ಸಮಂತಾ ಈ ನಿರ್ಧಾರ ತಳೆದಿರಬಹುದು ಎನ್ನಲಾಗಿದೆ. ಸಮಂತಾ 2017ರ ಅಕ್ಟೋಬರ್‍ನಲ್ಲಿ ನಟ ನಾಗಚೈತನ್ಯ ಜೊತೆಗೆ ಗೋವಾದಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎರಡು ವರ್ಷ ಕಳೆದರೂ ತಾಯಿಯಾಗುವ ಕುರಿತು ಸುಳಿವು ನೀಡಿಲ್ಲ. `ಸಮಂತಾ ತಾಯ್ತನದ ಸುಖ ಅನುಭವಿಸುವುದು ಯಾವಾಗ?’ ಎಂದು ಕಳೆದ ವರ್ಷ ಅವರ ಅಭಿಮಾನಿಗಳು ಪ್ರಶ್ನಿಸಿದ್ದರು. ನಂತರ ಈ ಕುರಿತು ಉತ್ತರಿಸಿದ್ದ ಸಮಂತಾ, `2022ರ ಆಗಸ್ಟ್ 7ರಂದು ಬೆಳಿಗ್ಗೆ 7ಗಂಟೆಗೆ ನನ್ನ ಮಗುವಿಗೆ ತಾಯಿಯಾಗುತ್ತೇನೆ’ ಎಂದು ದಿನಾಂಕವನ್ನೇ ಘೋಷಿಸಿದ್ದರು. ಈ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದರು.

  • ಸೈರಾದಲ್ಲಿ ಕಿಚ್ಚ ಸುದೀಪ್ ಅಬ್ಬರ ನೋಡಿ!

    ಸೈರಾದಲ್ಲಿ ಕಿಚ್ಚ ಸುದೀಪ್ ಅಬ್ಬರ ನೋಡಿ!

    – ಕನ್ನಡ ಟ್ರೇಲರಲ್ಲಿ ಮೊಳಗಿತು ಸ್ವಾತಂತ್ರ್ಯ ಸಂಗ್ರಾಮದ ರಣಕಹಳೆ!

    ಬೆಂಗಳೂರು: ಕೇವಲ ದಕ್ಷಿಣ ಭಾರತ ಮಾತ್ರವಲ್ಲ; ಭಾರತೀಯ ಸಿನಿ ಪ್ರೇಕ್ಷಕರೆಲ್ಲ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರೋ ಚಿತ್ರ ಸೈರಾ ನರಸಿಂಹ ರೆಡ್ಡಿ. ಏಕಕಾಲದಲ್ಲಿಯೇ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿರೋ ಈ ಚಿತ್ರದ ಟ್ರೇಲರ್ ಇಂದು ಕನ್ನಡದಲ್ಲಿಯೂ ಬಿಡುಗಡೆಯಾಗಿದೆ. `ನರಸಿಂಹ ರೆಡ್ಡಿ ಸಾಮಾನ್ಯನಲ್ಲ. ಅವನು ಇತಿಹಾಸವನ್ನು ಸೃಷ್ಟಿಸಲು ಹೊರಟವನು. ಅವನೊಬ್ಬ ಯೋಗಿ. ಅವನೊಬ್ಬ ಯೋಧ. ಅವನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂಬ ಖಡಕ್ ಹಿನ್ನೆಲೆ ಧ್ವನಿಯೊಂದಿಗೆ ಬಿಚ್ಚಿಕೊಳ್ಳೋ ಸೈರಾ ಟ್ರೇಲರ್ ಮೇಕಿಂಗ್ ಮೂಲಕ, ಪಾತ್ರಗಳ ಅಬ್ಬರದ ಲಕ್ಷಣಗಳ ಮೂಲಕ ಕನ್ನಡದ ಪ್ರೇಕ್ಷಕರನ್ನೆಲ್ಲ ಥ್ರಿಲ್ ಆಗುವಂತೆ ಮಾಡಿದೆ.

    ಈ ಕಥೆ ಬ್ರಿಟಿಷರ ವಿರುದ್ಧ ನಡೆದ ಸಂಗ್ರಾಮದ ಕಥೆಯನ್ನಾಧರಿಸಿದೆ. ಮೆಗಾ ಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿಯಾಗಿ ದೇಶ ಭಕ್ತಿಯನ್ನು ನರನಾಡಿಗಳಲ್ಲಿಯೂ ತುಂಬಿಕೊಂಡಿರೋ ಪಾತ್ರದ ಮೂಲಕ ಅಬ್ಬರಿಸಿದ್ದಾರೆ. ಈ ಟ್ರೇಲರ್ ಮಾತ್ರವಲ್ಲದೇ ಇಡೀ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಲು ಸುದೀಪ್ ಅದರಲ್ಲೊಂದು ಪಾತ್ರವನ್ನು ನಿರ್ವಹಿಸಿರೋದೂ ಕಾರಣ. ಅವುಕು ಪ್ರಾಂತ್ಯದ ರಾಜನಾಗಿ ಸುದೀಪ್ ಇಲ್ಲಿ ಸೈರಾ ನರಸಿಂಹ ರೆಡ್ಡಿಗೆ ಸಾಥ್ ನೀಡಿದ್ದಾರೆ. ಅವರ ಪಾತ್ರದ ಚಹರೆಗಳೂ ಕೂಡಾ ಈ ಟ್ರೇಲರ್‍ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ.

    Sye Raa Sudeep A

    ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟನಟಿಯರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಅಮಿತಾಭ್ ಬಚ್ಚನ್ ವೀರ ಸೇನಾನಿ ಸೈರಾ ನರಸಿಂಹ ರೆಡ್ಡಿಯ ಗುರು ಗೋಸಾಯಿ ವೆಂಕಣ್ಣನಾಗಿ, ಶಿಷ್ಯನನ್ನು ಬ್ರಿಟೀಷರ ವಿರುದ್ಧ ತಿರುಗಿ ಬಿದ್ದು ಸೆಣಸಲು ಪ್ರೋತ್ಸಾಹಿಸೋ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಸಿದ್ದಮ್ಮನ ಪಾತ್ರದಲ್ಲಿ ನಯನತಾರಾ, ಲಕ್ಷ್ಮಿಯ ಪಾತ್ರದಲ್ಲಿ ತಮನ್ನಾ, ರಾಜಪಾಂಡಿಯಾಗಿ ವಿಜಯ್ ಸೇತುಪತಿ, ವೀರರೆಡ್ಡಿಯಾಗಿ ಜಗಪತಿ ಬಾಬು ನಟಿಸಿದ್ದಾರೆ. ಈ ಎಲ್ಲ ಪಾತ್ರಗಳ ಪರಿಚಯವೂ ಈ ಟ್ರೇಲರ್ ಮೂಲಕವೇ ಆಗಿದೆ. ವಿಶೇಷವಾಗಿ ಕಿಚ್ಚ ಸುದೀಪ್ ಪಾತ್ರದ ಕನ್ನಡದ ಡೈಲಾಗ್ ಮೂಲಕವೇ ಸೈರಾ ಚಿತ್ರ ಕನ್ನಡಿಗರನ್ನು ಮತ್ತಷ್ಟು ಸೆಳೆದುಕೊಂಡಿದೆ.

    SAIRA 4

    ಈ ಟ್ರೇಲರ್ ನಲ್ಲಿ ಪ್ರಧಾನವಾಗಿ ಕಾಣಿಸಿರೋದು ಮೇಕಿಂಗ್‍ನ ಅಬ್ಬರ. ಅದ್ಭುತವೆಂಬಂಥಾ ಮೇಕಿಂಗ್, ದೃಷ್ಯಾವಳಿಗಳೇ ಒಟ್ಟಾರೆಯಾಗಿ ಈ ಸಿನಿಮಾ ಮೂಡಿಬಂದಿರೋ ರೀತಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಸೈರಾ ನರಸಿಂಹ ರೆಡ್ಡಿ ಕನ್ನಡಿಗರನ್ನು ಸೆಳೆದಿರೋದಕ್ಕೆ ಮತ್ತೊಂದು ಪ್ರಧಾನ ಕಾರಣವೂ ಇದೆ. ಅದು ಈ ಸಿನಿಮಾದಲ್ಲಿ ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಕೂಡಾ ಪ್ರಮುಖ ಭಾಗವಾಗಿರೋದು. ಲಹರಿ ಸಂಸ್ಥೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಹೆಗ್ಗಳಿಕೆ ಹೊಂದಿರುವಂಥಾದ್ದು. ಈಗಾಗಲೇ ದಕ್ಷಿಣ ಭಾರತೀಯ ದೊಡ್ಡ ಚಿತ್ರಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿತ್ತು. ಆದರೀಗ ಸೈರಾ ನರಸಿಂಹ ರೆಡ್ಡಿಯ ಎಲ್ಲ ಭಾಷೆಗಳ ಆಡಿಯೋ ಹಕ್ಕುಗಳನ್ನೂ ಲಹರಿ ಸಂಸ್ಥೆ ಪಡೆದುಕೊಂಡಿದ್ದು ಈ ಮೂಲಕ ಈ ಬಹುನಿರೀಕ್ಷಿತ ಚಿತ್ರದ ಭಾಗವಾಗಿದೆ.